ಕೊಡವ ಕೌಟುಂಬಿಕ ಹಾಕಿ ಉತ್ಸವ ಕಲ್ಮಾಡಂಡ ತಂಡ ಚಾಂಪಿಯನ್
Team Udayavani, May 23, 2019, 6:01 AM IST
ಮಡಿಕೇರಿ: ಚೇರಂಬಾಣೆಯ ಬೇಂಗುನಾಡು ಕೊಡವ ಸಮಾಜದ ನ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ನಡೆದ ಮೂರನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ 5-3 ಗೋಲುಗಳ ಅಂತರದಲ್ಲಿ ಕಲ್ಮಾಡಂಡ ತಂಡ ಚೋಕಿರ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಚೇರಂಬಾಣೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಎರಡನೇ ಬಾರಿಗೆ ಕಲ್ಮಾಡಂಡ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಚೋಕಿರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ದಾನಿಗಳಾದ ಐಚೆಟ್ಟಿರ ಕನಿಕೆ ಕಾವೇರಮ್ಮ ಅವರು ಪತಿ ದಿ.ವಸಂತ ಅವರ ಸ್ಮರಣಾರ್ಥ ಪ್ರಥಮ ಬಹುಮಾನ ಮತ್ತು ಶನಿವಾರಸಂತೆಯ ಚಾಮೇರ ಪವನ್ ದೇವಯ್ಯ ಹಾಗೂ ಮೋನಿಕಾ ದೇವಯ್ಯ ದ್ವಿತೀಯ ಬಹುಮಾನ ವಿತರಿಸಿದರು.
ದಾನಿಗಳು ಹಾಗೂ ಕೊಡವ ಸಮಾಜದ ಅಧ್ಯಕ್ಷ ಕುಟ್ಟೇಟಿರ ಕುಜ್ಞಪ್ಪ, ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಪಟ್ಟಮಾಡ ಕುಶಾಲಪ್ಪ, ಕಾರ್ಯದರ್ಶಿ ಬಾಚರಣಿಯಂಡ ದಿನೇಶ್, ಪಟ್ಟಮಾಡ ಕಮಲಾಕ್ಷಿ ಹಾಗೂ ಪದಾಧಿಕಾರಿಗಳು ಬಹುಮಾನ ವಿತರಣಾ ಸಮಾರಂಭದಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.