ಹತ್ತನೇ ತರಗತಿ ಫಲಿತಾಂಶ ಪ್ರಕಟ: ಕೊಡಗು ಜಿಲ್ಲೆ 22ನೇ ಸ್ಥಾನಕ್ಕೆ ಕುಸಿತ
Team Udayavani, May 2, 2019, 6:24 AM IST
ಮಡಿಕೇರಿ :ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷ 18ನೇ ಸ್ಥಾನದಲ್ಲಿದ್ದ ಕೊಡಗು ಜಿಲ್ಲೆ ಈ ಬಾರಿ 22 ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಗೋಣಿಕೊಪ್ಪಲು ಕಳತ್ಮಾಡ್ ಲಯನ್ಸ್ ಪ್ರೌಢಶಾಲೆಯ ದ್ಯಾರ್ಥಿನಿ ಜಾಗೃತಿ ಸುಬ್ಬಯ್ಯ ಹಾಗೂ ಸೋಮವಾರಪೇಟೆಯ ಸೇಂಟ್ ಜೋಸೆಫ್ ಶಾಲೆಯ ಶ್ರಾವಣಿ 616 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಈ ಬಾರಿ ಶೇ. 78.81 ಫಲಿತಾಂಶ ಗಳಿಸಿರುವ ಕೊಡಗು ಜಿಲ್ಲೆ 2018ರಲ್ಲಿ ಶೇ. 80.68 ರಷ್ಟು ಸಾಧನೆ ಮಾಡಿತ್ತು.
ಪರೀಕ್ಷೆಗೆ ಹಾಜರಾದ ಒಟ್ಟು 6,444 ದ್ಯಾರ್ಥಿಗಳಲ್ಲಿ 5,087 ದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 3,079 ದ್ಯಾರ್ಥಿಗಳಲ್ಲಿ 2,383 ದ್ಯಾರ್ಥಿಗಳು ಹಾಗೂ 3,365 ದ್ಯಾರ್ಥಿನೀಯರಲ್ಲಿ 2705 ದ್ಯಾರ್ಥಿನೀಯರು ಉತ್ತೀರ್ಣರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೋ ಅವರು ಮಾತಿ ನೀಡಿದ್ದಾರೆ.
ಪ್ರಥಮ ನಾಲ್ಕು ಸ್ಥಾನ ಗಳಿಸಿದ ದ್ಯಾರ್ಥಿಗಳು :
ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಎಂ.ಜಾಗೃತಿ ಸುಬ್ಬಯ್ಯ 616, ಸೋಮವಾರಪೇಟೆ ಸಂತ ಜೋಸೆಫರ ಪ್ರೌಢ ಶಾಲೆಯ ಎಂ.ಯು.ಶ್ರಾವಣಿ 616, ಶನಿವಾರಸಂತೆಯ ಸೇಕ್ರೇಡ್ ಹಾರ್ಟ್ ಪ್ರೌಢ ಶಾಲೆಯ ಎ.ಎಚ್.ಕವನ 615, ಬಿ.ಅಪೇûಾ 612, ಚೌಡ್ಲು ಸಾಂಧೀಪನಿ ಪ್ರೌಢ ಶಾಲೆಯ ಎಚ್.ಕೆ.ಚಿನ್ಮು 612, ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಎ.ಅನನ್ಯ 612, ಕುಶಾಲನಗರ ಫಾತಿಮಾ ಪ್ರೌಢ ಶಾಲೆಯ ಡಿ.ಆರ್.ಶಿವಾನಿ ಮತ್ತು ಎನ್.ಡಿ.ರ್ಹಣಿ 612, ಮಡಿಕೇರಿಯ ಸಂತ ಜೋಸೆಫರ ಪ್ರೌಢ ಶಾಲೆಯ ಪಿ.ಎಲ್.ಮೌನ ಮತ್ತು ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಪಿ.ಅನನ್ಯ ಅಕ್ಕಮ್ಮ ಅವರು ತಲಾ 611 ಅಂಕ ಪಡೆದಿದ್ದಾರೆ.
ಒಟ್ಟಾರೆ ತಾಲ್ಲೂಕುವಾರು ಗಮನಿಸಿದಾಗ ರಾಜಪೇಟೆ ತಾಲ್ಲೂಕು ಶೇ.84.64, ಮಡಿಕೇರಿ ತಾಲ್ಲೂಕು ಶೇ.73.85 ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ.68.18 ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾತಿ ನೀಡಿದ್ದಾರೆ.
ಸರ್ಕಾರಿ ಶಾಲೆಗಳ ಫಲಿತಾಂಶ ಶೇ 72.54, ಅನುದಾನಿತ ಶಾಲೆಗಳ ಫಲಿತಾಂಶ ಶೇ 74.28, ಅನುದಾನ ರತ ಶಾಲೆಗಳ ಫಲಿತಾಂಶ ಶೇ 87.64 ಆಗಿದೆ. ಜಿಲ್ಲೆಯಲ್ಲಿ 47 ಸರ್ಕಾರಿ ಪ್ರೌಢಶಾಲೆಗಳಿದ್ದು, 48 ಅನುದಾನಿತ ಶಾಲೆಗಳಿದ್ದರೆ, ಅನುದಾನ ರಹಿತ ಶಾಲೆಗಳ ಸಂಖ್ಯೆ 67 ಆಗಿದೆ. 6,444 ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ 5,087 ಮಂದಿ ತೇರ್ಗಡೆ ಹೊಂದಿದ್ದಾರೆ.
ಹಿನ್ನಡೆಗೆ ಕಾರಣ :
ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭಸಿದ ಅತಿವೃr ಹಾನಿ ಸಂದರ್ಭ ನೀಡಿದ ರಜೆಗಳಿಂದಾಗಿ ಫಲಿತಾಂಶದಲ್ಲಿ ಹಿನ್ನಡೆಯಾಗಿರಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಚ್ಚಾಡೊ ಅಭಿಪ್ರಾಯಪಟ್ಟಿದ್ದಾರೆ.
ಶೇ. 100 ಫಲಿತಾಂಶ
ಜಿಲ್ಲೆಯಲ್ಲಿ ಒಟ್ಟು 20 ಶಾಲೆಗಳು ಶೇಕಡ 100 ಫಲಿತಾಂಶ ಪಡೆದು ಕೊಂಡಿದ್ದು, ಈ ಪೈಕಿ 7 ಸರಕಾರಿ ಶಾಲೆಗಳು, 3 ಅನುದಾನಿತ ಹಾಗೂ 10 ಅನುದಾನ ರತ ಶಾಲೆಗಳು ಸೇರಿವೆ. ಕನ್ನಡ ಮಾದ್ಯಮದಲ್ಲಿ ಶೇಕಡ 69.26 ಹಾಗೂ ಆಂಗ್ಲ ಮಾದ್ಯಮದಲ್ಲಿ ಶೇ.89.05 ಫಲಿತಾಂಶ ದಾಖಲಾಗಿದೆ. ರಾಜಪೇಟೆ ತಾಲೂಕಿನಲ್ಲಿ ಶೇ. 84.64, ಮಡಿಕೇರಿ 73.58 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 68.12ರಷ್ಟು ಫಲಿತಾಂಶ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.