ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಪ್ರತ್ಯಕ್ಷ! ಸ್ಥಳದಲ್ಲೇ ಬೀಡು ಬಿಟ್ಟ ಸಿಬ್ಬಂದಿಗಳು
Team Udayavani, Feb 23, 2023, 7:22 AM IST
ಮಡಿಕೇರಿ: ದಕ್ಷಿಣ ಕೊಡಗಿನ ಕಾಫಿ ತೋಟವೊಂದರಲ್ಲಿ ಹುಲಿ ಕಾಣಿಸಿಕೊಂಡು ಮತ್ತೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಪೊನ್ನಂಪೇಟೆ ತಾಲೂಕಿನ ಕಿರುಗೂರು ಮುಖ್ಯ ರಸ್ತೆಯ ಶಾಲೆಯ ಸಮೀಪವಿರುವ ಕೊರಕುಟ್ಟಿರ ರಾಜಪ್ಪ ಅವರ ತೋಟದಲ್ಲಿ ಬುಧವಾರ ಸಂಜೆ 5 ಸುಮಾರಿಗೆ ಹುಲಿ ಕಂಡು ಬಂದಿದೆ.
ತೋಟದಿಂದ ತೆರಳುತ್ತಿದ್ದ ರಾಜಪ್ಪ ಅವರ ಪುತ್ರ ಸವಿ ದೇವಯ್ಯ ಅವರಿಗೆ ದೂರದಲ್ಲಿ ಹುಲಿ ಗೋಚರಿಸಿದ್ದು, ಪೊನ್ನಂಪೇಟೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಹಾಗೂ ಸಿಬಂದಿ ಹುಲಿಗಾಗಿ ಶೋಧ ನಡೆಸಿದ್ದಾರೆ. ಶಸ್ತ್ರಸಜ್ಜಿತ ಅರಣ್ಯ ಸಿಬಂದಿಯ ಒಂದು ತಂಡ ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.
ಕೆಲವು ದಿನಗಳ ಹಿಂದೆ ಕುಟ್ಟ ಕೆ.ಬಾಡಗ ಚೂರಿಕಾಡು ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶೋತದ ನಡೆಸಿದ ಅರಣ್ಯ ಇಲಾಖೆ ಒಂದು ಹೆಣ್ಣು ಹುಲಿಯನ್ನು ಸೆರೆ ಹಿಡಿದಿತ್ತು. ಈ ಭಾಗದಲ್ಲಿ ಸಂಚರಿಸುತ್ತಿರುವ ಪ್ರತ್ಯೇಕ 2 ಹುಲಿಗಳ ಸೆರೆಗೂ 4 ದಿನಗಳ ಕಾಲ ಶೋಧ ನಡೆಸಲಾಗಿತ್ತು. ಆದರೆ ಯಾವುದೇ ಹುಲಿ ಪತ್ತೆಯಾಗದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸ ಲಾಗಿತ್ತು.
ಹುಲಿ ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಸ್ಥಳದಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಪೊನ್ನಂಪೇಟೆ ಆರ್‌ಎಫ್ಒ ಶಂಕರ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.