“ಮಾಲ್ದಾರೆ ಸ.ಸಂ. ವಿರುದ್ಧದ ಆರೋಪ ನಿರಾಧಾರ’
Team Udayavani, Apr 10, 2017, 4:41 PM IST
ಮಡಿಕೇರಿ: ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಿಂದ ಭಾರೀ ಪ್ರಮಾಣದ ಕರಿಮೆಣಸು ದಾಸ್ತಾನು ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಆಡಳಿತ ಮಂಡಳಿಯ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಸ್ಪಷ್ಟಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪ ಮಾಡುತ್ತಿರುವವರು ಸೂಕ್ತ ದಾಖಲೆಗಳಿದ್ದಲ್ಲಿ ತನಿಖಾಧಿಕಾರಿ ಗಳಿಗೆ ನೀಡಿ ಕಾನೂನಾತ್ಮಕ ಕರ್ತವ್ಯವನ್ನು ಮೆರೆಯಲಿ ಎಂದು ಒತ್ತಾಯಿಸಿದರು.
ಸಂಘದಲ್ಲಿ ದಾಸ್ತಾನಿರಿಸಲಾಗಿದ್ದ ಸಿದ್ದಾರುಕ ವರ್ತಕರೊಬ್ಬರ ಅಂದಾಜು 48 ಲಕ್ಷ ಮೌಲ್ಯದ 104 ಚೀಲ (7345 ಕೆ.ಜಿ.) ಕರಿಮೆಣಸು ಕಾಣೆಯಾಗಿರುವ ವಿಚಾರ ಮಾರ್ಚ್ 3ರಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸಂಘದ ಆಡಳಿತ ಮಂಡಳಿ ತತ್‌ಕ್ಷಣ ಕಾರ್ಯ ಪ್ರವೃತ್ತವಾಗಿದೆ ಮತ್ತು ಈ ಸಂಬಂಧ ದಾಸ್ತಾನಿನ ಉಸ್ತುವಾರಿ ಹೊತ್ತಿದ್ದ ಮೈಕಲ್ ಎಂಬವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರನ್ನು ದಾಖಲಿಸಿದೆ. ಪ್ರಸ್ತುತ ಈ ಸಂಬಂಧ ಪೊಲೀಸ್ ತನಿಖೆ ಹಾಗೂ ಸಹಕಾರ ಇಲಾಖಾ ತನಿಖಾ ಕಾರ್ಯ
ಪ್ರಗತಿಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ವಿರುದ್ಧದ ಆರೋಪಗಳು ಸತ್ಯವಲ್ಲವೆಂದು ಚೇರಂಡ ನಂದಾ ಸುಬ್ಬಯ್ಯ ಅವರು ತಿಳಿಸಿದರು.
ಪ್ರಕರಣವನ್ನು ಮುಂದಿಟ್ಟುಕೊಂಡು ವ್ಯಕ್ತಿಗತ ತೇಜೋವಧೆ ಮಾಡುವ ಉದ್ದೇಶದಿಂದ ಸಂಘದ ಸದಸ್ಯರಲ್ಲದವರು ತಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ಆರೋಪಗಳಿಗೆ ಸೂಕ್ತ ದಾಖಲೆಗಳಿದ್ದರೆ ತನಿಖಾಧಿಕಾರಿಗಳಿಗೆ ಒದಗಿಸಲಿ ಎಂದು ಒತ್ತಾಯಿಸಿದರು.
ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಿಲ್ಲೆಯಲ್ಲೆ ಮುಂಚೂಣಿಯಲ್ಲಿರುವ ಸಹಕಾರ ಸಂಘವಾಗಿದ್ದು, 1991ರಲ್ಲಿ ಕೆೇವಲ 12 ಲಕ್ಷ ರೂ.ಗಳಷ್ಟು ವಾರ್ಷಿಕ ವಹಿವಾಟು ನಡೆದಿದೆ. ಸಂಘ ಪ್ರಸ್ತುತ 75 ಕೊಟಿ ರೂ. ವಹಿವಾಟನ್ನು ನಡೆಸಿಕೊಂಡು ಬರುತ್ತಿದೆ. ಸಂಘದ ಮೂಲಕ 1,600 ರಷ್ಟಿರುವ ಸದಸ್ಯರಿಗೆ ಕೃಷಿ ಸಾಲ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಂಘ ಒದಗಿಸುತ್ತಿದೆ. ಸಂಘವು ತನ್ನ ದಾಸ್ತಾನಿನಲ್ಲಿ ವರ್ಷಂಪ್ರತಿ 350ರಿಂದ 450 ಟನ್‌ನಷ್ಟು ಕಾಫಿ ಕರಿ ಮೆಣಸನ್ನು ದಾಸ್ತಾನಿರಿಸಿಕೊಂಡು, ದಾಸ್ತಾನಿನ ಮೇಲೆ ಸಾಲ ಸೌಲಭ್ಯವನ್ನು ನೀಡುತ್ತಾ ಬರುತ್ತಿದೆಯೆಂದು ಮಾಹಿತಿ ನೀಡಿದರು.
ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿ ರುವ ಸಂಘದ ದಾಸ್ತಾನಿನಿಂದ ಕರಿಮೆಣಸು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.ಈ ಹಂತದಲ್ಲಿ ಸಂಘದ ಏಳಿಗೆಯನ್ನು ಸಹಿಸದ ಸ್ವಹಿತಾಸಕ್ತಿ ಗಳು ಸಂಘದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಸಿವೆ ಎಂದು ಟೀಕಿಸಿದರು.
ಘಟನೆಗೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ಸಿದ್ಧ ಇರುವುದಾಗಿ ಅವರು ತಿಳಿಸಿದರು.ಸತ್ಯಾಸತ್ಯತೆಯ ಬಗ್ಗೆ ಚರ್ಚಿಸಲು ಸಂಘದ ಸದಸ್ಯರ ಹಾಗೂ ಗ್ರಾಹಕರ ಸಭೆ ಕರೆಯಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ, ನಿರ್ದೇಶಕರಾದ ಚಿಣ್ಣಪ್ಪ, ಜೋಯಪ್ಪ ಹಾಗೂ ಸಿ.ಎ. ಹಂಸ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.