ಮೂರ್ನಾಡು: ಚಂಡಿಕಾಯಾಗ, ನೃತ್ಯೋತ್ಸವ ಸಮಾರಂಭ
Team Udayavani, May 28, 2019, 6:10 AM IST
ಮಡಿಕೇರಿ : ಮೂರ್ನಾಡಿನ ಅನ್ನಪೂಣೇಶ್ವರಿ ದೇವಾಯಲದ ಸೇವಾ ಪ್ರತಿಷ್ಠಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 3ನೇ ಚಂಡಿಕಾಯಾಗ ಹಾಗೂ ನೃತ್ಯೋತ್ಸವ ಸಮಾರಂಭವು ದೇವಾಲಯದ ಆವರಣದಲ್ಲಿ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಅನ್ನಪೂಣೇಶ್ವರಿ ದೇವಿಗೆ ರಂಗಪೂಜೆ, ಪಾರಾಯಣ, ಚಂಡಿಕಾ ಪಾರಾಯಣ, ಅಷ್ಟಾವದಾನ ಸೇವೆ, ಅಲಂಕಾರ ಪೂಜೆ ಹಾಗೂ ಚಂಡಿಕಾ ಯಾಗ ನಡೆಯಿತು.
ಈ ಸಂದರ್ಭ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚೈತ್ರಾ ಕುಂದಾರಪುರ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮಹಿಳೆಯರು ಸೇರಿ ದೇವಾಲಯವನ್ನು ನಡೆಸುವುತ್ತಿರುವುದು ಗಮನಾರ್ಹ. ಭಾರತದ ಧಾರ್ಮಿಕತೆಯಲ್ಲೂ ಹಾಗೂ ಪೌರಾಣಿಕ ಇತಿಹಾಸಗಳಲ್ಲಿ ಸ್ತ್ರೀಯರು ಶ್ರೇಷ್ಟಳು ಮತ್ತು ಪೂಜನೀಯಳಾಗಿದ್ದಾಗ ಮಹಿಳೆಯರಿಗೆ ಸಮಾಜತೆ ಬೇಕೆಂದು ಹೊರಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಹಿಂದಿನ ಕಾಲದಲ್ಲಿ ಸ್ತ್ರೀಯರು ಹಿರಿಯರ ಮಾರ್ಗದಶನದಲ್ಲಿ ನಡೆಯುತ್ತಿದ್ದರು. ಆದರೆ ಪ್ರಸ್ತುತ ಮಹಿಳೆಯರು ತಮ್ಮನ್ನು ಫ್ಯಾಶನ್ ಲೋಕದಲ್ಲಿ ತೊಡಗಿಸಿಕೊಂಡು ತಮ್ಮ ಸಮಾಜಿಕ ಗೌರವ, ಆರೋಗ್ಯ, ಸಂಪ್ರದಾಯವನ್ನು ಮರೆತಿರುವುದು ವಿಷಾದನೀಯ ಎಂದರು.
ನಮ್ಮ ದೇಶದ ಆಚಾರ, ವಿಚಾರವನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಸ್ತ್ರೀಯರ ಪಾತ್ರ ಮುಖ್ಯವಾಗಿದೆ. ಇದನ್ನು ಮರೆತರೆ ಭಾರತೀಯ ಸಂಸ್ಕೃತಿ ಪತನಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದ ಅವರು ಯುವತಿಯರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.
ನಂತರ ಯೋಧರಾದ ಹೆಚ್.ಆರ್. ರಾಜೇಶ್ ಅವರಿಗೆ ಚೈತ್ರಾ ಕುಂದಾರಪುರ ರûಾ ಬಂಧನ ಕಟ್ಟಿ ಶುಭ ಹಾರೈಸಿದರು.
ದೇವಾಲಯದ ಸಂಸ್ಥಾಪಕರಾದ ಮಹಾಭಲೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಭಾರತೀಯ ಸೇನಾ ಪಡೆಯ ಯೋಧರಾದ ಹೆಚ್.ಆರ್. ರಾಜೇಶ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಅನ್ನಪೂಣೇಶ್ವರಿ ದೇವಾಲಯದ ನಾಟ್ಯಂಜಲಿ ನೃತ್ಯ ಹಾಗೂ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯೋತ್ಸವ ನಡೆಯಿತು.
ಕುಮಾರಿ ಕಾವ್ಯಶ್ರೀ, ರಂಗಭೂಮಿ ಕಲಾವಿದ ವಿದ್ವಾನ್ ಎಂ.ಆರ್. ಚಂದ್ರಶೇಖರ್ ಹಾಗೂ ಕಾಂತೂರಿನ ತಬಲವಾದಕರಾದ ಕೆ.ವಿ. ಚಂದ್ರು ಅವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ನೃತ್ಯ ಶಿಕ್ಷಕಿಯಾದ ಹೇಮಾವತಿ ಕಾಂತರಾಜ್, ತಕ್ಕ ಮುಖ್ಯಸ್ಥರಾದ ಗ್ರೇಸಿ ವಿಜಯ ಮತ್ತು ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷರಾದ ಕೆ.ಬಿ. ಯಶೋದ, ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ. ಸುಕುಮಾರ್ ಹಾಗೂ ಪ್ರಮುಖರಾದ ಜಯಂತಿ ಲವಕುಮಾರ್ ಮತ್ತು ಸೇವಾ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.