‘ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ!’
ಮನೆಗೆ ಬೆಂಕಿ ಹಚ್ಚಿ, ಏಳು ಜನರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಭೋಜ: ಇಂದು ಮೃತದೇಹ ಪತ್ತೆ
Team Udayavani, Apr 6, 2021, 11:18 AM IST
ಮಡಿಕೇರಿ: “ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು” ಹೀಗೆಂದು ಗಂಡನ ಮನೆಯಲ್ಲಿರುವ ತನ್ನ ಮಗಳೊಂದಿಗೆ ಮೊಬೈಲ್ ಕರೆ ಮಾತನಾಡಿದವನು ಮುಗುಟಗೇರಿಯಲ್ಲಿ 7 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ದುಷ್ಕರ್ಮಿ ಭೋಜ.
ಮುಗುಟಗೇರಿಯ ಲೈನ್ ಮನೆಯ ಮೇಲೇರಿ ಮಲಗಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಂದವನೇ ನಿಗೂಢ ಜಾಗದಿಂದ ತನ್ನ ಮಗಳಿಗೆ ಕರೆ ಮಾಡಿದ್ದಾನೆ. ಈ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾತು ಮುಂದುವರೆಸಿರುವ ಭೋಜ “ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು, ಈಗ ನಾನು ಕೂಡ ಸಾಯ್ತೀನಿ ಎಂದು ಕರೆ ಕಟ್ ಮಾಡಿದ್ದಾನೆ.
ಇದನ್ನೂ ಓದಿ:ಪ್ರೇಮ ವಿಚಾರ: ಸಹೋದರಿ ಹತ್ಯೆ
ತನಿಖೆಯ ವೇಳೆ ಈ ಆಡಿಯೋ ತುಣುಕು ಬಹಿರಂಗಗೊಂಡಿದೆ. ಇದೀಗ ಭೋಜ ಆತ್ಮಹತ್ಯೆಗೆ ಶರಣಾಗಿರುವುದು ಖಾತ್ರಿಯಾಗಿದ್ದು, ಪೊನ್ನಂಪೇಟೆ ಸಮೀಪ ತಾನಿದ್ದ ಲೈನ್ ಮನೆಯ ತೋಟದಲ್ಲಿ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.
ಮತ್ತೊಂದೆಡೆ ಮೈಸೂರು ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ತೋಲ ಅವರ ಪತ್ನಿ ಭಾಗ್ಯ (28) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಿದ್ದಾರೆ. ಇವರ ಇಬ್ಬರು ಮಕ್ಕಳು ಘಟನೆ ನಡೆದ ದಿನವೇ ಮೃತ ಪಟ್ಟಿದ್ದರು. ಮುಗುಟಗೇರಿ ಘಟನೆಯಲ್ಲಿ ಮೃತರಾದವರ ಸಂಖ್ಯೆ ಈಗ 7 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಕೊಣಾಜೆ ಕಂಬ್ಲಪದವು ಗುಳಿಗ ದೈವದ ಕಟ್ಟೆಯಲ್ಲಿ ‘ಚಪ್ಪಲಿ’ ಪತ್ತೆ!
ಏಳು ಅಮಾಯಕರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಭೋಜನ ಮನೋಸ್ಥಿತಿಯ ಬಗ್ಗೆ ಸಮಾಜದಲ್ಲಿ ಧಿಕ್ಕಾರದ ಮನೋಭಾವನೆ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.