ವಿಜ್ಞಾನ ಪದವಿಗೆ ತತ್ವಶಾಸ್ತ್ರ, ಯೋಗ
Team Udayavani, Feb 2, 2019, 3:48 AM IST
ಉಳ್ಳಾಲ: ವಿಜ್ಞಾನ ಪದವಿಯಲ್ಲಿ ತಣ್ತೀಶಾಸ್ತ್ರ ಮತ್ತು ಯೋಗ ಶಿಕ್ಷಣ, ಶ್ರೇಯಾಂಕ ಪದ್ಧತಿ ಆಯ್ಕೆ ಆಧಾರಿತ ಸಿಜಿಪಿಎ ಆಧಾರದಲ್ಲಿ ರ್‍ಯಾಂಕ್ ವಿನಿಮಯಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ| ಈಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಶುಕ್ರವಾರ ವಿವಿಯ ಸೆನೆಟ್ ಸಭಾಂಗಣದಲ್ಲಿ ಈ ಸಭೆ ನಡೆಯಿತು. ವಿ.ವಿ.ಯು ವಿಜ್ಞಾನ ಪದವಿಯಲ್ಲಿ ತಣ್ತೀಶಾಸ್ತ್ರ ಮತ್ತು ಯೋಗ ವಿಜ್ಞಾನವನ್ನು ಐಚ್ಛಿಕ ನೈಜ ಕಲಿಕಾ ವಿಷಯವಾಗಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ವಿಜ್ಞಾನ ಪದವಿಯ ಪಠ್ಯವನ್ನು ಪುನರ್ ರೂಪಿಸಿ, ಹೊಸ ಪಠ್ಯಕ್ರಮಕ್ಕೆ ಶೈಕ್ಷಣಿಕ ಮಂಡಳಿಯ ಅನುಮೋದನೆ ಪಡೆದುಕೊಳ್ಳಲಾಯಿತು.
ಪ್ರೊ| ಈಶ್ವರ್ ಮಾಹಿತಿ ನೀಡಿ, ವಿಜ್ಞಾನ ಪದವಿಯಲ್ಲಿ ಯೋಗ ಮತ್ತು ಫಿಲಾಸಫಿಯನ್ನು ಐಚ್ಛಿಕ ಕಲಿಕೆಯಾಗಿ ಹೊಸ ಪಠ್ಯಕ್ರಮವನ್ನು ರೂಪಿಸುವ ಮೂಲಕ ಪ್ರಥಮ ಬಾರಿಗೆ ಇಂತಹ ಸೃಜನಾತ್ಮಕ ಪ್ರಯೋಗ ರೂಪಿಸ ಲಾಗುತ್ತಿದೆ. ಇದರಿಂದ ವಿದ್ಯಾರ್ಥಿ ಸಮೂಹಕ್ಕೆ ಲಾಭವಾಗಲಿದೆ. ಪಠ್ಯ ಪರಿಷ್ಕರಣೆಯಲ್ಲಿ ಕಲಾ ಪದವಿ, ವಿಜ್ಞಾನ ಪದವಿ, ಬಿ.ಕಾಂ. ಮತ್ತು ಬಿಬಿಎಂ ಕೋರ್ಸ್‌ಗಳ ಭಾಷಾ ವಿಷಯಗಳಲ್ಲಿ ಸಮಾನತೆಯನ್ನು ತರಲಾಗಿದೆ ಎಂದರು.
ಕಾನೂನು ಸ್ನಾತಕೋತ್ತರ ಅಧ್ಯಯನ
ಸ್ನಾತಕೋತ್ತರ ಕಾನೂನು ಅಧ್ಯಯನ ಮತ್ತು ಸಂಶೋಧನ ವಿಭಾಗ ಪ್ರಾರಂಭಿಸಿ ಮಾಸ್ಟರ್ ಆಫ್ ಲಾ (ಎಲ್‌ಎಲ್ ಎಂ) ಪದವಿ ಪ್ರಾರಂಭಿಸಲು ನಿರ್ಣಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಯಾರಿಸಲಾದ ಪಠ್ಯಕ್ರಮವನ್ನು ಅನುಮೋದಿಸಲಾಯಿತು. ಕುಲ ಸಚಿವ ಪ್ರೊ| ಎ.ಎಂ. ಖಾನ್ ಮಾಹಿತಿ ನೀಡಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿ.ವಿ.ಯು ಎಲ್‌ಎಲ್‌ಎಂ ಪದವಿ ಆರಂಭಿಸಲಿದೆ. ಇದರೊಂದಿಗೆ ಕಲೆ, ವಿಜ್ಞಾನ ಮತ್ತು ವಾಣಿಜ್ಯದ ಪ್ರತೀ ಬೋಧನ ವಿಭಾಗದಲ್ಲಿ ಪ್ರಶ್ನೆಪತ್ರಿಕೆಯ ಮಾದರಿಗಳಲ್ಲಿ ಏಕರೂಪತೆ ಅನುಸರಿಸ ಲಾಗುವುದು ಎಂದರು.
