ಸಂತ್ರಸ್ತರಿಗೆ ಕೊಡವ ಸಾಹಿತ್ಯ ಅಕಾಡೆಮಿ ಸಾಂತ್ವನ


Team Udayavani, Oct 5, 2018, 6:45 AM IST

z-kodava-akademi-2.jpg

ಮಡಿಕೇರಿ: ಮುಂಗಾರಿನ ಭಾರೀ ಮಳೆಯಿಂದ ಸೃಷ್ಟಿಯಾದ ಪ್ರಾಕೃತಿಕ ವಿಕೋಪದಿಂದ ಮನೆಮಠಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ, ಉತ್ತಮ ಬದುಕಿನ ಭರವಸೆಯನ್ನು ತುಂಬುವ ಪ್ರಯತ್ನಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡ ತಂಡ ಮುಂದಾಗಿದ್ದು, ಬಾಳ್ಳೋ ಬಾಳ್ಳೋ ಜಬ್ಬೂಮಿ,ಕೊಡವಾಮೆಕ್‌ ಕಣ್ಣೀರ್‌ ಘೋಷವಾಕ್ಯದೊಂದಿಗೆ ವಿವಿಧ ಪ್ರಾಕೃತಿಕ ವಿಕೋಪದ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ, ನೊಂದವರ ಅಳಲನ್ನು ಆಲಿಸಿ ಸಾಂತ್ವನ ಹೇಳುವ ಕಾರ್ಯ ನಡೆಸಿದೆ.

ಮಹಾತ್ಮಾ ಗಾಂಧಿ ಜಯಂತಿಯಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಮತ್ತು ಅಕಾಡೆಮಿ ಸದಸ್ಯರು ಮಕ್ಕಂದೂರಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಬೆಳಗ್ಗಿನಿಂದ 11 ಗಂಟೆಯವರೆಗೆ ಸ್ವತ್ಛತಾ ಶ್ರಮದಾನ ನಡೆಸಿದರು. ಬಳಿಕ ಹಾನಿ ಪೀಡಿತ ಪ್ರದೇಶಗಳತ್ತ ಸಾಗಿ, ಅಲ್ಲಿನ ಸಂತ್ರಸ್ತರನ್ನು ಖುದ್ದು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದರು.

ಭಾರೀ ಪ್ರಮಾಣದ ಗುಡ್ಡ ಕುಸಿತಕ್ಕೆ ಒಳಗಾದ ಮಕ್ಕಂದೂರು ವ್ಯಾಪ್ತಿಯ ತಂತಿಪಾಲ ಗ್ರಾಮಕ್ಕೆ, ಗ್ರಾಮ    ಪಂಚಾಯತ್‌ ಪಿಡಿಒ ಚಂಗಪ್ಪ ಅವರೊಂದಿಗೆ ಅಕಾಡೆಮಿ ತಂಡ ತೆರಳಿ, ಅಲ್ಲಿನ ಹಾನಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಿ, ಸಂತ್ರಸ್ತರೊಂದಿಗೆ ಮಾತನಾಡಿ, ಸಾಂತ್ವನವನ್ನು ಹೇಳಿತು.

ಕಾಲೂರು ಗ್ರಾಮಕ್ಕೆ ಭೇಟಿ ನೀಡಿದ ಅಕಾಡೆಮಿ ತಂಡದೊಂದಿಗೆ ಅಕಾಡೆಮಿ ಮಾಜಿ ಸದಸ್ಯರು ಹಾಗೂ ಗ್ರಾಮದ ಭಗವತಿ ದೇವಸ್ಥಾನದ ಅರ್ಚಕರಾದ ನಾಗೇಶ್‌ ಕಾಲೂರು ಅವರು ಮಾತನಾಡಿದ್ದಲ್ಲದೆ, ಸಂತ್ರಸ್ತ ಗ್ರಾಮಸ್ಥರಿಗೆ ಅತ್ಯವಶ್ಯವಾಗಿ ಆಗಬೇಕಿರುವ ಮೂಲಭೂತ ಸೌಲಭ್ಯ ಮತ್ತು ಕೆಲಸ ಕಾರ್ಯಗಳ ಬಗ್ಗೆ ಮನವಿಯನ್ನು ಸಲ್ಲಿಸಿದರು.  ಇದಕ್ಕೆ ಸ್ಪಂದಿಸಿದ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮತ್ತು ತಂಡ, ಬೇಡಿಕೆಗಳ ಈಡೇರಿಕೆಗೆ ಸರಕಾರದೊಂದಿಗೆ ಅಕಾಡೆಮಿ ಮಾತುಕತೆ ನಡೆಸುವ ಭರವಸೆಯನ್ನು ನೀಡಿತು.

