Madikeri: ನೂತನ ಆಸ್ಪತ್ರೆ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
Team Udayavani, Mar 4, 2024, 1:10 AM IST
ಮಡಿಕೇರಿ: ನೂತನವಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆಯ ಕಟ್ಟಡ ದಿಂದ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ.
ಕೋಲ್ಕತಾ ಮೂಲದ ಕಾರ್ಮಿಕ ರಾಕಿಬ್ (22) ಮೃತರು. ಅವರು ಮುಂಜಾನೆ ಆಸ್ಪತ್ರೆಯ ಕಿಟಕಿ ಕೆಲಸ ಮಾಡಲು ಮುಂದಾಗಿದ್ದ ಸಂದರ್ಭ ಹೊರ ಭಾಗದಲ್ಲಿ ಹಾಕಿದ್ದ ಸ್ಟೇಜ್‌ನಿಂದ ಬಿದ್ದಿದ್ದಾರೆ. 30 ಅಡಿ ಎತ್ತರದಿಂದ ಸಿಮೆಂಟ್ ನೆಲಕ್ಕೆ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಸುರûಾ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದೇ ಈ ಅನಾಹುತಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.