ಜು. 9: ಯಕ್ಷಗಾನ ತರಬೇತಿ ಶಿಬಿರ ಸಮಾರೋಪ, ಯಕ್ಷಗಾನ ಪ್ರದರ್ಶನ


Team Udayavani, Jul 7, 2017, 3:45 AM IST

yakshagana-tarabeti.jpg

ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನ ಅಂಗವಾಗಿ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ  ಒಂದು ತಿಂಗಳ ಕಾಲ ವ್ಯವಸ್ಥಿತವಾಗಿ ಎಡನೀರು ಮಠದ ಪರಿಸರದಲ್ಲಿ  ನಡೆದ ಯಕ್ಷಗಾನ ತರಬೇತಿ ಶಿಬಿರದ ಸಮಾ ರೋಪ ಸಮಾರಂಭ ಜು. 9ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಶಿಬಿರಾರ್ಥಿಗಳ ರಂಗ ಪ್ರವೇಶ ಜು. 8ರಂದು  ಅಪರಾಹ್ನ 2 ಗಂಟೆಯಿಂದ ಕಾಸರಗೊಡು ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ಜರಗಲಿದೆ. 

ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಪದವಿಪೂರ್ವ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗಿನ ಮೂವತ್ತಮೂರು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಯಕ್ಷಗಾನ ಕಲಿಕೆಯ ಜತೆಗೆ ನೈತಿಕ ಮತ್ತು ಮಾನವೀಯ ಮೌಲ್ಯ, ಸಮಯ ಪರಿಪಾಲನೆ, ವ್ಯಕ್ತಿತ್ವ ವಿಕಾಸ ಈ ಮುಂತಾದ  ವಿಷಯಗಳನ್ನು ಶಿಬಿರದಲ್ಲಿ ಅಳವಡಿಸಲಾಗಿತ್ತು. ಬದುಕಿಗೆ ಅಗತ್ಯವಾದ ಏಕಾಗ್ರತೆ, ವೈಚಾರಿಕ ದೃಷ್ಟಿಕೋನ, ಶೋಧನಾ ಪ್ರಜ್ಞೆ, ನಾಯಕತ್ವಗುಣ, ಅಧ್ಯಯನಶೀಲತೆ ಇತ್ಯಾದಿಗಳ ಮಹತ್ವವನ್ನು  ಶಿಬಿರದ ಮೂಲಕ ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಯಿತು.

ಕರ್ನಾಟಕದ ವಿವಿಧ  ಸಂಶೋಧನ ಕೇಂದ್ರಗಳಿಗೆ  ಶಿಬಿರಾರ್ಥಿಗಳು ಭೇಟಿ ನೀಡುವುದರ ಮೂಲಕ ಯಕ್ಷಗಾನದ ಕುರಿತು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಹಲವು ವಿಷಯಗಳನ್ನು, ಅನುಭವಗಳನ್ನು ಪಡೆದುಕೊಂಡರು. ಶಿಬಿರವು ಮಲೆಯಾಳ ಮತ್ತು ಕನ್ನಡ ನಾಡಿನ ಕಲಾವಿದರ, ಸಂಶೋಧಕರ, ವಿದ್ವಾಂಸರ, ಸಾಹಿತಿಗಳ, ವಿಮರ್ಶಕರ  ವಿಶೇಷ ಮನ್ನಣೆಗೆ ಪಾತ್ರವಾಗಿರುವುದು ಶಿಬಿರಕ್ಕೆ ಸಂದರ್ಶಿಸಿದ ವ್ಯಕ್ತಿಗಳ ಬಹುದೊಡ್ಡ ಸಂಖ್ಯೆಯಿಂದಲೇ ರುಜುವಾತಾಗಿದೆ. 