ನೆರವು ದೊರತಿಲ್ಲ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ತಂತಿಪಾಲ,ಕಾಲೂರು ವಿಭಾಗಗಳಲ್ಲಿನ ಬಹುತೇಕ ಸಂತ್ರಸ್ತರು,ದುರ್ಘ‌ಟನೆ ಸಮಭವಿಸಿದ ಬಳಿಕ ತಮಗೆ ಪ್ರಾಥಮಿಕ ಹಂತದಲ್ಲಿ ದೊರಕಬೇಕಾಗಿದ್ದ ನೆರವು ಸಮರ್ಪಕವಾಗಿ ದೊರತ್ತಿಲ್ಲ. ಸರ್ಕಾರ ಸಂತ್ರಸ್ತರಿಗೆ ಕೊಡಮಾಡಿರುವ 3800 ರೂ. ಪರಿಹಾರ ನಿರಾ]ತರಿಗೆ ಸಮರ್ಪಕವಾಗಿ ದೊರಕಿಲ್ಲವೆಂದು ತಮ್ಮ ಅಳಲು ತೋಡಿಕೊಂಡ ಘಟನೆಯೂ ನಡೆಯಿತು. 

ಅಕಾಡೆಮಿಯ ಮಾಜಿ ಸದಸ್ಯೆ ಮುಕ್ಕಾಟಿರ ತಂಗಮ್ಮ ಅವರನ್ನು ಅಕಾಡೆಮಿ ತಂಡ ಭೇಟಿಯಾಗಿ ಸಾಂತ್ವನ ನುಡಿಯಿತು. ಪ್ರಾಕೃತಿಕ ವಿಕೋಪದಲ್ಲಿ ತಂಗಮ್ಮ ಅವರ ಪತಿ ಸಾಬು ಅವರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ನೊಂದ ತಂಗಮ್ಮ ಅವರಿಗೆ ಬದುಕಿನ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ಅಕಾಡೆಮಿ ತಂಡ ಮಾಡಿತು.
  
