ಮರಾಠ ಮರಾಟಿ ಕ್ರೀಡಾಕೂಟ : “ಕಾನೂರು ಗೂಗ್ಲಿ’ ತಂಡ ಚಾಂಪಿಯನ್
Team Udayavani, May 21, 2019, 6:10 AM IST
ಮಡಿಕೇರಿ :ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಬಾಂಧವರಿಗಾಗಿ ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಿದ್ದ 6ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ “”ಕಾನೂರು ಗೂಗ್ಲಿ” ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ, ಕೊಡಗು ಜಿಲ್ಲಾ ಅಂಭಾಭವಾನಿ ಯುವ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ತಾಳತ್ತಮನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಡಿಕೇರಿ ತಾಲೂಕಿನ ಮೂರ್ನಾಡಿನಲ್ಲಿ ಸಮಾಜಬಾಂಧವರಿಗೆ 2 ದಿನಗಳ ಕಾಲ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಫೈನಲ್ ಪಂದ್ಯಟದಲ್ಲಿ ರಾಯಲ್ ಫ್ರೆಂಡ್ಸ್ ಕರಿಕೆ ಮತ್ತು ಕಾನೂರು ಗೂಗ್ಲಿ ತಂಡ ಪ್ರಶಸ್ತಿಗಾಗಿ ಹಣಾಹಣಿ ನಡೆಸಿತು. ಟಾಸ್ ಸೋತ ಗೂಗ್ಲಿ ತಂಡ ನಿಗಧಿತ 6 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 60 ರನ್ ಕಲೆ ಹಾಕಿತು. ತಂಡದ ಪರ ಮೋಹನ್ 16, ಹರೀಶ್ 10, ಜೀವನ್ 11 ರನ್ ದಾಖಲಿಸಿದರು. ಗುರಿ ಬೆನ್ನತ್ತಿದ ರಾಯಲ್ ಫ್ರೆಂಡ್ಸ್ ಕರಿಕೆ ತಂಡ ನಿಗದಿತ ಓವರ್‌ನಲ್ಲಿ 59ರನ್ ಕಲೆ ಹಾಕಿ 1 ರನ್ ಅಂತರದಲ್ಲಿ ವೀರೋಚಿತ ಸೋಲು ಕಂಡಿತ್ತು. ಪರಿಣಾಮವಾಗಿ 2019ರ ಚಾಂಪಿಯನ್ ತಂಡವಾಗಿ ಕಾನೂರು ಗೂಗ್ಲಿ ತಂಡ ಹೊರನಡೆದರೆ, ಕರಿಕೆ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಅನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.
ವಾಲಿಬಾಲ್ ಅಂಚಿಗೈಯ್ಸ ಚಾಂಪಿಯನ್
ಪುರುಷರ ವಾಲಿಬಾಲ್‌ನ ಫೈನಲ್ ಪಂದ್ಯಾಟದಲ್ಲಿ ಅಂಚಿಗೈಯ್ಸ ಕಾನೂರು ತಂಡ 2-1 ಸೆಟ್‌ಗಳಿಂದ ರಾಯಲ್ ಫ್ರೆಂಡ್ಸ್ ಕರಿಕೆ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಅಂಚಿಗರ್ಲ್ಸ್ ಕಾನೂರು ತಂಡ ಪ್ರಥಮ ಸ್ಥಾನಗಳಿಸಿದರೆ, ಮರಾಠ ಗರ್ಲ್ಸ್ ಬದ್ರಗೋಳ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಅಂಚಿಗರ್ಲ್ಸ್ ಪ್ರಥಮ ಸ್ಥಾನ ಪಡೆದರೆ, ಮರಾಠ ಗ್ರೂಪ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ಗಂಡುಗಲಿ ತಂಡ ಪ್ರಥಮಸ್ಥಾನ ಪಡೆದರೆ, ಬದ್ರಗೋಳ ಮರಾಠ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕ್ರೀಡಾ ವಿಜೇತರು
5ರಿಂದ 7 ವರ್ಷದ 50 ಮೀಟರ್ ಓಟದ ಸ್ಪರ್ಧೆಯಲ್ಲಿ ನಿಕಿಲ್(ಪ್ರ), ಜಿತನ್(ದ್ವಿ), ಕೋಶಲ್(ತೃ) ಹೆಣ್ಣು ಮಕ್ಕಳಲ್ಲಿ ಯಕ್ಷಿತ(ಪ್ರ), ಡಿಂಪಲ್(ದ್ವಿ), ಯಶೀಕ(ತೃ) ಸ್ಥಾನ ಪಡೆದುಕೊಂಡರು. 8 ರಿಂದ 12 ವರ್ಷದ ಬಾಲಕಿಯರ ವಿಭಾಗದಲ್ಲಿ ಅಮೃತ(ಪ್ರ), ಅಶ್ವಿನಿ(ದ್ವಿ), ಮೋಕ್ಷಿತ (ತೃ), ಬಾಲಕರ ವಿಭಾಗದಲ್ಲಿ ದನುಸ್Õ(ಪ್ರ), ಭುವನ್(ದ್ವಿ), ಎ.ಎನ್.ಧನುಸ್Õ(ತೃ) ಸ್ಥಾನ ಪಡೆದರು. 30ರಿಂದ 45 ವರ್ಷದ ವಿಭಾಗದಲ್ಲಿ ವಿಕಾಸ್(ಪ್ರ), ಆದರ್ಶ್ ಅದ್ಕಲೇಗಾರ್(ದ್ವಿ), ಸುರೇಶ್(ತೃ), ಮಹಿಳೆಯರ ವಿಭಾಗದಲ್ಲಿ ಅಶ್ವಿನಿ(ಪ್ರ), ಜಲಜಾಕ್ಷಿ(ದ್ವಿ), ರೇಖವತಿ(ತೃ) ಸ್ಥಾನ ಪಡೆದುಕೊಂಡರು. ಗೋಣಿಚೀಲ ಓಟದ ಪುರುಷರ ವಿಭಾಗದಲ್ಲಿ ವಿನೀತ್(ಪ್ರ), ಪುನಿತ್(ದ್ವಿ), ಮಹಿಳೆಯರ ವಿಭಾಗದಲ್ಲಿ ರೇಖಾವತಿ(ಪ್ರ), ಜಲಜಾಕ್ಷಿ(ದ್ವಿ)ಸ್ಥಾನ ಪಡೆದುಕೊಂಡರು. ಭಾರದ ಗುಂಡು ಎಸೆತ ವಿಭಾಗದಲ್ಲಿ ಗಣೇಶ್(ಪ್ರ), ವಿಕಾಸ್(ದ್ವಿ), ಆದರ್ಶ್ ಅದ್ಕಲೇಗಾರ್(ತೃ), ಮಹಿಳೆಯರ ವಿಭಾಗದಲ್ಲಿ ರೇಖಾವತಿ(ಪ್ರ), ಅಶ್ವಿನಿ(ದ್ವಿ), ರೂಪಾ(ತೃ) ಸ್ಥಾನ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.