ಮಡಿಕೇರಿ: ದೇವಸ್ಥಾನಗಳ ಘಂಟೆಗಳೇ ಇವರ ಟಾರ್ಗೆಟ್! ಸೊತ್ತು ಸಹಿತ ನಾಲ್ವರ ಸೆರೆ
Team Udayavani, Jan 11, 2023, 6:30 AM IST
ಮಡಿಕೇರಿ: ಕೊಡಗು ಹಾಗೂ ನೆರೆಯ ಜಿಲ್ಲೆಗಳ ದೇವಾಲಯಗಳಲ್ಲಿನ ಘಂಟೆಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಕೊಡಗು ಜಿಲ್ಲಾ ಪೊಲೀಸ್ ವಿಶೇಷ ತಂಡ ಬಂಧಿಸಿದೆ.
ಮೈಸೂರಿನ ಆರ್.ಎಸ್. ನಾಯ್ಡು ನಗರದ ಅಮ್ಜದ್ ಆಹಮ್ಮದ್ (37), ಅಜ್ಜು ಲೇಜೌಟ್‌ನ ಸಮಿವುಲ್ಲಾ (22), ಹೈದರ್ (36) ಹಾಗೂ ಕೆಸರೆ ನಗರದ ಜುಲ್ಪಿಕರ್ (36) ಬಂಧಿತರು.
ಕಳವು ಮಾಡಿದ ಸುಮಾರು 750 ಕೆ.ಜಿ. ತೂಕದ ವಿವಿಧ ಮಾದರಿಯ ಲೋಹದ ಘಂಟೆಗಳು ಹಾಗೂ ಕಾರು ಸೇರಿದಂತೆ ಒಟ್ಟು 10 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ತಿಳಿಸಿದ್ದಾರೆ.
ಗೋಣಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಮಾಯಮುಡಿ ಕಮಟೆ ಶ್ರೀ ಮಹದೇವ ದೇವಸ್ಥಾನ, ಪೊನ್ನಂಪೇಟೆ ಠಾಣೆ ವ್ಯಾಪ್ತಿಯ ನಿಟ್ಟೂರು ಕಾರ್ಮಾಡಿನ ಶ್ರೀ ಕಾಲಭೈರವೇಶ್ವರ ದೇವಸ್ಥಾನ, ಬಿಳೂರಿನ ಕಲ್ಲುಗುಡಿ ಶ್ರೀ ಈಶ್ವರ ದೇವಸ್ಥಾನ, ಬೆಸಗೂರಿನ ಶ್ರೀ ಮಹಾದೇವ ದೇವಸ್ಥಾನ ಮತ್ತು ಶ್ರೀ ದುರ್ಗಿ ದೇವಸ್ಥಾನ ಹಾಗೂ ಹಳ್ಳಿಗಟ್ಟಿನ ಭದ್ರಕಾಳಿ ದೇವಸ್ಥಾನ, ವೀರಾಜಪೇಟೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕರಡ ಮಲೆತಿರಿಕೆ ಈಶ್ವರ ದೇವಸ್ಥಾನ, ಕೆದಮಳ್ಳೂರಿನ ಶ್ರೀ ಮಹದೇವ ದೇವಸ್ಥಾನ, ನಾಪೋಕ್ಲು ಠಾಣೆ ವ್ಯಾಪ್ತಿಯ ಮಕ್ಕಿ ಶಾಸ್ತಾವು ದೇವಸ್ಥಾನಗಳಿಂದ
2022ನೇ ಸಾಲಿನ ಫೆಬ್ರವರಿಯಿಂದ ಅಕ್ಟೋಬರ್ ವರೆಗೆ ಸುಮಾರು 800 ಕೆ.ಜಿ. ತೂಕದ ಘಂಟೆಗಳು ಕಳ್ಳತನವಾದ ಬಗ್ಗೆ ಗೋಣಿಕೊಪ್ಪ ಪೊನ್ನಂಪೇಟೆ, ವೀರಾಜಪೇಟೆ ಗ್ರಾಮಾಂತರ ಹಾಗೂ ನಾಪೋಕ್ಲು ಠಾಣೆಗಳಲ್ಲಿ ಪ್ರತ್ಯೇಕವಾಗಿ ಒಟ್ಟು 18 ಪ್ರಕರಣಗಳು ದಾಖಲಾಗಿದ್ದವು.
ಪೊಲೀಸ್ ಅಧೀಕ್ಷಕ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ವೀರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಿರಂಜನ್ ರಾಜೇ ಆರಸ್ ಅವರ ಮಾರ್ಗದರ್ಶನದಲ್ಲಿ ವಿವಿಧ ವೃತ್ತಗಳ ಪ್ರಮುಖ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
3 ತಿಂಗಳ ಸತತ ಕಾರ್ಯಾಚರಣೆ
ಕಳವು ನಡೆದ ದೇವಸ್ಥಾನಗಳಿಂದ ಸಂಗ್ರಹಿಸಿದ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ಮೈಸೂರಿನವರೆಂದು ಪೊಲೀಸರಿಗೆ ದೃಢಪಟ್ಟಿತ್ತು. ಅದರಂತೆ ಪೊಲೀಸರ ತಂಡವು ಮೂರು ತಿಂಗಳ ಕಾಲ ಮೈಸೂರಿನಲ್ಲಿ ಠಿಕಾಣಿ ಹೂಡಿ ಆರೋಪಿಗಳ ಚಲನವಲನದ ಮೇಲೆ ಕಣ್ಣಿರಿಸಿ ಬಲೆಗೆ ಬೀಳಿಸಿದ್ದಾರೆ.
ಹೆಚ್ಚಾಗಿ ಹಳೆಯ ದೇವಸ್ಥಾನಗಳೇ ಕಳ್ಳರ ಗುರಿಯಾಗಿದ್ದವು. ಹಿಂದಿನ ಕಾಲದ ಘಂಟೆಗಳು ಹೆಚ್ಚು ಬೆಲೆಬಾಳುವವಾಗಿದ್ದು, ಅವುಗಳನ್ನು ಕರಗಿಸಿ ಮಾರಾಟ ಮಾಡುವ ಯೋಜನೆ ಅವರದಾಗಿತ್ತು. ಆದರೆ ಅದಕ್ಕೂ ಮುನ್ನ ಸೊತ್ತು ಸಹಿತ ಪೊಲೀಸರ ವಶವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.