ಅಕಾಡೆಮಿ ತಂಡ ಭೇಟಿ ನೀಡಿದ ಗ್ರಾಮೀಣ ಭಾಗಗಳಲ್ಲಿನ ಬಹುತೇಕ ಸಂತ್ರಸ್ತರು, ನಾವು ಮತ್ತೆ ನಮ್ಮ ಗ್ರಾಮಗಳಲ್ಲಿ ವಾಸಿಸಲು ಸಾಧ್ಯವೆ ಎನ್ನುವ ಬಗ್ಗೆ ತಾಂತ್ರಿಕವಾದ ಮಾಹಿತಿಯನ್ನು ಇಲ್ಲಿಯವರೆಗೆ ಆಡಳಿತ ವ್ಯವಸ್ಥೆ ಲಿಖೀತ ರೂಪದಲ್ಲಿ ನೀಡಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ನಾಲ್ಕೆçದು ತಿಂಗಳ ಬಳಿಕ ನಮ್ಮ ಪಾಡೇನು ಎಂದು ನೊಂದು ನುಡಿದ ಪ್ರಸಂಗವೂ ಎದುರಾಯಿತು.ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಗ್ರಾಮೀಣ ಭಾಗಗಳಿಗೆ ಅಕಾಡೆಮಿ ಸದಸ್ಯ ಹಂಚೆಟ್ಟಿರ ಮನು ಮುದ್ದಯ್ಯ ಅವರ ಮುಂದಾಳತ್ವದಲ್ಲಿ ತೆರಳಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತಂಡದಲ್ಲಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರೊಂದಿಗೆ ಸದಸ್ಯರಾದ  ಅಮ್ಮುಣಿಚಂಡ ಪ್ರವೀಣ್‌, ಉಮೇಶ್‌ ಕೇಚಮ್ಮಯ್ಯ, ಬೀಕಚಂಡ ಬೆಳ್ಯಪ್ಪ, ಬೊಳ್ಳಾಜಿರ ಅಯ್ಯಪ್ಪ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಆಂಗೀರ ಕುಸುಮ್‌, ಚಂಗುಲಂಡ ಸೂರಜ್‌, ಸುಳ್ಳಿಮಾಡ ಭವಾನಿ, ಎಚ್‌. ಗಣಪತಿ, ಕುಡಿಯರ ಶಾರ¨ದಾ‌, ಆಪಟ್ಟಿರ ಟಾಟು ಮೊಣ್ಣಪ್ಪ, ಅಜ್ಜಮಾಡ ಕುಶಾಲಪ್ಪ ಅವರಿದ್ದರು.

ಮನೆ ಬೇಕು: ಮಳೆಹಾನಿ ಸಂತ್ರಸ್ತರ ಬೇಡಿಕೆ
ಪ್ರಾಕೃತಿಕ ವಿಕೋಪದಿಂದ ಜರ್ಜರಿತವಾಗಿರುವ ಮೂವತ್ತೂಕ್ಲು, ಶಿರಂಗಳ್ಳಿ ಗ್ರಾಮಗಳಿಗೆ ಅಕಾಡೆಮಿ ತಂಡ ಭೇಟಿ ನೀಡಿದ ಸಂದರ್ಭ, ಗುಡ್ಡ ಕುಸಿತದ ಪ್ರಾಕೃತಿಕ ವಿಕೋಪಗಳಿಂದ ಮಳೆಗಾಲದ ಅವಧಿಯಲ್ಲಿ ಮತ್ತೆ ತಮ್ಮ ಗ್ರಾಮಗಳಲ್ಲಿ ವಾಸಿಸುವುದು ಅಸಾಧ್ಯವೆಂದು ಸಂತ್ರಸ್ತರು ಅಳಲು ತೋಡಿಕೊಂಡರು. ತಮಗೆ ಮಾದಾಪುರದ ತೋಟಗಾರಿಕೆ‌ ಜಾಗದಲ್ಲಿ ನಿವೇಶನ ಮತ್ತು ಮನೆಯನ್ನು ಒದಗಿಸಿಕೊಟ್ಟಲ್ಲಿ, ಅಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವುದರೊಂದಿಗೆ, ಅಲ್ಲಿದ್ದುಕೊಂಡು ಗ್ರಾಮದಲ್ಲಿ ಉಳಿದಿರುವ ತಮ್ಮ ಆಸ್ತಿ ಪಾಸ್ತಿಗಳನ್ನು ನಿರ್ವಹಣೆ ಮಾಡಲು ಸಾಧ್ಯವೆಂದು  ಅಭಿಪ್ರಾಯಪಟ್ಟರು. 

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

Beete-Wood

Madikeri: ಬೀಟಿ ಮರ ಸಾಗಾಟ: ಸೊತ್ತು ಸಹಿತ ಓರ್ವನ ಬಂಧನ

ssa

Kasaragod: ಎಡನೀರು ಶ್ರೀಗಳ ಕಾರಿಗೆ ಹಾನಿ; ಇಬ್ಬರ ವಿರುದ್ಧ ಕೇಸು ದಾಖಲು

17

Kasargod: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮತ್ತೆ ಕಲ್ಲು ತೂರಾಟ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.