ಸಮಾಜದ ನೋವಿಗೆ ಸ್ಪಂದಿಸುವುದು ಎಲ್ಲರ ಕರ್ತವ್ಯ: ರಾಜಗೊಳಿ
Team Udayavani, Jul 23, 2019, 5:20 AM IST
ಮಡಿಕೇರಿ: 2018ರ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭ ಸಂಕಷ್ಟಕ್ಕೀಡಾದ ಕುಟುಂಬದ ವಿದ್ಯಾರ್ಥಿಗಳಿಗೆ ಕೊಡಗು ಸೇವಾ ಭಾರತಿ ಹಾಗೂ ಬೆಂಗಳೂರಿನ ಉತ್ತರ ಕರ್ನಾಟಕ ಸ್ನೇಹ ಲೋಕ ಸಂಸ್ಥೆ ವತಿಯಿಂದ ವಿದ್ಯಾನಿಧಿ ಸಹಾಯಧನವನ್ನು ವಿತರಿಸಲಾಯಿತು.
ಸೇವಾ ಭಾರತಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಕರ್ನಾಟಕ ಸ್ನೇಹ ಲೋಕ ಸಂಸ್ಥೆಯ ಖಜಾಂಚಿ ಪ್ರಕಾಶ್ ಸಿ. ರಾಜಗೊಳಿ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಿಸಿ ದರು. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ದುರಂತ ಸಂಭವಿಸಿದ ಕೂಡಲೇ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಭಾಗದ ಜನರಿಂದ ಧನ ಸಂಗ್ರಹ ಮಾಡಿ ಶಿಕ್ಷಣಕ್ಕೆ ಆಧ್ಯತೆ ಕೊಟ್ಟು ವಿತರಿಸುವ ಯೋಜನೆಯಿತ್ತು. ಆದರೆ ಇಲ್ಲಿ ಬೇರೆ ಬೇರೆ ಸಂಘ – ಸಂಸ್ಥೆಗಳು ಆ ಸಂದರ್ಭ ವಿತರಿಸಿದ ಪರಿಣಾಮ ನಮ್ಮ ಸಂಸ್ಥೆಯು ಇಲ್ಲಿನ ಸೇವಾ ಭಾರತಿ ಸಂಸ್ಥೆಯ ಸಹಯೋಗದೊಂದಿಗೆ ಎಲ್ಲಾ ವಿದ್ಯಾರ್ಥಿಗಳ ಮನೆಯ ಪರಿಸ್ಥಿಯನ್ನು ಅವಲೋಕಿಸಿ ಇಂದು ವಿತರಣೆ ಮಾಡುತ್ತಿದ್ದೇವೆ. ಸಮಾಜದ ಹಣವನ್ನು ಪ್ರಾಮಾಣಿಕತೆಯಿಂದ ಇಂದು ಸಮಾಜದ ಬಂಧುಗಳಿಗೆ ತಲುಪಿಸುವ ಕೆಲಸವನ್ನು ಮಾತ್ರ ನಮ್ಮ ಸಂಸ್ಥೆ ಮಾಡುತ್ತಿದೆ. ಸಮಾಜದ ನೋವಿಗೆ ಸ್ಪಂದಿಸುವುದು ಎಲ್ಲರ ಕರ್ತವ್ಯ ಎಂದರು.
ಸೇವಾ ಭಾರತಿ ಸಂಸ್ಥೆಯ ಉಪಾಧ್ಯಕ್ಷ ಮಹೇಶ್‌ಕುಮಾರ್ ಸ್ವಾಗತಿಸಿ, ಮಾತನಾಡಿ ಜಿಲ್ಲೆಯಲ್ಲಿ 2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ತಕ್ಷಣ ಇಡೀ ಸಮಾಜ ಜಿಲ್ಲೆಯ ಜನರ ನೋವಿಗೆ ಸ್ಪಂದಿಸಿದೆ. ಸೇವಾ ಭಾರತಿ ಸಂಸ್ಥೆಯು ಪ್ರಕೃತಿ ವಿಕೋಪ ಸಂಭವಿಸಿದ ದಿನದಿಂದಲೇ ಸೇವೆಯಲ್ಲಿ ತೊಡಗಿದೆ. ಸ,,ತ್ರಸ್ಥರು ಧೈರ್ಯ ಕಳೆದುಕೊಳ್ಳದೆ ಮುಂದಿನ ದಿನಗಳಲ್ಲಿ ಆತ್ಮವಿಶ್ವಾಸದಿಂದ ಜೀವನ ಸಾಗಿಸುವಂತೆ ಸಲಹೆ ನೀಡಿದರು.
