ಲೋಕಸಭಾ ಚುನಾವಣೆ : ನಾಮಪತ್ರ ಸಲ್ಲಿಕೆ ಆರಂಭ
Team Udayavani, Mar 20, 2019, 1:00 AM IST
ಮಡಿಕೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮಾ.19 ರಂದು ಚುನಾವಣ ಅಧಿಸೂಚನೆ ಹೊರಡಿ ಸಲಾಗಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಸಂಬಂಧಿಸಿದಂತೆ ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ.
ಮಾ.26 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ. 27 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಮಾ.29ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದ್ದು, ಎ.18ರಂದು ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮತಗಟ್ಟೆಗಳ ಮೇಲ್ವಿಚಾರಣೆ, ಮಾದರಿ ನೀತಿ ಸಂಹಿತೆ, ಚುನಾವಣ ವೆಚ್ಚ ನಿರ್ವಹಣೆ, ಸಹಾಯವಾಣಿ ಕೇಂದ್ರದ ಕಾರ್ಯನಿರ್ವಹಣೆ, ಸಿ-ವಿಜಿಲ್, ಮತಗಟ್ಟೆಗಳ ಮೇಲ್ವಿಚಾರಣೆ ಮತ್ತಿತರ ವಿಷಯಗಳ ಬಗ್ಗೆ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿರುದರಿಂದ ರಾಜಕೀಯ ಪಕ್ಷ ಗಳ ಸಭೆ, ಸಮಾರಂಭಗಳು ನಡೆಯಲಿವೆ. ಅದಕ್ಕೆ ಅನುಮತಿ ನೀಡುವುದು, ಚೆಕ್ ಪೋಸ್ಟ್‌ಗಳಲ್ಲಿ ಹೆಚ್ಚಿನ ನಿಗಾವಹಿಸುವುದು, ಚುನಾವಣ ವೆಚ್ಚ ನಿರ್ವಹಣೆ ಮತ್ತಿತರ ಬಗ್ಗೆ ನೋಡಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಾರಂಭಕ್ಕೆ ಅನುಮತಿ ಅಗತ್ಯ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಸಭೆ ಸಮಾರಂಭಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು ಎಂದು ಸಹಾಯಕ ಚುನಾವಣಾಧಿಕಾರಿಗಳಿಗೆ ಸಲಹೆ ಮಾಡಿದರು.
ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮೀಪ್ರಿಯಾ ಅವರು ಮಾದರಿ ನೀತಿ ಸಂಹಿತೆ ಮತ್ತು ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನ ಬಗ್ಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರು ಲೋಕಸಭಾ ಚುನಾವಣೆ ಸಂಬಂಧ ವ್ಯವಸ್ಥಿತವಾಗಿ ಕಾರ್ಯ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಲವು ಸಲಹೆ ನೀಡಿದರು.
ಸಹಾಯಕ ಚುನಾವಣಾಧಿಕಾರಿಗಳಾದ ಟಿ.ಜವರೇಗೌಡ, ಶ್ರೀನಿವಾಸ್, ಮತ ಗಟ್ಟೆಗಳ ಮೇಲ್ವಿಚಾರಣ ನೋಡಲ್ ಅಧಿಕಾರಿ ಗುಡೂರು ಭೀಮಸೇನ, ಚುನಾವಣ ವೆಚ್ಚ ನಿರ್ವಹಣೆಯ ನೋಡಲ್ ಅಧಿಕಾರಿ ಎಚ್.ಇ.ನಂದ, ಸಿ-ವಿಜಿಲ್ ನೋಡಲ್ ಅಧಿಕಾರಿ ಷಂಶುದ್ದೀನ್, ಮತಗಟ್ಟೆ ಅಧಿಕಾರಿಗಳ ನೇಮಕ ನೋಡಲ್ ಅಧಿಕಾರಿ ಮಚ್ಚಾಡೋ, ವಿದ್ಯುನ್ಮಾನ ಮತಯಂತ್ರ ನೋಡಲ್ ಅಧಿಕಾರಿ ಕೆ.ಇ.ಇಬ್ರಾಹಿಂ, ಚುನಾವಣ ವೀಕ್ಷಕರ ನೋಡಲ್ ಅಧಿಕಾರಿ ಪ್ರಮೋದ್, ಜಿಲ್ಲಾ ಮಾಹಿತಿ ಅಧಿಕಾರಿ ಅಜೀತ್, ತರಬೇತಿ ನೋಡಲ್ ಅಧಿಕಾರಿ ವಾಲ್ಟರ್ ಡಿಮೆಲೊ, ವಾಹನ ನಿಯೋಜನೆ ನೋಡಲ್ ಅಧಿಕಾರಿ ಶಿವಣ್ಣ ಇತರರು ಮಾಹಿತಿ ನೀಡಿದರು.
ಡಿ.ಸಿ. ಸೂಚನೆ
ಮತಗಟ್ಟೆಗಳಿಗೆ ಅಂಗವಿಕಲ ಮತದಾರರನ್ನು ಕರೆದುಕೊಂಡು ಬರಲು ವ್ಯವಸ್ಥೆ ಮಾಡುವುದು, ಮತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಮತಗಟ್ಟೆ ಅಧಿಕಾ ರಿಗಳಿಗೆ ತರಬೇತಿ ನೀಡುವುದು. ಮತ್ತಿತರ ಕಾರ್ಯಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಡಿ.ಸಿ. ಸೂಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.