“ಕೊಡವ ಸಮಾಜಗಳ ಒಕ್ಕೂಟ ಮೂಲಕವೇ ಕೋವಿ ಹಕ್ಕಿನ ಹೋರಾಟ’  


Team Udayavani, Jun 8, 2018, 6:40 AM IST

z-kodava-okkuta-2.jpg

ಮಡಿಕೇರಿ: ಕೊಡವರ ಕೋವಿ ಹಕ್ಕಿನ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ ಕೊಡವ ಸಮಾಜಗಳ ಒಕ್ಕೂಟದ ಮೂಲಕವೇ ನ್ಯಾಯಯುತ ಹೋರಾಟ ನಡೆಸಲು ಒಕ್ಕೂಟದ 12 ನೇ ವಾರ್ಷಿಕ ಮಹಾಸಭೆ ನಿರ್ಣಯ ಕೈಗೊಂಡಿದೆ. 

ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ಬಾಳುಗೋಡುವಿನ‌ ಸಭಾಂಗಣದಲ್ಲಿ ನಡೆಯಿತು.

ಚೇತನ್‌ ಎಂಬುವವರು ನ್ಯಾಯಾಲಯದಲ್ಲಿ ಕೋವಿ ಹಕ್ಕಿನ ಬಗ್ಗೆ ಪ್ರಶ್ನಿಸಿರುವುದಕ್ಕೆ ಸಭೆ ಖಂಡನೆ ಮತ್ತು ವಿಷಾದವನ್ನು ವ್ಯಕ್ತಪಡಿಸಿತು. ಕೋವಿ ಹಕ್ಕಿನ ವಿವಾದವನ್ನು ಸರಿಪಡಿಸಿ ನ್ಯಾಯ ಪಡೆಯಲು ಕಾನೂನು ಹೋರಾಟವನ್ನು ಒಕ್ಕೂಟದ ಮೂಲಕವೇ ನಡೆಸಲು ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಒಪ್ಪಿಗೆ ನೀಡಿದರು.

ಮುಂದಿನ ದಿನಗಳಲ್ಲಿ ಕೊಡಗಿಗೆ ಮತ್ತು ಕೊಡವರಿಗೆ ಆಗುವ ಅನ್ಯಾಯದ ವಿರುದ್ಧ ಕೊಡವ ಸಮಾಜಗಳ ಒಕ್ಕೂಟದ ಮೂಲಕ ಹೋರಾಟ ನಡೆಸಲು ಸಭೆ ನಿರ್ಣಯ ಕೈಗೊಂಡಿತು. 

ತಲಕಾವೇರಿಯಲ್ಲಿ ಅಷ್ಟಮಂಗಲ
ಜೂ. 18 ಮತ್ತು 19ರಂದು ತಲಕಾವೇರಿಯಲ್ಲಿ ನಡೆಯುವ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಸೂಚಕ ಕಾರ್ಯಕ್ರಮದಲ್ಲಿ ಎಲ್ಲ ಕೊಡವ ಸಮಾಜಗಳ ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಒಕ್ಕೂಟದ ಪ್ರಮುಖರು ಮನವಿ ಮಾಡಿಕೊಂಡರು.
 
ಮುಂಬರುವ ಸಾಲಿನಲ್ಲಿ ಹರಿಹರ ಮುಕ್ಕಾಟಿರ ಕುಟುಂಬ ನಡೆಸುವ ಕೊಡವ ಹಾಕಿ ಹಬ್ಬ ಸೇರಿದಂತೆ ಎಲ್ಲಾ ಕೊಡವ ಕುಟುಂಬದ ಹಾಕಿ ಹಬ್ಬದ ಆಯೋಜನೆಗೆ ಒಕ್ಕೂಟ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ ಎಂದು ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಭರವಸೆ ನೀಡಿದರು.ಎಲ್ಲ ಕೊಡವ ಸಮಾಜಗಳ ಸದಸ್ಯರು ಕೊಡವ ಸಮಾಜಗಳ ಒಕ್ಕೂಟದ ಸದಸ್ಯರಾಗಿರುತ್ತಾರೆ ಎಂದು ಅವರು ಇದೇ ಸಂದರ್ಭ ಸ್ಪಷ್ಟಪಡಿಸಿದರು. 

ಸಭೆಯಲ್ಲಿ ಇಲ್ಲಿಯವರೆಗೆ ನಡೆದ ಒಕ್ಕೂಟದ ಸಾಧನೆ ಹಾಗೂ ಮುಂದಿನ ಕಾರ್ಯ ಸಾಧನೆಗಳ ವಿವರವನ್ನು ನೀಡಲಾಯಿತು.
 
ಪರಿಸರ ದಿನಾಚರಣೆ  
ಸಭೆಗೂ ಮುನ್ನ ಕೊಡವ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸೇರಿದಂತೆ ಎಲ್ಲಾ ಸದಸ್ಯರು ಗಿಡ ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
  
ವೇದಿಕೆಯಲ್ಲಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಡ ರವಿ ಉತ್ತಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್‌. ದೇವಯ್ಯ, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಮಾಲೇಟಿರ ಅಭಿಮನ್ಯು ಕುಮಾರ್‌, ಬಾಳೆಲೆ ಕೊಡವ ಸಮಾಜದ ಅಧ್ಯಕ್ಷರಾದ ಮಲಚ್ಚೀರ ಬೋಸ್‌ ಚಿಟ್ಟಿಯಪ್ಪ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ, ಕಾರ್ಯದರ್ಶಿ  ವಾಟೇರಿರ  ಶಂಕರಿ ಪೂವಯ್ಯ,  ಖಜಾಂಚಿ ಚೇರಿಯಪಂಡ ಕಶ್ಯಪ್ಪ ಹಾಗೂ ಪೋಷಕ  ಸದಸ್ಯರಾದ ಎಂ.ಸಿ. ನಾಣಯ್ಯ, ಮಲ್ಲೆಂಗಡ ದಾದ ಬೆಳ್ಳಿಯಪ್ಪ, ದಾನಿ   ಸದಸ್ಯರಾದ ಬೊಟ್ಟೋಳಂಡ    ಮಿಟ್ಟು ಚಂಗಪ್ಪ, ಪೊಮ್ಮಕ್ಕಡ ಸಂಘದ ಅಧ್ಯಕ್ಷರಾದ ಚೆರಿಯಪಂಡ   ಇಮ್ಮಿ ಉತ್ತಪ್ಪ ಸೇರಿದಂತೆ ಹಲವು ದಾನಿ ಸದಸ್ಯರು, ಕೊಡವ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಒಕ್ಕೂಟದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ಪ್ರಾರ್ಥಿಸಿ, ವಾಟೇರಿರ ಶಂಕರಿ ಪೂವಯ್ಯ ವಂದಿಸಿದರು.

ಟಾಪ್ ನ್ಯೂಸ್

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

1-nxxxxx

Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ

1-naxal

Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

1-aishw

Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!

police

Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್‌ ಸೋಮನ ವಿರುದ್ಧ ಕೇಸ್‌

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

cr

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Untitled-1

Kasaragod Crime News: ನೇಣು ಬಿಗಿದು ಯುವಕ ಆತ್ಮಹ*ತ್ಯೆ

1-katte

ಕಟ್ಟೆಮಾಡು ದೇಗುಲ ವಸ್ತ್ರ ಸಂಹಿತೆೆ ವಿವಾದ: ಆಡಳಿತ ಮಂಡಳಿ ಸಭೆಯಲ್ಲಿ ಮೂಡದ ಒಮ್ಮತ‌

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

1-nxxxxx

Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ

1-naxal

Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

1-aishw

Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.