ಮಡಿಕೇರಿ: ಜಿಲ್ಲಾ ಸರಕಾರಿ ಆಸ್ಪತ್ರೆ ಸ್ವತ್ಛತಾ ಸಿಬಂದಿ ಪ್ರತಿಭಟನೆ
Team Udayavani, May 2, 2019, 6:20 AM IST
ಮಡಿಕೇರಿ: ಸರಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆಗೆ ದುಡಿಯುತ್ತಿರುವ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುವ ತೀರ್ಮಾನವನ್ನು ಕೈಬೀಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸ್ವತ್ಛತಾ ಸಿಬ್ಬಂದಿಗಳು ಪತ್ರಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿದ ಸ್ವತ್ಛತಾ ಸಿಬಂದಿ ಮಡಿಕೇರಿ, ಕುಶಾಲನಗರ, ನಾಪೋಕ್ಲು, ಸೋಮವಾರಪೇಟೆ, ವಿರಾಜಪೇಟೆ, ಪಾಲಿಬೆಟ್ಟ, ಕುಟ್ಟ, ಗೋಣಿಕೊಪ್ಪ ಸೇರಿದಂತೆ ಇನ್ನಿತರ ಆಸ್ಪತ್ರೆಗಳಲ್ಲಿ ಗುತ್ತಿಗೆ ಆದಾರದಲ್ಲಿ ದುಡಿಯುತ್ತಿರುವ ಡಿ ದರ್ಜೆ ಹಾಗೂ ನಾನ್ ಕ್ಲೀನಿಂಗ್ ಕಾರ್ಮಿಕರನ್ನು ತೆಗೆದು ಹಾಕುವ ನಿರ್ಧಾರವನ್ನು ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಐಎನ್‌ಟಿಯುಸಿ ಅಧ್ಯಕ್ಷ ಭರತ್ ಮಾತನಾಡಿ ಪ್ರಸಕ್ತ ಸಾಲಿನ ಮಾರ್ಚ್ 22 ರಂದು ಸರ್ಕಾರ ಆದೇಶವೊಂದನ್ನು ಹೊರಡಿಸಿ, ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ಸಿಬ್ಬಂದಿಗಳಲ್ಲಿ ಅಂದಾಜು ಅರ್ಧದಷ್ಟು ಮಂದಿಯನ್ನು ತೆಗೆಯುವುದಾಗಿ ತಿಳಿಸಿತ್ತು. ಇದೀಗ ಈ ಆದೇಶವನ್ನು ಮೇ-ಜೂನ್ ತಿಂಗಳವರೆಗೆ ತಡೆಹಿಡಿಯಲಾಗಿದೆ. ಆದರೂ ಸರ್ಕಾರ ತನ್ನ ಆದೇಶವನ್ನು ಜಾರಿ ಮಾಡುವ ಆತಂಕವಿದೆ ಎಂದು ಅಭಿಪ್ರಾಯಪಟ್ಟರು.
ಗುತ್ತಿಗೆ ಆಧಾರದಲ್ಲಿ ನೌಕರರ ನೇಮಕ ದಲ್ಲಿ ನಡೆಯು ತ್ತಿರುವ ಭ್ರಷ್ಟಾಚಾರ ದಿಂದ ನಷ್ಟವಾಗುತ್ತಿದೆ ಯಾದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಯೆಂದು ಸರ್ಕಾರ ಕಾರಣವನ್ನು ನೀಡುತ್ತದೆ. ಹೊರ ಜಿಲ್ಲೆಗಳಲ್ಲಿ ಇಂತಹ ಪ್ರಸಂಗಗಳು ನಡೆದಿರಬಹುದು. ಆದರೆ, ಪ್ರಾಮಾಣಿಕವಾಗಿ ಹಲವಾರು ವರ್ಷಗಳಿಂದ ಆಸ್ಪತ್ರೆಗಳಲ್ಲಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಬದುಕು ಇದರಿಂದ ಸಂಕಷ್ಟಕ್ಕೆ ಸಿಲುಕಲಿದೆ. ಪ್ರಸ್ತುತ ಮಡಿಕೇರಿಯ ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿರುವ ಅಂದಾಜು 220 ನೌಕರರಲ್ಲಿ 30 ರಿಂದ 40 ಮಂದಿ ನೌಕರರನ್ನು, ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿನ 36 ಸಿಬ್ಬಂದಿಗಳಲ್ಲಿ 15 ಮಂದಿಯನ್ನು, ಸೋಮವಾರಪೆಟೆ ಆಸ್ಪತ್ರೆಯ ಅಂದಾಜು 30 ಸಿಬಂದಿಪೈಕಿ15 ಮಂದಿಯನ್ನು ಕೆಲಸದಿಂದ ತೆಗೆದು ಹಾಕುವ ಹುನ್ನಾರಗಳು ನಡೆದಿದೆಯಾವುದೇ ಕಾರಣಕ್ಕು ನೌಕರರನ್ನು ಕೆಲಸದಿಂದ ತೆಗೆದು ಹಾಕಬಾರದೆಂದು ಭರತ್ ಆಗ್ರಹಿಸಿದರು.
ಜಾನಕಿ, ಲೋಕೇಶ್, ನವೀನ್, ಮಂಜುಳಾ, ಓಮನ ಇದ್ದರು.
ಬೇಡಿಕೆಗಳು
ಗುತ್ತಿಗೆದಾರರು ಕಾರ್ಮಿಕರ ವೇತನವನ್ನು ತಿಂಗಳ 5ನೇ ತಾರೀಖೀ ನಂದು ಸಮರ್ಪಕವಾಗಿ ನೀಡಬೇಕು, ಬಾಕಿ ಇರುವ ವೇತನ ಕೂಡಲೇ ನೀಡಬೇಕು, ಕಾರ್ಮಿಕರ ವೇತನದಿಂದ ಕಡಿತಗೊಳಿಸುವ ಪಿಎಫ್ ಹಣವನ್ನು, ಮಾಲೀಕರು ನೀಡಬೇಕಾದ ಹಣವನ್ನು ಪಿಎಫ್ ಸಮಯಕ್ಕೆ ಸರಿಯಾಗಿ ಪಾವತಿಸಿ ಪಿಎಫ್ ಸಂಖ್ಯೆ ನೀಡಬೇಕು, ವರ್ಷಕ್ಕೆ 2 ಜತೆ ಸಮವಸ್ತ್ರ ಕಡ್ಡಾಯವಾಗಿ ನೀಡಬೇಕು, ಸರ್ಕಾರ ನಿಗಧಿ ಪಡಿಸಿ ರುವ ವೇತನ ನೀಡಬೇಕು, ಮಾಸಿಕ 18 ಸಾವಿರ ಕನಿಷ್ಟ ವೇತನ ನೀv ಬೇಕು, ಇಎಸ್‌ಐ ಹಣ ವನ್ನುಕಡಿತಗೊಳಿಸಿದ್ದು, ಆಸ್ಪತ್ರೆಯಲ್ಲಿ ಗುರುತಿಸಿಲ ಗುರುತಿಸಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.