ಮಡಿಕೇರಿ-ವೀರಾಜಪೇಟೆ ಹೆದ್ದಾರಿ: ಲಘು ವಾಹನಗಳಿಗೆ ಮುಕ್ತ
Team Udayavani, Aug 14, 2019, 6:34 AM IST
ಮಡಿಕೇರಿ: ಜಿಲ್ಲೆಯಲ್ಲಿ ಉಂಟಾದ ಪ್ರವಾಹ- ಭೂ ಕುಸಿತದಿಂದಾಗಿ ಬಂದ್ ಆಗಿದ್ದ ಕೆಲವು ರಸ್ತೆಗಳು ಸೋಮವಾರದಿಂದ ಸಂಚಾರಕ್ಕೆ ಮುಕ್ತವಾಗಿವೆಯಾದರೂ ಮತ್ತೆ ಕೆಲವು ರಸ್ತೆಗಳು ಇನ್ನೂ ಬಂದ್ ಆಗಿವೆ.
ಮಡಿಕೇರಿ-ವೀರಾಜಪೇಟೆ ರಾಜ್ಯ ಹೆದ್ದಾರಿಯ ಬೇತ್ರಿ ಸೇತುವೆಗೆ ಪ್ರವಾಹದ ಸಂದರ್ಭ ಮರ ಬಡಿದ ಪರಿಣಾಮ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದಾಗಿ ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬಸ್ ಸೇರಿದಂತೆ ಇತರ ವಾಹನಗಳು ಮಡಿಕೇರಿ- ಹಾಕತ್ತೂರು-ಮೂರ್ನಾಡು-ಕೊಂಡಂಗೇರಿ-ಹಾಲುಗುಂದ ಮಾರ್ಗವಾಗಿ ವೀರಾಜಪೇಟೆಗೆ ಸಂಚರಿಸಬಹುದಾಗಿದೆ.
ಸಿದ್ದಾಪುರ-ಕರಡಿಗೋಡು ರಸ್ತೆಯೂ ಸಂಚಾರಕ್ಕೆ ಮುಕ್ತವಾಗಿಲ್ಲ. ಸಿದ್ದಾಪುರದಿಂದ ಕರಡಿಗೋಡುವಿಗೆ ತೆರಳುವವರು ಮೈಸೂರು ರಸ್ತೆ, ಆರೆಂಜ್ ಕೌಂಟಿ ಮಾರ್ಗವಾಗಿ ಕರಡಿಗೋಡುವಿಗೆ ತೆರಳಬಹುದಾಗಿದೆ.
ಮೂರ್ನಾಡುವಿನಿಂದ ನಾಪೋಕ್ಲುವಿಗೆ ತೆರಳುವವರು ಹೊದ್ದೂರು, ಬಲಮುರಿ, ಪಾರಾಣೆ ಮೂಲಕ ನಾಪೋಕ್ಲುವಿಗೆ ಸಂಚರಿಸಬಹುದಾಗಿದ್ದು, ಸಿದ್ದಾಪುರ-ಕೊಂಡಂಗೇರಿ ಮಾರ್ಗವಾಗಿ ತೆರಳ ಬೇಕಾದವರು ಒಂಟಿಯಂಗಡಿ, ದೇವಣಗೇರಿ ಹಾಲು ಗುಂದ ಮಾರ್ಗವಾಗಿ ಕೊಂಡಂಗೇರಿಗೆ ಸಂಚರಿಸ ಬಹುದಾಗಿದೆ.
ಗಾಳಿಬೀಡು-ಪಾಟಿ-ಕಾಲೂರು ಮಾರ್ಗವೂ ಬಂದ್ ಆಗಿರುವುದರಿಂದ ಕಾಲೂರಿಗೆ ತೆರಳುವವರು ಕೆ. ನಿಡುಗಣೆ, ಹೆಬ್ಬೆಟ್ಟಗೇರಿ-ದೇವಸ್ತೂರು ಮಾರ್ಗವಾಗಿ ಕಾಲೂರಿಗೆ ಸಂಚರಿಸಬಹುದಾಗಿದೆ.
ಮಡಿಕೇರಿ- ವೀರಾಜಪೇಟೆ- ಮಾಕುಟ್ಟಕ್ಕೆ ತೆರಳು ವವರು ಮಡಿಕೇರಿ-ಹಾಕತ್ತೂರು- ಮೂರ್ನಾಡು- ಕೊಂಡಂಗೇರಿ-ಹಾಲುಗುಂದ- ವೀರಾಜಪೇಟೆ- ಗೋಣಿಕೊಪ್ಪ, ಪೊನ್ನಂಪೇಟೆ ಕುಟ್ಟ ಮಾರ್ಗವಾಗಿ ಕೇರಳದ ಮೂಲಕ ಮಾಕುಟ್ಟ ತಲುಪಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.