33 ದಿನಗಳ ವ್ಯವಸ್ಥಿತ ಶಿಬಿರ 
ಶಿಬಿರ ಪ್ರಾರಂಭವಾದಂದಿನಿಂದ ಮುಗಿಯುವ ವರೆಗೆ ಸಂದರ್ಶನ ನೀಡಿದವರ ಸಂಖ್ಯೆ ಸಾವಿರವನ್ನು ದಾಟಿದೆ. ಮಲೆಯಾಳ ಮತ್ತು  ಕನ್ನಡ ನಾಡಿನ ಪ್ರಮುಖ ದೃಶ್ಯ – ಮುದ್ರಣ  ಮಾಧ್ಯಮಗಳು, ಆಂಗ್ಲ ಪತ್ರಿಕೆಗಳು ಶಿಬಿರದ ಮಹತ್ವವನ್ನು ನಾಡಿನ ಮೂಲೆ ಮೂಲೆಗೆ ತಲುಪಿಸಿವೆ. ರಾಜ್ಯದಲ್ಲಿಯೇ ಮೊತ್ತಮೊದಲ ಬಾರಿಗೆ ಮೂವತ್ತಮೂರು ದಿನಗಳ ಸುದೀರ್ಘ‌ ಕಾಲ ಶೆ„ಕ್ಷಣಿಕವಾಗಿಯೂ ವ್ಯವಸ್ಥಿತವಾಗಿಯೂ ನಡೆದ ಶಿಬಿರವು ಚಾರಿತ್ರಿಕ ದಾಖಲೆಯನ್ನು ಸೃಷ್ಟಿಸಿತು. ಶಾಸಕರು  ಸೇರಿದಂತೆ ಜನಪ್ರತಿನಿಧಿಗಳು, ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಇತರ ಅಧಿಕಾರಿಗಳು ಶಿಬಿರಕ್ಕೆ ತಾವಾಗಿ ಬಂದು ಶ್ಲಾಘಿಸಿದರು.

ಎಡನೀರು ಶ್ರೀಗಳ ಪ್ರೋತ್ಸಾಹ
2017 ಜೂನ್‌ 1ರಂದು  ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ  ದಿವ್ಯಹಸ್ತದಿಂದ  ಉದ್ಘಾಟನೆ ಗೊಂಡ ಶಿಬಿರವು ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಮುಂದುವರಿಯಿತು. ನಾಡಿನ ಜನರ ಮಾದರಿ ಶಿಬಿರವಾಗಿ ಮಾರ್ಪಟ್ಟಿತು. ಬೆಳಿಗ್ಗೆ 9.30ರಿಂದ ಪ್ರಾರ್ಥನೆ, ಯೋಗದಿಂದ ಪ್ರಾರಂಭವಾಗಿ ನಾಟ್ಯ, ತಾಳ ತರಬೇತಿಯು ಒಂದು ಗಂಟೆಯ ವರೆಗೆ  ಮುಂದುವರಿ ಯಿತು. ಅಪರಾಹ್ನ 2ರಿಂದ  ಸಂಜೆ 4ರ ತನಕ, ಕೆಲವೊಮ್ಮೆ 6ರ ತನಕವೂ ವಿಶೇಷೋಪನ್ಯಾಸ, ಸಂವಾದ, ಚರ್ಚೆ, ಪ್ರಾತ್ಯಕ್ಷಿಕೆ, ಮಾತುಕತೆ, ತುಲನಾತ್ಮಕ ಪ್ರದರ್ಶನ ಮುಂತಾದವುಗಳನ್ನು ಶಿಬಿರದಲ್ಲಿ ನಡೆಸಲಾಯಿತು. ಅನುಭವಿ ಮತ್ತು ಹಿರಿಯ ಕಲಾವಿದರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು.

