ಬಾಂಗ್ಲಾ, ಅಸ್ಸಾಂ ವಲಸಿಗರ ಬಗ್ಗೆ ಎಚ್ಚರವಿರಲಿ: ಶಾಸಕ ಬೋಪಯ್ಯ


Team Udayavani, Nov 30, 2017, 3:50 PM IST

30-32.jpg

ಮಡಿಕೇರಿ: ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸುವ ಫ‌ಲಾನು ಭವಿಗಳಿಗೆ ದೃಢೀಕರಣ ಪತ್ರ ನೀಡುವ ಹಂತದಲ್ಲಿ ಬಾಂಗ್ಲಾ ಮತ್ತು ಅಸ್ಸಾಂ ವಲಸಿಗರ ಬಗ್ಗೆ ಎಚ್ಚರಿಕೆ ವಹಿಸು ವಂತೆ ಶಾಸಕ  ಕೆ.ಜಿ. ಬೋಪಯ್ಯ  ಗ್ರಾ. ಪಂ.‌ ಪಿಡಿಒಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಮಡಿಕೇರಿ ತಾ. ಪಂ. ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸುವವರ ಬಗ್ಗೆ ತೀವ್ರ ನಿಗಾ ವಹಿಸಿ, ಅಸ್ಸಾಂ, ಬಾಂಗ್ಲಾ ದೇಶಿಗರಾಗಿದ್ದಲ್ಲಿ ಯಾವುದೇ ಕಾರಣಕ್ಕು ಅಂತಹವರಿಗೆ ದೃಢೀಕರಣ ಪತ್ರ ನೀಡಕೂಡದೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು. 

ಅರ್ಜಿ ಸಲ್ಲಿಸಲು ಅವಕಾಶ 
ಸರಕಾರಿ ಜಾಗ ಒತ್ತುವರಿ ಸಕ್ರಮದ 94 ಸಿ ಮತ್ತು 94ಸಿಸಿ ಅರ್ಜಿ ಸಲ್ಲಿಕೆಗೆ ಪ್ರಸಕ್ತ ಸಾಲಿನ ಡಿ. 31ರ ವರೆಗೆ ಅವಕಾಶವಿದ್ದು, ಸೌಲಭ್ಯದತ್ತ ಆಸಕ್ತರಾಗಿರುವವರು ಅರ್ಜಿ ಸಲ್ಲಿಸುವಂತೆ ಶಾಸಕ ಬೋಪಯ್ಯ ಇದೇ ಸಂದರ್ಭ ಸೂಚಿಸಿ,  ಈ ಹಿಂದೆ 2012ರ ಒಳಗೆ ಸರಕಾರಿ ಜಾಗ ಒತ್ತುವರಿ ಮಾಡಿ ಕೊಂಡಿದ್ದವರಿಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿತ್ತು. ಆದರೆ, ಇದೀಗ ಸರಕಾರ ಡಿಸೆಂಬರ್‌ ಅಂತ್ಯದವರೆಗೆ ಕಾಲಾವ ಕಾಶ ವಿಸ್ತರಿಸಿರುವುದಾಗಿ ತಿಳಿಸಿದರು.

