![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 14, 2022, 11:15 PM IST
ಮಡಿಕೇರಿ : ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ನೆಲ್ಯಹುದಿಕೇರಿ ಬರಡಿಯಲ್ಲಿ ರೈಲ್ವೇ ಕಂಬಿಗಳ ಬೇಲಿಯಲ್ಲಿ ಕಾಡಾನೆಯೊಂದು ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.
ಕಾಡಾನೆಗಳ ನುಸುಳುವಿಕೆಯನ್ನು ತಡೆಯಲು ನೆಲ್ಯಹುದಿಕೇರಿ ಬರಡಿ ಭಾಗದಲ್ಲಿ ರೈಲ್ವೇ ಕಂಬಿಗಳ ಬೇಲಿಯನ್ನು ಅಳವಡಿಸಲಾಗಿದೆ. ಇದು ಅವೈಜ್ಞಾನಿಕ ರೂಪದಲ್ಲಿರುವುದರಿಂದ ಗಜಪಡೆ ಗ್ರಾಮಗಳಿಗೆ ಲಗ್ಗೆ ಇಡುವುದನ್ನು ಬಿಟ್ಟಿಲ್ಲ. ಬಲಾಡ್ಯ ಆನೆಗಳು ಮನುಷ್ಯರಂತೆ ಮೇಲಿನಿಂದ ಬೇಲಿ ದಾಟಿದರೆ ಸಣ್ಣ ಆನೆಗಳು ಬೇಲಿಯ ತಳ ಭಾಗದಿಂದ ನುಸುಳಿ ತೋಟಗಳನ್ನು ಸೇರಿಸಿಕೊಳ್ಳುತ್ತವೆ.
ಇದೇ ಮಾದರಿ ಶನಿವಾರ ಕೂಡ ಹೊಳೆಯ ಭಾಗದಿಂದ ಬಂದ ಸಾಧಾರಣ ವಯಸ್ಸಿನ ಕಾಡಾನೆಯೊಂದು ಕಾಫಿ ತೋಟವನ್ನು ಸೇರಲು ಬೇಲಿಯ ಕೆಳಭಾಗದಿಂದ ದಾಟುವ ಪ್ರಯತ್ನ ಮಾಡಿತು. ಆದರೆ ದಾಟಲಾಗದೆ ಮಧ್ಯದಲ್ಲೇ ಸಿಲುಕಿಕೊಂಡು ಪರದಾಡಿತು. ಕೆಲವು ಗಂಟೆಗಳ ಹರಸಾಹಸದಿಂದ ಹೇಗೋ ಬೇಲಿಯಿಂದ ಮುಕ್ತಿ ಹೊಂದಿ ತೋಟ ಸೇರಿಕೊಂಡಿತು.
ಸ್ಥಳದಲ್ಲಿ ಸ್ವಲ್ಪ ಕಾಲ ಆತಂಕ ಸೃಷ್ಟಿಯಾಗಿತ್ತು, ಗ್ರಾಮಸ್ಥರು ಮೊಬೈಲ್‌ಗಳಲ್ಲಿ ದೃಶ್ಯವನ್ನು ಸೆರೆ ಹಿಡಿಯುವ ದೃಶ್ಯ ಕಂಡುಬಂತು.
ಇದನ್ನೂ ಓದಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ಮಹಿಳೆಯ 6.30 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.