ಶಿಬಿರದ  ಬಹತೇಕ ದಿನಗಳಲ್ಲಿ  ರಾತ್ರಿಹೊತ್ತು  ಎಡನೀರು ಮೇಳದ ಆಟ ನಡೆಯುತ್ತಿದ್ದುದರಿಂದ ಶಿಬಿರಾರ್ಥಿಗಳಿಗೆ ರಾಮಾಯಣ, ಮಹಾಬಾರತ ಹಾಗೂ ಭಾಗವತದ ಹಲವು ಯಕ್ಷಗಾನ ಪ್ರಸಂಗಗಳನ್ನು ವೀಕ್ಷಿಸುವಂತಾಯಿತು. 
ಎರಡು ವಿಶೇಷ ತಾಳಮದ್ದಳೆಗಳನ್ನು ಶಿಬಿರಾರ್ಥಿ ಗಳಿಗಾಗಿಯೇ ನಡೆಸಲಾಗಿದೆ. ಆಂಗಿಕ, ಆಹಾರ್ಯ, ವಾಚಿಕ ಮತ್ತು  ಸಾತ್ವಿಕ ಹೀಗೆ ಚತುರ್ವಿಧ ಅಭಿನಯಗಳ ಬಗ್ಗೆ, ಯಕ್ಷಗಾನಕ್ಕೆ ಪೂರಕವಾದ ಇತರ ಭಾರತೀಯ ಕಲೆಗಳ ಬಗ್ಗೆ  ಶಿಬಿರದಲ್ಲಿ ಪ್ರಾತ್ಯಕ್ಷಿಕೆ, ಸಂವಾದ, ಉಪನ್ಯಾಸಗಳು ನಡೆದಿವೆ. ನಾಡಿನ ಪ್ರಸಿದ್ಧ ಯಕ್ಷಗಾನ  ಕಲಾವಿದರಾದ ಸೂರಿಕುಮೇರಿ ಕೆ. ಗೋವಿಂದ ಭಟ್‌,  ಡಾ. ಬಳ್ಳಂಬೆಟ್ಟು ಶ್ರೀಧರ ಭಂಡಾರಿ, ಶ್ರೀಧರ ರಾವ್‌ ಕುಂಬಳೆ, ವಿದ್ವಾನ್‌ ಬಾಬು ರೈ, ಬನ್ನಂಜೆ ಸಂಜೀವ ಸುವರ್ಣ, ಕುರಿಯ ಗಣಪತಿ ಶಾಸ್ತ್ರಿŒ, ಕುಬಣೂರು ಶ್ರೀಧರ ರಾವ್‌, ರತ್ನಾವತಿ ಸಾಲೆತ್ತಡ್ಕ, ದೇವಕಾನ ಕೃಷ್ಣ ಭಟ್‌, ಪ್ರೊ| ಕೋಟೆ ರಾಮ ಭಟ್‌, ವಿದ್ವಾಂಸರಾದ  ಡಾ.ರಾಘವನ್‌ ನಂಬಿಯಾರ್‌, ಡಾ. ಕೆ.ಚಿನ್ನಪ್ಪ ಗೌಡ ಈ ಮುಂತಾದ ಸುಮಾರು  70ಕ್ಕೂ ಮಿಕ್ಕಿ ಕಲಾವಿದರು, ವಿದ್ವಾಂಸರು ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. 

ಹಿರಿಯ, ಅನುಭವಿ ಗುರುಗಳಿಂದ ತರಬೇತಿ
ಜಿಲ್ಲೆಯ ಹಿರಿಯ ಮತ್ತು ಅನುಭವಿ ನಾಟ್ಯಗುರುಗಳಾದ ದಿವಾಣ ಶಿವಶಂಕರ ಭಟ್‌ ಮತ್ತು ಸಬ್ಬಣಕೋಡಿ ರಾಮ ಭಟ್‌ ನಾಟ್ಯ ತರಬೇತಿ ನೀಡಿದ್ದಾರೆ. ಶಿಬಿರದ ಯಶಸ್ಸಿಗಾಗಿ  ಸಂಯೋಜನಾಧಿಕಾರಿ ಡಾ| ರತ್ನಾಕರ ಮಲ್ಲಮೂಲೆ ದುಡಿದಿದ್ದಾರೆ. ಡಾ| ರಾಜೇಶ್‌ ಬೆಜ್ಜಂಗಳ ಸಹಸಂಯೋಜನಾಧಿಾರಿಯಾಗಿ  ಸಹಕರಿಸಿದ್ದಾರೆ. ಶಿಬಿರವು ಕಾಸರಗೋಡಿನ ಇತಿಹಾಸದಲ್ಲಿ ಒಂದು ಚಾರಿತ್ರಿಕ ದಾಖಲೆ ಯಾಗಿದ್ದು, ಕಾಲೇಜಿಗೆ ಮಾತ್ರವಲ್ಲ  ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಉತ್ತಮ ಹೆಸರನ್ನು ತಂದಿದೆ.         

