‘ಮಳೆನೀರು ಕೊಯ್ಲು ಜಲ ಸಂಪನ್ಮೂಲ ಸಮೃದ್ಧಿಗೆ ಪ್ರಯತ್ನಿಸೋಣ’
Team Udayavani, Aug 6, 2019, 5:41 AM IST
ಶನಿವಾರಸಂತೆ: ಮುಂದಿನ ಪೀಳಿಗೆಗೆ ಅಂತರ್ಜಲ ಉಳಿಸಿಕೊಳ್ಳಲು ಈಗಿನಂದಲೆ ಮಳೆನೀರು ಕೊಯ್ಲು ಜಲ ಸಂಪನ್ಮೂಲ ಸಮೃದ್ದಿಗಾಗಿ ಎಲ್ಲಾರೂ ಪ್ರಯತ್ನಿಸಬೇಕಾಗಿದೆ ಎಂದು ಸೋಮವಾರಪೇಟೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಿವೃತ್ತ ವ್ಯವಸ್ಥಾಪಕ ಎಂ.ಬಿ.ಚಿನ್ನಪ್ಪ ಅಭಿಪ್ರಾಯ ಪಟ್ಟರು. ಅವರು ಗುಡುಗಳಲೆ ಆರ್.ವಿ.ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಮಳೆ ನೀರು ಕೊಯ್ಲು ಅರಿವು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಜಾಗತಿಕ ತಾಪಮಾನದಲ್ಲಿಂದು ಅಂತರ್ಜಲಮಟ್ಟ ಕುಸಿಯುತ್ತಿದೆ, ಜಲ ಸಂಪನ್ಮೂಲ ಬರಿದಾಗುತ್ತಿದೆ, ಕುಡಿಯುವ ನೀರಿಗಾಗಿ ಸಾವಿರ ಅಡಿ ಕೊಳವೆಬಾವಿ ತೋಡುತ್ತಿದ್ದರೂ ಹನಿ ನೀರು ಸಿಗುತ್ತಿಲ್ಲ ಮುಂದಿನ ಹಾದಿ ಹಾಗೂ ಮುಂದಿನ ಪೀಳಿಗೆಯರಿಗೆ ಮತ್ತಷ್ಟು ನೀರಿಗಾಗಿ ತೊಂದರೆ ಕಾದಿದ್ದು ಈ ನಿಟ್ಟಿನಲ್ಲಿ ನಾವೆಲ್ಲಾರೂ ನೀರಿನ ಮಹತ್ವವನ್ನು ಅರಿತುಕೊಂಡು ಕೃತಕ ಜಲಸಂಪನ್ಮೂಲ ಕಡೆಗೆ ಬದಲಾಗಬೇಕಾಗಿದೆ ಎಂದು ಹೇಳಿದರು. ಮನೆಗಳಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬ್ಯಾಗ್ ಬಳಕೆಯನ್ನು ನಿಲ್ಲಿಸುವ ಮೂಲಕ ಪರಿಸರ ಹಾಗೂ ಜಲ ಸಂಪನ್ಮೂಲ ಉಳಿವಿಗಾಗಿ ಪ್ರಯತ್ನಿಸುವಂತೆ ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ತಾಲೋಕು ಯೋಜನಾಧಿಕಾರಿ ವೈ.ಪ್ರಕಾಶ್ ಮಾತನಾಡಿ-ವಿಜ್ಞಾನ-ತಂತ್ರಜ್ಞಾನದ ಭರಾಟೆಯಲ್ಲಿ ನಾವೆಲ್ಲಾರೂ ಪ್ರಕೃತಿ, ಪರಿಸರದ ಮೇಲೆ ಹಲ್ಲೆ ಮಾಡುತ್ತಿದ್ದೇವೆ, ಇದರಿಂದ ಪರಿಸರ ಹಾಳಾಗುತ್ತಿರುವುದರ ಜೊತೆಯಲ್ಲಿ ಜಲ ಸಂಪನ್ಮೂಲ ಬರಿದಾಗುತ್ತಾ ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ ಎಂದರು. . ವಲಯ 6ರ ಸಹಾಯಕ ಗೌರ್ನರ್ ಪಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು.
ಮಾಹಿತಿ ಕಾರ್ಯಕ್ರಮದಲ್ಲಿ ರೋಟರಿ 6 ರ ವಲಯ ಸೇನಾನಿ ಎಚ್.ಎಸ್.ವಸಂತ್‌ಕುಮಾರ್, ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಸ್.ವಿ.ಶುಭು, ಕಾರ್ಯದರ್ಶಿ ಎಚ್.ಪಿ.ಚಂದನ್, ರೋಟರಿ ಸದಸ್ಯ ಎ.ಡಿ.ಮೋಹನ್‌ಕುಮಾರ್, ಆಲೂರು ಸಿದ್ದಾಪುರ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಇ.ತಮ್ಮಯ್ಯ,ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.