ಮುಳ್ಳೂರು ಶಾಲೆ: ಜೈವಿಕ ಅನಿಲ ಉತ್ಪಾದನಾ ಘಟಕ ಸ್ಥಾಪನೆ
Team Udayavani, Feb 24, 2019, 1:00 AM IST
ಶನಿವಾರಸಂತೆ: ಸ್ವನು ಭವದ ಕಲಿಕೆ, ಕ್ರಿಯಾಶೀಲತೆಯ ಚಟುವಟಿಕೆಗಳಿಗೆ ಹೆಸರುವಾಸಿಯಾದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಕಾಳಜಿಯ ಮತ್ತೂಂದು ಕಾರ್ಯ ಸೇರ್ಪಡೆಯಾಗಿದೆ. ಅದುವೇ ಜೈವಿಕ ಅನಿಲ ಉತ್ಪಾಧನಾ ಘಟಕದ ಸ್ಥಾಪನೆ. ಈ ಹಿಂದೆ ಸೋಲಾರ್ ಪಾರ್ಕ್ ಅನ್ನು ಸ್ಥಾಪಿಸಿ ಶಾಲಾ ಕಂಪ್ಯೂಟರ್ ಮತ್ತು ದೀಪಗಳು ಬೆಳಗುವಂತೆ ಮಾಡಿ ಸೌರಶಕ್ತಿಯ ಬಳಕೆಯ ಕುರಿತು ಜಾಗೃತಿ ಮೂಡಿಸದ್ದರು.
ಇದೀಗ ಶಾಲಾ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾಧಿಸಿ ಇಂಧನ ಉಳಿತಾಯದ ಅರಿವು ಮೂಡಿಸಲಾಗಿದೆ. ಐದನೆ ತರಗತಿಯ ಪರಿಸರ ಅದ್ಯಯನ ಪಠ್ಯದಲ್ಲಿ ಜೈವಿಕ ಅನಿಲ ಉತ್ಪಾನೆಯ ಕುರಿತಾಗಿ ತರಕಾರಿ ಸಿಪ್ಪೆ, ಆಹಾರ ತ್ಯಾಜ್ಯ, ಸಸ್ಯದ ಅವಶೇ‚, ಪ್ರಾಣಿಗಳ ಸಗಣಿ ಇತ್ಯಾದಿಗಳನ್ನು ಸದ್ಬಳಕೆ ಮಾಡಿಕೊಂಡು ಗಾಳಿಯ ಸಂಪರ್ಕ ಇಲ್ಲದೆ ಕೊಳೆಯಿಸಿದಾಗ ಜೈವಿಕ ಅನಿಲ ಉತ್ಪಾಧನೆಯಾಗುತ್ತದೆ ಎಂಬ ಮಾಹಿತಿಯನ್ನು ಸವಿಸ್ತಾರವಾಗಿ ತಳಿಸಿರುವ ಹಿನ್ನಲೆಯಲ್ಲಿ ಇದನ್ನು ಕಾರ್ಯರೂಪದಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕೆಂಬ ಉದ್ದೇಶದಿಂದ ಶಾಲಾ ಸಹ ಶಿಕ್ಷಕ ಸಿ.ಎಸ್.ನೇತೃತ್ವದಲ್ಲಿ ಶಿಕ್ಷಕರ ತಂಡ ಜೈವಿಕ ಅನಿಲ ಉತ್ಪಾಧನಾ ಘಟಕವನ್ನು ಸ್ಥಾಪಿಸಿದ್ದಾರೆ.
ಶಾಲಾ ಆವರಣದಲ್ಲಿ ನಿರುಪಯುಕ್ತವಾಗಿ ದುಸ್ಥಿತಿಯಲ್ಲಿದ್ದ ಮಳೆ ಕೊಯ್ಲು ಟ್ಯಾಂಕ್ ಅನ್ನು ಅತಿ ಕಡಿಮೆ ವೆಚ್ಚದಲ್ಲಿ ದುರಸ್ಥಿಗೊಳಿಸಿ ಸ್ವಂತ ಶಿಕ್ಷಕರು ವಿದ್ಯಾರ್ಥಿಗಳ ಪರಿಶ್ರಮದಿಂದ ಮಳೆಕೊಯ್ಲು ಘಟಕವನ್ನು ಜೈವಿಕ ಅನಿಲ ಉತ್ಪಾದನಾ ಘಟಕವನ್ನಾಗಿ ಪರಿವರ್ತನೆ ಮಾಡಲಾಯಿತು. ಹಳೆಯ ಬ್ಯಾರಲ್‌ಡ್ರಮ್ ಭಾಗವನ್ನು ಬಳಿಸಿಕೊಂಡು ತರಕಾರಿ ತ್ಯಾಜ್ಯ, ಉಳಿಕೆ ಆಹಾರ ಪದಾರ್ಥಗಳನ್ನು ಹಾಕುವ ಪೂರ್ವ ಸಂಗ್ರಹಣಾ ತೊಟ್ಟಿಯನ್ನು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.