ಕೊಡಗಿನಲ್ಲಿ ಮೃಗಶಿರ ಆರ್ಭಟ: ಶಾಲೆ-ಕಾಲೇಜುಗಳಿಗೆ ಇಂದು ರಜೆ


Team Udayavani, Jun 11, 2018, 6:00 AM IST

z-bhagamandala-1.jpg

ಮಡಿಕೇರಿ: ಮೃಗಶಿರ ಮಳೆಯ ಆರ್ಭಟದಿಂದ ಕೊಡಗು ಜಿಲ್ಲೆ ತಲ್ಲಣಗೊಂಡಿದೆ. ಭಾರೀ ಗಾಳಿ ಮಳೆಗೆ ಸಾಲು ಸಾಲು ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ತೀವ್ರತೆ ಜಿಲ್ಲೆಯಾದ್ಯಂತ ಹೆಚ್ಚಿದ್ದು, ಕಾವೇರಿಯ ಉಗಮಸ್ಥಾನವಾದ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಯಾಗುತ್ತಿದೆ. ಭಾಗಮಂಡಲ ಮತ್ತು  ಅಯ್ಯಂಗೇರಿ ರಸ್ತೆಗಳ ಮೇಲೆ ನದಿ ನೀರು ಹರಿಯಲಾರಂಭಿಸಿದ್ದು, ಕಾವೇರಿಯ ನೀರಿನ ಮಟ್ಟ  ಹೆಚ್ಚಿದೆ.
ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆೆಯ ಹಿನ್ನೆಲೆಯಲ್ಲಿ ಅಂಗನವಾಡಿಗಳು ಸೇರಿದಂತೆ ಶಾಲಾ ಕಾಲೇಜುಗಳಿಗೆ ಜೂ.11 ರಂದು ರಜೆ ಘೋಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ತಹಶೀಲ್ದಾರ್‌ ಹಾಗೂ ಅಧಿಕಾರಿಗಳ ತಂಡದೊಂದಿಗೆ ಭಾಗಮಂಡಲಕ್ಕೆ ಭೇಟಿ ನೀಡಿ ಜಲಾವೃತಗೊಂಡಿರುವ ಪ್ರದೇಶಗಳನ್ನು ಪರಿಶೀಲಿಸಿದರು. ಪ್ರವಾಹದಿಂದ ಕಷ್ಟ, ನಷ್ಟಗಳು ಸಂ»ವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನುಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಭಿಕಾರಿ ಸೂಚನೆ ನೀಡಿದರು. 

ಶನಿವಾರ ಬೆಳಗ್ಗಿನಿಂದ ರವವಾರ ಬೆಳಗ್ಗಿನ ಅವಧಿಯವರೆಗೆ ತಲಕಾವೇರಿಯಲ್ಲಿ ಸರಿ ಸುಮಾರು 7 ಇಂಚು ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ 6.50 ಇಂಚು ಮಳೆಯಾಗಿದ್ದು, ಕ್ಷೇತ್ರ ವ್ಯಾಪ್ತಿಯ ಚೆಟ್ಟಿಮಾನಿ, ಚೇರಂಗಾಲ, ಕೋರಂಗಾಲ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಶುಕ್ರವಾರ ರಾತ್ರಿಯಿಂದ ತೀವ್ರತೆಯನ್ನು ಪಡೆದುಕೊಂಡ ಗಾಳಿ ಮಳೆಂದ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಬರೆಗಳು ಕುಸಿದಿವೆ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಕೆಸರು ತುಂಬಿದ ಹಾದಿಯಲ್ಲಿ ವಾಹನ ಚಾಲನೆ ದುಸ್ತರವಾಗಿದೆ. ಗೌಳಿಬೀದಿ ಸೇರಿದಂತೆ ಕೆಲವು ಭಾಗಗಳಲ್ಲಿ ಅಪೂರ್ಣಗೊಂಡ ಯುಜಿಡಿ ಕಾಮಗಾರಿುಂದ ರಸ್ತೆ ಕುಸಿತ ಉಂಟಾಗಿದೆ. ಕೊಹಿನೂರ್‌ ರಸ್ತೆ ಬಳಿಯ ಸೇತುವೆಯಲ್ಲಿ ದೊಡ್ಡ ಹೊಂಡವಾಗಿದ್ದು, ಅಪಾಯದ ಸ್ಥಿತಿ ಕಂಡು ಬಂದಿದೆ. ಗುಡ್ಡ ಪ್ರದೇಶದಲ್ಲಿ ಮನೆ ನಿಮಿಸಿಕೊಂಡಿರುವ ನಿವಾಸಿಗಳು ಆತಂಕವನ್ನು ಎದುರಿಸುತ್ತಿದ್ದಾರೆ. ಮುಂಜಾಗೃತಾ ಕ್ರಮಗಳ ಬಗ್ಗೆ ನಗರಸಭಾ ಅಧಿಕಾರಿಗಳು ಈಗಾಗಲೇ ಎತ್ತರ ಪ್ರದೇಶದ ನಿವಾಸಿಗಳಿಗೆ ಸಲಹೆ ನೀಡಿದ್ದಾರೆ.

ಉಳಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮಹಾಮಳೆಯಿಂದ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಭಾಗಮಂಡಲ, ಕಾಟಕೇರಿ, ಬಿಳಿಗೇರಿ, ಮಾದಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಮುಖ್ಯ ರಸ್ತೆಯ ಮೇಲೆ ಬೃಹತ್‌ ಮರಗಳು ಹಾಗೂ ವಿದ್ಯುತ್‌ ಕಂಬಗಳು ಧರೆಗುರುಳಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾುತು.

ಸುಂಟಿಕೊಪ್ಪ ಹೋಬಳಿ ವಿಭಾಗದಲ್ಲಿ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ತೊಡಕಾಗಿದೆ. ವಿದ್ಯುತ್‌ ಕಂಬಗಳು ನೆಲಕಚ್ಚಿದ್ದು, ಗ್ರಾಮೀಣ ಪ್ರದೇಶ ಕಾರ್ಗತ್ತಲಿನಲ್ಲಿದೆ.ಹೊಸತೋಟ, ಕಾಜೂರು, ಕೋವರ್‌ಕೊಲ್ಲಿ ಬಳಿಯೂ ಮರಗಳು ರಸ್ತೆಗುರುಳಿವೆ. ಚಳಿ ಗಾಳಿುಂದ ಪ್ರಾಣಿ ಪಕ್ಷಿಗಳು ಕೂಡ ಕಷ್ಟ ಅನುಭವಿಸುತ್ತಿದ್ದು, ಕಾರ್ಮಿಕರು ತೋಟಗಳಲ್ಲಿ ಕಾರ್ಯನಿರ್ವಹಿಸಲಾಗದ ಪರಿಸ್ಥಿತಿ ಇದೆ. ಆದರೆ ಅತಿ ಹೆಚ್ಚು ಮಳೆಯಾಗುವ ಭಾಗಮಂಡಲ ಹಾಗೂ ತಲಕಾವೇರಿ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಯಥಾಸ್ಥಿತಿ ಇದೆ. 

ಶನಿವಾರಸಂತೆ:  ಭಾರೀ ಗಾಳಿಗೆ ಮರದ ರೆಂಬೆಯೊಂದು ಬೈಕ್‌ ಸವಾರನ ಮೇಲೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಗುಡುಗಳಲೆಯಲ್ಲಿ ನಡೆದಿದೆ.

ಹಿತ್ತಲಕೇರಿ ಗ್ರಾಮದ ಗುಂಡಪ್ಪ ಹಾಗೂ ಗೊಪಾಲಪುರದ ಬಾಲು ಅವರುಗಳು ಬೈಕ್‌ನಲ್ಲಿ ಶನಿವಾರಸಂತೆಗೆ ಬಂದು ಮರಳಿ ಹಿತ್ತಲಕೇರಿಗೆ ಹೋಗುವಾಗ ಶನಿವಾರಸಂತೆ-ಸೋಮವಾರಪೇಟೆ ಮುಖ್ಯ ರಸ್ತೆಯ ಗುಡುಗಳಲೆಯಲ್ಲಿ   ಒಣಗಿ ನಿಂತಿದ್ದ ಮರದ ರೆಂಬೆಯೊಂದದ್ದಿವರ ಮೇಲೆ ಬಿದ್ದಿದೆ.ಗುಂಡಪ್ಪ ಅವರ ತಲೆ, ಕೈ ಹಾಗೂ ಇನ್ನಿತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಹಿಂಬದಿ ಸವಾರ ಬಾಲು ಅವರೂ ಗಾಯಗೊಂಡಿದ್ದಾರೆ.

ಟಾಪ್ ನ್ಯೂಸ್

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

2

Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್‌ ಮೂಲಕ ನಕ್ಸಲ್‌ ಸೋಮನ್‌ ವಿಚಾರಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.