![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 18, 2024, 11:37 PM IST
ಮಡಿಕೇರಿ: ವಾಹನ ಢಿಕ್ಕಿ ಹೊಡೆದು ಪಾದಚಾರಿಯ ಸಾವಿಗೆ ಕಾರಣನಾಗಿರುವುದಲ್ಲದೆ, ವಾಹನ ನಿಲ್ಲಿಸದೆ ಪರಾರಿಯಾಗಿರುವ ಆರೋಪದಡಿ ಮಾಲಕ ಹುಲಸೆ ಗ್ರಾಮದ ಶಿರಂಗಾಲ ನಿವಾಸಿ ರಜಾಕ್ ಎಂ.ಎಂ. (35)ನನ್ನು ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಾದಚಾರಿಗೆ ಢಿಕ್ಕಿ ಹೊಡೆದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆ. 6ರ ಬೆಳಗ್ಗೆ ಈ ಘಟನೆ ನಡೆದಿತ್ತು. ಪಾದಚಾರಿಯ ಸಾವಿಗೆ ಕಾರಣವಾಗಿ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿತ್ತು.
ಸ್ಥಳದಲ್ಲಿ ದೊರೆತ ಮಾಹಿತಿ ಹಾಗೂ ಕೆಲವು ಸಾಕ್ಷಿಗಳ ಸಹಿತ ತನಿಖೆ ನಡೆಸಿದ ಪೊಲೀಸರು ಆರೋಪಿ ರಜಾಕ್‌ನನ್ನು ಬಂಧಿಸಿದ್ದಾರೆ. ಕಾರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.