ಮದೆ, ಮೊಣ್ಣಂಗೇರಿ, ಕಾಲೂರು, ಎಮ್ಮೆತ್ತಾಳು, ಮೇಘತ್ತಾಳು, ಹೊದಕಾನ, ಕಿರಗಂದೂರು ಗ್ರಾಮಗಳ ಪ್ರಕೃತಿ ವಿಕೋಪ ಸಂಕಷ್ಟಕ್ಕೆ ಒಳಗಾದ 30 ಮಂದಿ ವಿದ್ಯಾರ್ಥಿಗಳಿಗೆ ಈ ಸಂದರ್ಭ ವಿದ್ಯಾನಿಧಿ ಸಹಾಯಧನವನ್ನು ವಿತರಿಸಲಾಯಿತು.
ಸಂಸ್ಥೆ ಟ್ರಸ್ಟಿ ಕುಮಾರ್ ಹಂದೂರ್, ನಂದೀಶ್ ಹಂದೂರು,ಗ್ರಾ.ಪಂ ಸದಸ್ಯ ಧನಂಜಯ,ಉಪಸ್ಥಿತರಿದ್ದರು. ಸೆಚಂದ್ರ ಉಡೋತ್ ಕಾರ್ಯಕ್ರಮ ನಿರೂಪಿಸಿದರೆ, ಖಜಾಂಚಿ ತಮ್ಮಪ್ಪ ವಂದಿಸಿದರು.
“ಆತ್ಮವಿಶ್ವಾಸವಿರಲಿ’
ಜಿಲ್ಲೆಯಲ್ಲಿ 2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ತಕ್ಷಣ ಇಡೀ ಸಮಾಜ ಜಿಲ್ಲೆಯ ಜನರ ನೋವಿಗೆ ಸ್ಪಂದಿಸಿದೆ. ಸೇವಾ ಭಾರತಿ ಸಂಸ್ಥೆಯು ಪ್ರಕೃತಿ ವಿಕೋಪ ಸಂಭವಿಸಿದ ದಿನದಿಂದಲೇ ಸೇವೆ ಯಲ್ಲಿ ತೊಡಗಿದೆ. ನಮ್ಮ ಇತಿಮಿತಿ ಯೊಂದಿಗೆ ಸೇವೆ ಮಾಡುತ್ತಿದ್ದು, ನಿರಾಶ್ರಿತರು ಧೈರ್ಯ ಕಳೆದುಕೊಳ್ಳದೆ ಮುಂದಿನ ದಿನಗಳಲ್ಲಿ ಆತ್ಮವಿಶ್ವಾಸ ದಿಂದ ಜೀವನ ಸಾಗಿಸು ವಂತೆ ಮಹೇಶ್ ಕುಮಾರ್ ಸಲಹೆ ನೀಡಿದರು.
ವಿವೇಕಾನಂದ ವಿದ್ಯಾ ವರ್ಧಕ ಸಂಘದ ವಿವಿಧ ವಿದ್ಯಾ ಸಂಸ್ಥೆಯಲ್ಲಿ ಜಿಲ್ಲೆಯ ಪ್ರಕೃತಿ ವಿಕೋಪ ನಿರಾಶ್ರೀತ 45 ವಿದ್ಯಾರ್ಥಿ ಗಳು ಸೇವಾ ಭಾರತಿ ಸಂಸ್ಥೆಯ ಸಹಯೋಗ ದೊಂದಿಗೆ ವಿದ್ಯಾಭ್ಯಾಸ ಮಾಡುತ್ತಿರು ವುದನ್ನು ಮಹೇಶ್‌ಕುಮಾರ್ ನೆನಪಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.