ಮೇ 28: ಕೊಡಗು ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ
Team Udayavani, May 28, 2019, 6:01 AM IST
ಮಡಿಕೇರಿ : ಕೊಡಗು ಜಿಲ್ಲಾ ಪುಟ್ಬಾಲ್ ಅಸೋಸಿಯೇಷನ್ ವತಿಯಿಂದ 2019ನೇ ಸಾಲಿನ ಜಿಲ್ಲಾ ಮಟ್ಟದ ಪುಟ್ಬಾಲ್ ಲೀಗ್ ಪಂದ್ಯಾವಳಿ ಮೇ 28ರಿಂದ ಜೂ. 3ರವರೆಗೆ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಈ ಬಾರಿಯ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ರಾಜ್ಯ ಸಂಸ್ಥೆಗೆ ನೋಂದಾವಣೆಗೊಂಡ 16 ತಂಡಗಳು ಭಾಗವಹಿಸಲಿವೆ ಎಂದರು. ಈ ಲೀಗ್ ಪಂದ್ಯಾವಳಿಗೆ ಮುಖ್ಯ ಪ್ರಾಯೋಜಕರಾಗಿ ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆ, ಗೋಣಿಕೊಪ್ಪಲಿನ ಮುಳಿಯ ಜ್ಯುವೆಲರ್, ಮಡಿಕೇರಿಯ ಮಹೇಂದ್ರ ರೆಸಾರ್ಟ್ ಹಾಗೂ ಕೊಡಗಿನ ಹಲವು ದಾನಿಗಳು ಸಹಕಾರ ನೀಡಿದ್ದಾರೆ.
ಪಂದ್ಯಾವಳಿ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷನಾದ ತಾನೇ ನಿರ್ವಹಿಸಲಿರುವುದಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ಪ್ರಾಯೋಜಕ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.
ಅಸೋಸಿಯೇಷನ್‌ನ ಜಿಲ್ಲಾ ತಂಡ ಕೊಡಗು ಇಲೆವೆನ್ ಕಳೆೆದ ಬಾರಿಯ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ 3ನೇ ಸ್ಥಾನ ಪಡೆದು ಸಾಧನೆ ಮಾಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಉನ್ನತ ಮಟ್ಟದ ಸಾಧನೆ ಮಾಡುವ ಮತ್ತು ಫುಟ್ಬಾಲ್‌ಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳು ನಮ್ಮ ಮುಂದಿದೆ ಎಂದು ಮೋಹನ್ ಅಯ್ಯಪ್ಪ ಹೇಳಿದರು.
ಅಸೋಸಿಯೇಷನ್‌ನ ತೀರ್ಪುಗಾರ ಸಂಘದ ಅಧ್ಯಕ್ಷ ಮತ್ತು ಪ್ರಬಾರ ಕಾರ್ಯದರ್ಶಿ ಪಿ.ಎ.ನಾಗೇಶ್ ಮಾತನಾಡಿದರು.
ಈ ಲೀಗ್ ಪಂದ್ಯಾವಳಿಯಲ್ಲಿ ನೇತಾಜಿ ಕೊಡಗರಹಳ್ಳಿ, ಸಹರಾ ಸಂಸ್ಥೆ ಒಂಟಿಯಂಗಡಿ, ಆಕ್ಸ್‌ಪೋರ್ಡ್ ವೀರಾಜಪೇಟೆ, ಹಳ್ಳಿಗಟ್ಟು ಫುಟ್ಬಾಲ್ ಸಂಸ್ಥೆ ಕುಂದ, ಐಎನ್‌ಎಸ್ ಗುಡ್ಡೆಹೊಸೂರು, ಮ್ಯಾನ್ಸ್ ಕಾಂಪೌಂಡ್ ಮಡಿಕೇರಿ, ಮಿಲನ್ಸ್ ಅಮ್ಮತ್ತಿ, ಯಂಗ್ ಇಂಡಿಯಾ ಪಾಲಿಬೆಟ್ಟ, ಪನ್ಯಾ ಸಂಸ್ಥೆ ಸುಂಟಿಕೊಪ್ಪ, ವೈಷ್ಣವಿ ಸಂಸ್ಥೆ ಕಟ್ಟೆಮಾಡು, ಕ್ಯಾಪ್ಟನ್ಸ್ ಫುಟ್ಬಾಲ್ ಸಂಸ್ಥೆ ಪಾಲಿಬೆಟ್ಟ, ಸಿಟಿ ಯುನೈಟೆಡ್ ಸುಂಟಿಕೊಪ್ಪ, ಕೆ.ಕೆ.ಎಫ್.ಸಿ. ಚೆಟ್ಟಳ್ಳಿ, ಯೂನಿವರ್ಸಲ್ ರಂಗಸಮುದ್ರ, ಭಗವತಿ ಹಾಲುಗುಂದ, ರೋಜಾರಿಯೋ ಗೋಣಿಕೊಪ್ಪ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು. ಒಟ್ಟು 4 ಗುಂಪುಗಳಾಗಿ ಮಾಡಿ ಪ್ರತೀ ಗುಂಪಿನಿಂದ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ನೇರವಾಗಿ ಸೆಮಿಫೈನಲ್ ಪಂದ್ಯಾಟವನ್ನು ಏರ್ಪಡಿಸಿ ಆನಂತರ ಫೈನಲ್ ಪಂದ್ಯಾಟವನ್ನು ಏರ್ಪಡಿಸಲಾಗುವುದು.
ಕೇವಲ ಕೊಡಗು ಜಿಲ್ಲೆಯ ಆಟಗಾರರಿಗೆ ಮಾತ್ರ ಅಂದರೆ ಎ ಫಾರಂಗೆ ಸಹಿ ಮಾಡಿರುವ ಆಟಗಾರರಿಗೆ ಅವಕಾಶ ಇರುತ್ತದೆ. ಲೀಗ್ ಹಂತದಲ್ಲಿ ಒಟ್ಟು 24 ಪಂದ್ಯಗಳು ನಾಕೌಟ್ ಮಾದರಿಯಲ್ಲಿ 7 ಪಂದ್ಯಗಳು ಒಟ್ಟು 31 ಪಂದ್ಯಾಟಗಳನ್ನು ನಡೆಸಲಾಗುತ್ತದೆ. ಎಂದು ಪಿ.ಎ.ನಾಗೇಶ್ ಹೇಳಿದರು. ಗೋಷ್ಠಿಯಲ್ಲಿ ಅಸೋಸಿಯೇಷನ್‌ನ ರಾಜ್ಯ ಪ್ರತಿನಿಧಿ ಜಗದೀಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.