ಮಡಿಕೇರಿ: 16 ಮಂದಿಗೆ ಸೋಂಕು
Team Udayavani, Jul 23, 2020, 7:34 AM IST
ಸಾಂದರ್ಭಿಕ ಚಿತ್ರ
ಮಡಿಕೇರಿ: ಜಿಲ್ಲೆಯಲ್ಲಿ ಬುಧವಾರ 16 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಬೆಂಗಳೂರಿನಿಂದ ಬಂದ ಮೂರ್ನಾಡುವಿನ ನಿವಾಸಿ 36 ವರ್ಷದ ಪುರುಷ ಮತ್ತು 35 ವರ್ಷದ ಮಹಿಳೆ, ಮಡಿಕೇರಿಯ ರಾಣಿಪೇಟೆಯನಿವಾಸಿ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆಯ ವಡ್ಡರಮಾಡು ಗ್ರಾಮದ 40 ವರ್ಷದ ಪುರುಷ, ಬೆಕ್ಕೆ ಸೊಡೂರುವಿನ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ 44 ವರ್ಷದ ಮಹಿಳೆಗೂ ಸಹ ಸೋಂಕು ದೃಢಪಟ್ಟಿದೆ. ಮಡಿಕೇರಿಯ ದಾಸವಾಳ ರಸ್ತೆಯ 37 ವರ್ಷದ ಪುರುಷನಿಗೆ ಹಾಗೂ ಈ ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ತಾಳತ್ತರ ಶೆಟ್ಟಳ್ಳಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 47 ವರ್ಷದ ಪುರುಷ, 46 ವರ್ಷದ ಮಹಿಳೆ, 24 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 298 ಪ್ರಕರಣಗಳು ಪತ್ತೆಯಾಗಿದ್ದು, 210 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಶನಿವಾರ ಲಾಕ್‌ಡೌನ್ ಇಲ್ಲ
ಸರಕಾರದ ಹೊಸ ಆದೇಶದಂತೆ ಜಿಲ್ಲೆಯಲ್ಲಿ ಜುಲೈ 15ರಿಂದ 31ರ ವರೆಗೆ ಜಾರಿಯಲ್ಲಿರುವಂತೆ ಹೊರಡಿಸಲಾಗಿದ್ದ ನಿರ್ಬಂಧಕಾಜ್ಞೆಯನ್ನು ಮಾರ್ಪಡಿಸಲಾಗಿದೆ. ಹೀಗಾಗಿ ಜು. 25ರ ಶನಿವಾರ ಲಾಕ್‌ಡೌನ್ ಇರುವುದಿಲ್ಲ. ಜುಲೈ 26ರ ರವಿವಾರ ಲಾಕ್ ಡೌನ್ ಇರುತ್ತದೆ. ವಾರದ ಎಲ್ಲ ದಿನಗಳಲ್ಲಿ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
Kasaragodu: ನಾಪತ್ತೆಯಾಗಿದ್ದ ಯುವಜೋಡಿ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.