ಸ್ವಾಯತ್ತ ಸ್ಥಾನಮಾನ
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ 2018-19ನೇ ಸಾಲಿಗೆ ಪದವಿ ಕೋರ್ಸ್‌ಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಲು ನಿರ್ಧರಿಸಲಾಯಿತು. ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್ ಗಳಡಿ ಎಂಎಸ್‌ಸಿ ಸ್ನಾತಕೋತ್ತರ ಹಾಗೂ ಎಂಬಿಎಯಲ್ಲಿ ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್‌ಗಳಿಗೆ ಅನುಮೋದನೆ ನೀಡಲಾಯಿತು.
ಎಂಕಾಂ (ಎಚ್‌ಆರ್‌ಡಿ) ಪದವಿಯ ಪರಿಷ್ಕೃತ ಕಾರ್ಯಯೋಜನೆ ಹಾಗೂ ಪರಿಷ್ಕೃತ ಪಠ್ಯಕ್ರಮ, ಪಿಎಚ್‌ಡಿ ವಿನಿಮಯ 2018, ಪಿಎಚ್‌ಡಿ ಯೋಗ ವಿಜ್ಞಾನ ಪದವಿ ಕೋರ್ಸ್, ಯೋಗವಿಜ್ಞಾನ ಪಿ.ಜಿ. ಡಿಪ್ಲೊಮಾ ಕಾರ್ಯಕ್ರಮ ಪರಿಷ್ಕೃತ ವಿನಿಮಯ ಹಾಗೂ ಪಠ್ಯಕ್ರಮ, ಯೋಗ ವಿಜ್ಞಾನ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವಿಕೆಗಾಗಿ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು.
ಚಿನ್ನದ ಪದಕ-ದತ್ತಿ ಉಪನ್ಯಾಸ
ವಿಶ್ರಾಂತ ಕುಲಪತಿ ಪ್ರೊ| ಕೆ. ಬೈರಪ್ಪ ದತ್ತಿ ಉಪನ್ಯಾಸ ನಿಧಿ ಮತ್ತು ಚಿನ್ನದ ಪದಕ, ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಪ್ರೊ| ಜೋಗನ್ ಶಂಕರ್ ಅವರ ಗೌರವಾರ್ಥ ಚಿನ್ನದ ಪದಕ ದತ್ತಿ ನಿಧಿ ಸ್ಥಾಪನೆ, ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ರೀಸೆಂಟ್ ಅಡ್ವಾನ್ಸಸ್ ಇನ್ ಮೆಟೀರಿಯಲ್ ಸೈನ್ಸ್ ಆ್ಯಂಡ್ ಬಯೋಫಿಸಿಕ್ಸ್ -2018 ಗೌರವಾರ್ಥ ದತ್ತಿ ಉಪನ್ಯಾಸ ನಿಧಿ ಮತ್ತು ಚಿನ್ನದ ಪದಕ ದತ್ತಿ ನಿಧಿ ಹಾಗೂ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಎ.ಕೆ. ಬರಡೋಲ್ ದತ್ತಿ ಉಪನ್ಯಾಸ ನಿಧಿ ಸ್ಥಾಪನೆಗೂ ಅನುಮೋದನೆ ನೀಡಲಾಯಿತು. ಕುಲಸಚಿವ ಪ್ರೊ| ಎ.ಎಂ. ಖಾನ್, ಪರೀಕ್ಷಾಂಗ ಕುಲಸಚಿವ ಪ್ರೊ| ರವೀಂದ್ರ ಆಚಾರ್, ಹಣಕಾಸು ಅಧಿಕಾರಿ ಡಾ| ದಯಾನಂದ ಉಪಸ್ಥಿತರಿದ್ದರು.
ಸಿಜಿಪಿಎ ಆಧಾರದಲ್ಲಿ ರ್‍ಯಾಂಕ್
ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಡೀನ್‌ಗಳ ಸಮಿತಿ ಸಭೆಯಲ್ಲಿ ರ್‍ಯಾಂಕ್ ಘೋಷಣೆ ಬಗ್ಗೆ ಹೊಸ ಮಾರ್ಗಸೂಚಿ ತಯಾರಿಸಲಾಗಿದೆ. ಅದರಂತೆ ಪದವಿ ಮಟ್ಟ ಹಾಗೂ ಸ್ನಾತಕೋತ್ತರ ಮಟ್ಟದಲ್ಲಿ ಜಾರಿಗೆ ತಂದಿರುವ ಶ್ರೇಯಾಂಕ ಪದ್ಧತಿ ಪ್ರಕಾರ ಆಯ್ಕೆ ಆಧಾರಿತ ಸಿಜಿಪಿಎ ಆಧಾರದಲ್ಲಿ ರ್‍ಯಾಂಕ್ ನೀಡಲು ನಿರ್ಧರಿಸಲಾಗಿದೆ ಎಂದು ಪ್ರೊ| ಈಶ್ವರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.