ತಹಶೀಲ್ದಾರ್‌ ಕುಸುಮಾ ಅವರು ಶಾಸಕರಿಗೆ ಮಾಹಿತಿ ನೀಡಿ, 94ಸಿ ಯಡಿ ಮಡಿಕೇರಿ ತಾಲೂಕಿನಲ್ಲಿ ಸಲ್ಲಿಕೆಯಾಗಿದ್ದ 2,208 ಅರ್ಜಿಗಳು ಬಂದಿದ್ದು, ಇದರಲ್ಲಿ 2,115 ಅರ್ಜಿ ವಿಲೇಯಾಗಿದ್ದು, 93 ಬಾಕಿ ಇರುವುದಿಲ್ಲವೆಂದು ಮಾಹಿತಿಯನ್ನಿತ್ತರು.  ಈ ಹಂತದಲ್ಲಿ ತಾ.ಪಂ. ಸದಸ್ಯರಾ ನಾಗೇಶ್‌ ಕುಂದಲ್ಪಾಡಿ, ತಮ್ಮ ಸಂಪಾಜೆ ಕ್ಷೇತ್ರ ವ್ಯಾಪ್ತಿಯಲ್ಲಿ 94 ಸಿಯಡಿ 60ರಿಂದ 70 ಅರ್ಜಿಗಳು ಸಲ್ಲಿಕೆಯಾಗಿದ್ದು, ಇಲ್ಲಿಯವರೆಗೆ ಕೇವಲ ಏಳೆೆಂಟು ಮಂದಿಗಷ್ಟೆ ಹಕ್ಕುಪತ್ರವನ್ನು ನೀಡಲಾಗಿದೆ ಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀ ಲ್ದಾರ್‌, ಹೆದ್ದಾರಿ ಬದಿಯಲ್ಲಿ   ಜಾಗ  ಮಂಜೂರಾತಿಗೆ ಕೋರಿದ ಅರ್ಜಿಗಳಷ್ಟೆ ತಿರಸ್ಕೃತವಾಗಿದೆಯೆಂದು ಸಮಜಾಯಿಷಿಕೆ ನೀಡಿದರೆ, ಶಾಸಕ ಬೋಪಯ್ಯ ಅವರು, ಸಂಪಾಜೆ ವಿಭಾಗ ದಲ್ಲಿ ಸಲ್ಲಿಕೆಯಾದ ಅರ್ಜಿಗಳ ಮಾಹಿತಿ ನೀಡಲು ನಾಗೇಶ್‌ ಕುಂದಲ್ಪಾಡಿ ಅವರಿಗೆ ತಿಳಿಸಿದರು.

ನವಗ್ರಾಮದಲ್ಲಿ ಜನರಿಲ್ಲ
ಗಾಳಿಬೀಡು ಗ್ರಾಪಂ ಅಧ್ಯಕ್ಷ ಸುಭಾಷ್‌ ಮಾತನಾಡಿ, ಕಳೆದ ಹದಿನೈದು ವರ್ಷಗಳ ಹಿಂದೆ ಗಾಳಿಬೀಡಿನಲ್ಲಿ  ನವಗ್ರಾಮ ಯೋಜನೆಯಡಿ ನಿರ್ಮಾಣವಾದ 15 ರಿಂದ 20 ಮನೆಗಳಲ್ಲಿ ಕೇವಲ ಎರಡು ಮೂರು ಮಂದಿ ಮಾತ್ರ ನೆಲೆಸಿದ್ದಾರೆ. ಈ ಮನೆಗಳಿಗೆ ಹಕ್ಕುಪತ್ರ ಒದಗಿಸಲಾಗಿದ್ದರು ಆರ್‌ಟಿಸಿ ಒದಗಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರೆ, ತಹಶೀಲ್ದಾರ್‌ ಅವರು ನವಗ್ರಾಮ ಯೋಜನೆಯ ಮನೆಗಳಿಗೆ ನಿಯಮದಂತೆ ಹಕ್ಕುಪತ್ರವನ್ನಷ್ಟೆ ನೀಡ ಲಾಗುತ್ತದೆ. ಆರ್‌ಟಿಸಿ ಇಲ್ಲವೆಂದು ಸ್ಪಷ್ಟಡಿಸಿದರು.

ಮರಗೋಡು ಗ್ರಾ. ಪಂ. ಅಧ್ಯಕ್ಷ ಬಿದ್ರುಪಣೆ ಮೋಹನ್‌ ಮಾತನಾಡಿ, ಪಂಚಾಯತ್‌ ಶ್ಮಶಾನ ಜಾಗ ಒತ್ತುವರಿ ಮಾಡಿರುವುದನ್ನು ಪ್ರಸ್ತಾವಿಸಿದಾಗ ಶಾಸಕ ಬೋಪಯ್ಯ, ಅಂತಹ ಒತ್ತುವರಿಯನ್ನು ಎಳೆದು ಹಾಕುವಂತೆ ಸೂಚಿಸಿದರು.
ಸಭೆಯಲ್ಲಿ  ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ಮಡಿಕೆೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್‌, ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್‌ ತಮ್ಮಯ್ಯ, ಇಒ ಜೀವನ್‌ ಕುಮಾರ್‌, ಪ್ರೊಬೇಷನರಿ ಇಒ ಲಕ್ಷ್ಮೀ ಉಪಸ್ಥಿತರಿದ್ದರು.