ಸಮಾರೋಪ ಸಮಾರಂಭವನ್ನು ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ಉದ್ಘಾಟಿಸುವರು.  ಕಾಲೇಜು ಪ್ರಾಂಶುಪಾಲ ಡಾ.ಟಿ.ವಿನಯನ್‌ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌, ಕಾಸರಗೋಡು ನಗರಸಭಾಧ್ಯಕ್ಷೆ  ಬೀಫಾತಿಮ ಇಬ್ರಾಹಿಂ, ಕೌನ್ಸಿಲರ್‌ ಸವಿತಾ ಕೆ., ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಕೆ.ಅಂಬುಜಾಕ್ಷನ್‌, ಜಿಲ್ಲಾ ಯೋಜನಾಧಿಾರಿ ಕೆ.ಎಂ.ಸುರೇಶ್‌, ಹಣಕಾಸು ಅಧಿಕಾರಿ ಪಿ.ವಿ.ನಾರಾಯಣನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಮಾರಂಭದಲ್ಲಿ  ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಕುಂಬಳೆ  ಸುಂದರ ರಾವ್‌ ಅವರನ್ನು ಅಭಿನಂದನೆಗೈಯ್ಯುವರು. ನಾಟ್ಯಗುರುಗಳಾದ ದಿವಾಣ ಶಿವಶಂಕರ ಭಟ್‌ ಮತ್ತು ಸಬ್ಬಣಕೋಡಿ ರಾಮ ಭಟ್‌ ಅವರಿಗೆ  ಶಿಬಿರಾರ್ಥಿಗಳಿಂದ ಗುರುವಂದನೆ ನಡೆಯಲಿದೆ. ಕಾಲೇಜು ಉಪಪ್ರಾಂಶುಪಾಲ ಡಾ| ಕೆ.ಕೆ. ಹರಿಕುರುಪ್‌, ಕಣ್ಣೂರು ವಿವಿ ಸಿಂಡಿಕೇಟ್‌ ಸದಸ್ಯ  ಡಾ| ರಾಜು ಎಂ.ಸಿ., ಆಂತರಿಕ ಮೌಲ್ಯಖಾತರಿ ಘಟಕದ ಡಾ| ಜಿಜೋ, ಎಡನೀರು ಮಠದ ವೇಣುಗೋಪಾಲನ್‌ ಇ., ಡಾ| ಕೆ. ಕ‌ಮಲಾಕ್ಷ, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತ ಎಸ್‌., ಶಿಕ್ಷಕೇತರ ಅಧಿಕಾರಿ ಎಂ. ಬಾಲಸುಂದರನ್‌, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಗಂಗಾಧರನ್‌ ಶುಭಾಶಂಸನೆಗೈಯ್ಯುವರು. ಸಂಯೋಜನಾಧಿಕಾರಿ ಡಾ| ರತ್ನಾಕರ ಮಲ್ಲಮೂಲೆ, ಸಹಸಂಚಾಲಕ ಡಾ| ರಾಜೇಶ್‌ ಬೆಜ್ಜಂಗಳ ಉಪಸ್ಥಿತರಿರುವರು.

“ವೀರ ಅಭಿಮನ್ಯು’ ಯಕ್ಷಗಾನ ಬಯಲಾಟ: ಜು. 9ರಂದು  ಅಪರಾಹ್ನ 2 ಗಂಟೆಗೆ  ಪುತ್ತಿಗೆ ರಘುರಾಮ ಹೊಳ್ಳ ನಿರ್ದೇಶನದಲ್ಲಿ ಶಿಬಿರಾರ್ಥಿಗಳು ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆಯಲ್ಲಿ ಅಡೂರು ಲಕ್ಷಿ$¾à ನಾರಾಯಣ ರಾವ್‌, ಮದ್ದಳೆಯಲ್ಲಿ ನೇರೋಳು ಗಣಪತಿ ನಾಯಕ್‌, ಉದಯ ಕಂಬಾರ್‌, ಚಕ್ರತಾಳದಲ್ಲಿ ಶ್ರೀಸ್ಕಂದ ದಿವಾಣ, ಮುಮ್ಮೇಳದಲ್ಲಿ  ರಾಧಾಕೃಷ್ಣ ನಾವಡ, ಮೋಹನ ಶೆಟ್ಟಿ ಬಾಯಾರು, ಹರಿನಾರಾಯಣ ಎಡನೀರು, ಮೋಹನ ಬೆಳ್ಳಿಪ್ಪಾಡಿ, ಬಾಲಕೃಷ್ಣ ಮವ್ವಾರು, ಶಶಿಧರ ಕುಲಾಲ್‌, ಶಬರೀಶ ಮಾನ್ಯ, ಬಾಲಕೃಷ್ಣ ಸೀತಾಂಗೊಳಿ, ಶ್ರೀಸ್ಕಂದ ದಿವಾಣ, ವಿಶ್ವನಾಥ ಎಡನೀರು, ಪ್ರಕಾಶ್‌ ನಾಯ್ಕ ನೀರ್ಚಾಲು, ವಸುಧರ ಹರೀಶ್‌, ಮನೀಶ್‌ ಪಾಟಾಳಿ ಎಡನೀರು, ಮಧುರಾಜ್‌ ಪಾಟಾಳಿ ಎಡನೀರು ಹಾಗೂ ಶಿಬಿರಾರ್ಥಿಗಳು ಭಾಗವಹಿಸುವರು.

ಟಾಪ್ ನ್ಯೂಸ್

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.