“ಮಂಕುತಿಮ್ಮನ ಕಗ್ಗ ‘ ಕೃತಿ ಕನ್ನಡದ ಭಗವದ್ಗೀತೆ: ನಟೇಶ್
Team Udayavani, Mar 28, 2019, 6:30 AM IST
ಮಡಿಕೇರಿ :””ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ” ಎಂದು ಕರೆಯುತ್ತಾರೆ. ಭಗವದ್ಗೀತೆ ಹೇಗೆ ನಮಗೆ ವಿಶ್ವ ಜೀವನದ ರಹಸ್ಯವನ್ನು ತಿಳಿಸುತ್ತದೆಯೋ, ಹಾಗೆ ಮಂಕುತಿಮ್ಮನ ಕಗ್ಗ ಜೀವನದ ಸಾರವನ್ನು ತಿಳಿಸುತ್ತದೆ ಎಂದು ಶಿವಮೊಗ್ಗದ ಖ್ಯಾತ ಪ್ರವಚನಕಾರ ಜಿ.ಎಸ್.ನಟೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕೊಡಗು ಪತ್ರಿಕಾ ಭವನ ಟ್ರಸ್ಟ್, ಮತ್ತು ಭಾರತೀಯ ವಿದ್ಯಾ ಭವನ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ನಡೆದ ಮಂಕುತಿಮ್ಮನ ಕಗ್ಗದ ಕುರಿತು ಪ್ರವಚನ ನೀಡಿ ದರು.
ಡಿ.ವಿ.ಗುಂಡಪ್ಪರವರು ಸಾಹಿತ್ಯ ಪಂಡಿತರಿಗೆ ಮಾತ್ರ ತಲುಪಿದರೆ ಸಾಲದು ಪಾಮರರೀಗೂ ಅದು ತಲುಪಬೇಕು ಎನ್ನುವ ಉದ್ದೇಶದಿಂದ ಸುಲಭ ಕನ್ನಡದಲ್ಲಿ ಕಗ್ಗ ರಚಿಸಿದರು ಆದರೆ ಕಗ್ಗದ ಮೇಲೆ ನಡೆದಂತಹ ವಿಶ್ಲೇಷಣೆ, ಉಪನ್ಯಾಸಗಳು, ಸಂವಾದಗಳು ಕನ್ನಡದ ಯವುದೇ ಕೃತಿಯ ಬಗ್ಗೆ ಆಗಿಲ್ಲ ಎನ್ನುವಹದೇ ಕಗ್ಗದ ವಿಶೇಷ ಎಂದರು.
ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಭವನದ ಪ್ರಮುಖ ಡಾ. ಪಾಟ್ಕರ್ ಅವರು ಉದ್ಘಾಟಿಸಿದರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೇವತಿ ರಮೇಶ್ ಮತ್ತು ತಂಡ ನಾಡಗೀತೆ ಹಾಡಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ ಉಪಸ್ಥಿರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ.ರಮೇಶ್, ಬಿ.ಎ.ಷಂಶುದ್ದೀನ್, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ, ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್, ಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಶೋಭಾ ಸುಬ್ಬಯ್ಯ, ಬಳಗದ ಕೋಶಾಧಿಕಾರಿ ಡಿ. ರಾಜೇಶ್ ಪದ್ಮನಾಭ, ಭಾರತೀಯ ವಿದ್ಯಾ ಭವನದ ಬಾಲಾಜಿ ಕಶ್ಯಪ್ ಉಪಸ್ಥಿತರಿದ್ದರು.
ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್. ಐ. ಮುನೀರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು. ಕಎಂ.ಇ.ಮೊಹಿದ್ದೀನ್ ಪ್ರವಚನಕಾರರ ಪರಿಚಯ ಮಾಡಿದರು. ಬ ವಿಲ#ರ್ಡ್ ಕ್ರಾಸ್ತಾ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯರಾದ ಅಂಬೆಕಲ್ ನವೀನ್ ಕುಶಾಲಪ್ಪ ವಂದಿಸಿದರು
ಡಿವಿಜಿ ಸುಸಂಸ್ಕೃತ ರಾಜಕಾರಣಿ, ಪತ್ರಕರ್ತ
ಡಿವಿಜಿಯವರು ತಮ್ಮ ಜೀವನದ ಅನುಭವಗಳನ್ನು ತಮ್ಮ ಹಲವಾರು ಕೃತಿಗಳ ಮೂಲಕ ನಮಗೆ ನೀಡಿದ್ದಾರೆ. ಕೇವಲ ಸಾಹಿತಿಗಳು ಮಾತ್ರವಾಗಿರದೆ ಸುಸಂಸ್ಕೃತ ರಾಜಕಾರಣಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತರೂ ಆಗಿದ್ದರು. ಇಂದಿನ ಯುವಜನಾಂಗ ಮೊಬೈಲ್ ಮತ್ತು ಇಂಟರ್ ನೆಟ್ ನಿಂದ ಕೆಲ ಸಮಯವಾದರೂ ಹೊರಬಂದು ಸಾಹಿತ್ಯದ ಅಭ್ಯಾಸ ಮಾಡಬೇಕಿದೆ.
ಓದುವ ಅಭ್ಯಾಸವೇ ಮರೆತಿರುವ ಅವರಿಗೆ ಓದುವ ಮತ್ತು ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನಟೇಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.