ಯುಜಿಡಿ ಎಂಜಿನಿಯರ್‌ ಅಮಾನತಿಗೆ ನಿರ್ಣಯ ಮಾಡಿ ಮಡಿಕೇರಿ ನಗರ ವ್ಯಾಪ್ತಿಯ ಒಳಚರಂಡಿ ಕಾಮಗಾರಿಯ ಅವ್ಯವಸ್ಥೆಗಳ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ನಗರಸಭೆಯಲ್ಲಿ ಯುಜಿಡಿ ಇಂಜಿನಿಯರ್‌ ಅಮಾನತಿಗೆ ನಿರ್ಣಯ ಕೈಗೊಂಡು ಕಳುಹಿಸಿಕೊಡುವಂತೆ ನಗರಸಭಾ ಆಯುಕ್ತರಿಗೆ ಸ್ಪಷ್ಟ ನಿರ್ದೇಶನ ನೀಡಿದರು.

    ತಾಪಂ ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಒಳಚರಂಡಿ ಯೋಜನೆಯಡಿ ಶುದ್ಧೀಕರಣ ಘಟಕ ನಿರ್ಮಾಣಕ್ಕೂ ಮೊದಲೆ ಪೈಪ್‌ ಅಳವಡಿಕೆಯಿಂದ ರಸ್ತೆಗಳು ಹಾಳಾಗಿವೆ. ಇದರ ದುರಸ್ತಿ ಸಮರ್ಪಕವಾಗಿ ನಡೆಯುತ್ತಿಲ್ಲ, ಈ ಬಗ್ಗೆ ಅಗತ್ಯ ಕ್ರಮವನ್ನೂ ನೀವು ಕೈಗೊಳ್ಳುತ್ತಿಲ್ಲವೆಂದು ನಗರಸಭಾ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಈ ಸಂದರ್ಭ ನಗರಸಭಾ ಆಯುಕ್ತರಾದ ಬಿ. ಶುಭಾ ಮಾತನಾಡಿ, ಯುಜಿಡಿ ಯೋಜನೆಯಡಿ ಪೈಪ್‌ ಅಳವಡಿಕೆಯ ಅನಂತರ ಆರು ತಿಂಗಳ ಕಾಲಾವಕಾಶದ ಬಳಿಕ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಯುಜಿಡಿ ಅಳವಡಿಕೆಯ ಚರಂಡಿ ಕುಸಿಯುತ್ತದೆ ಎಂದು ಮತ್ತು ಯುಜಿಡಿಗೆ ಸಂಬಂಧಿಸಿದಂತೆ ನಗರದ ಒಂಬತ್ತು ಕಡೆಗಳಲ್ಲಿ ಅಗತ್ಯ ಸಂಸ್ಕರಣ ಘಟಕಗಳಿಗೆ ಜಾಗವನ್ನು ಒದಗಿಸಿಲ್ಲವೆಂದು ತಿಳಿಸಿದರು. ಈ ಬಗ್ಗೆ ಡಿಸಿಯವರೊಂದಿಗೆ ಚರ್ಚಿಸಲಾಗಿದ್ದು, ಅಗತ್ಯವಿರುವೆಡೆ ಜಾಗ ಸ್ವಾಧೀನಕ್ಕೆ ಪ್ರಯತ್ನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Untitled-1

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

2

Kasaragod: ಯುವತಿ ನಾಪತ್ತೆ; ದೂರು ದಾಖಲು

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.