ಪತ್ರಕರ್ತರ ಕ್ರಿಕೆಟ್ ಕಪ್ : ವಿರಾಜಪೇಟೆ ಸೌತ್ ಟೈಗರ್ಸ್‌ಗೆ ಗೆಲುವು
Team Udayavani, May 15, 2019, 6:10 AM IST
ಮಡಿಕೇರಿ : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ವಿರಾಜಪೇಟೆ ಸೌತ್ ಟೈಗರ್ಸ್ ವಿನ್ನರ್ಸ್ ಪ್ರಶಸ್ತಿ ಗಳಿಸಿತು.
ಮಡಿಕೇರಿ ಮೀಡಿಯಾ ತಂಡ ರನ್ನರ್ ಅಪ್ ಪಡೆದರೆ, ಮಡಿಕೇರಿಯ ಪ್ರಿಂಟ್ ಪಂಟರ್ಸ್ ತೃತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮಡಿಕೇರಿ ಮೀಡಿಯಾ ಹಾಗೂ ವಿರಾಜಪೇಟೆ ಸೌತ್ ಟೈಗರ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಟೈಗರ್ಸ್ ತಂಡ ಟಾಸ್ ಗೆದ್ದು, ಬ್ಯಾಟಿಂಗ್ ಆಂಯ್ದಕೊಂಡು ನಿಗದಿತ 6 ಓವರ್ ನಲ್ಲಿ 105 ರನ್ ಕಲೆಹಾಕಿತು. ನಂತರ ಬ್ಯಾಟಿಂಗ್ ಮಾಡಿದ ಮಡಿಕೇರಿ ಮೀಡಿಯಾ 62 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸಮಾರೋಪ ಸಮಾರಂಭ
ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ರವಿವಾರ ಸಂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಫೀ| ಮಾ|ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಡಾ| ಟಿ.ಡಿ ತಿಮ್ಮಯ್ಯ ಮಾತನಾಡಿ, ಕ್ರೀಡೆ ಮಾನವನ ಬದುಕಿನ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೈಹಿಕ ಹಾಗೂ ಮಾನಸಿಕ ಶಕ್ತಿ ಉತ್ತಮ ವಾಗಿರುತ್ತದೆ ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮತ್ತು ಕರ್ನಾಟಕ ರಾಜ್ಯ ಕನ್ನಡ ಕಲಾ ಬೆಳಕು ಸಂಸ್ಥೆಯ ರಾಜ್ಯಧ್ಯಕ್ಷ ರಾಜು ಮಾತನಾಡಿದರು. ಕೊಡಗು ಪ್ರಸ್ ಕ್ಲಬ್ ಅಧ್ಯಕ್ಷ ಅಜ್ಜ ಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಂಘಟನೆಯ ಮೂಲಕ ನಮ್ಮ ಒಗ್ಗಟ್ಟು ಪ್ರದರ್ಶನ ಮಾಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ ಪತ್ರಕರ್ತರು ಕ್ರೀಡೆಯ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದು, ಇದು ಮುಂದುವರಿಯಬೇಕು ಎಂದರು.
ಉದ್ಯಮಿ ಶರಿನ್, ಸೋ³ರ್ಟ್ಸ್ ವಲ್ಡ್ ನ ಅನ್ಸಾಫ್, ಹರೀಶ್, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಚಂಗಪ್ಪ, ಕ್ರಿಯೇಟಿವ್‌ನ ಖಲೀಲ್, ಕರ್ನಾಟಕ ರಾಜ್ಯ ಕನ್ನಡ ಕಲಾ ಬೆಳಕು ಸಂಸ್ಥೆಯ ಉಪಾಧ್ಯಕ್ಷ ನಾಗೇಶ್, ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.