ಮತ ಯಂತ್ರಗಳಲ್ಲಿ ಸುಭದ್ರ: ಯಾರ ಕೊರಳಿಗೆ ವಿಜಯಮಾಲೆ?
ಮಹಾ ಚುನಾವಣೆ ಣ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ
Team Udayavani, Apr 23, 2019, 6:02 AM IST
ಮಡಿಕೇರಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತದಾರರು ನೀಡಿರುವ ಮತದಾನದ ತೀರ್ಪು ಮತಯ ಂತ್ರಗಳಲ್ಲಿ ಭದ್ರವಾಗಿರುವ ಬೆನ್ನಲ್ಲೇ ವಿಜೇತ ಅಭ್ಯರ್ಥಿ ಯಾರಾಗಬಹುದೆನ್ನುವ ಲೆಕ್ಕಾಚಾರಗಳು ಗರಿಗೆದರಲಾರಂಭಿಸಿದೆ.
ಈ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ನಡುವೆ ನೇರಾನೇರ ಹಣಾಹಣಿ ನಡೆದಿರುವುದರಿಂದ, ಇವರಿಬ್ಬರಲ್ಲಿ ವಿಜಯಮಾಲೆ ಯಾರ ಕೊರಳಿಗೆ ಬೀಳಬಹುದೆನ್ನುವ ವಿಶ್ಲೇಷಣೆಗಳು ನಡೆಯುತ್ತಿದೆ.
ಜಿಲ್ಲೆಯಲ್ಲಿ 4,40,730 ಮತದಾರರಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,21,157 ಮತದಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,19,573 ಮತದಾರರಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಶೇ. 76.55 ರಷ್ಟು ಮತ್ತು ವೀರಾಜಪೇಟೆ ಕ್ಷೇತ್ರದಲ್ಲಿ ಶೇ. 72.52 ರಷ್ಟು ಮತದಾನವಾಗಿದೆ.
ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಹರಿದು ಬಂದ ಮತದಾರನ ಒಲವು ಯಾರತ್ತ ತಿರುಗಿದೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಲು ಮೇ 23 ರ ವರೆಗೆ ಕಾಯುವುದು ಅನಿವಾರ್ಯವಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟ ಅಹಿಂದ ಮತಗಳ ಮೇಲೆ ಹೆಚ್ಚು ವಿಶ್ವಾಸವಿಟ್ಟುಕೊಂಡಿದ್ದು, ಪ್ರತಾಪ್‌ಸಿಂಹ ಅವರ ವೈಫಲ್ಯಗಳ ಲಾಭವೂ ನಮಗೆ ಆಗಲಿದೆ ಎಂದು ಮೈತ್ರಿ ಪಕ್ಷಗಳ ನಾಯಕರು ಬೀಗುತ್ತಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಬಿಜೆಪಿಗೆ ಮತ ಕೊರತೆ ಎದುರಾಗಬಹುದೆನ್ನುವ ಆತಂಕದಲ್ಲಿರುವ ನಾಯಕರು ಆ ಭಾಗದಲ್ಲಿ ಕಳೆದುಕೊಂಡ ಮತಗಳನ್ನು ಸರಿದೂಗಿಸುವ ಶಕ್ತಿ ಕೊಡಗಿನಲ್ಲಿದೆ ಎನ್ನುವ ಧೈರ್ಯವನ್ನೂ ವ್ಯಕ್ತಪಡಿಸುತ್ತಾರೆ. ಅಭ್ಯರ್ಥಿ ಪ್ರತಾಪ್‌ಸಿಂಹ ಕೂಡ ಈ ಚುನಾವಣೆಯಲ್ಲಿ ಒಂದಷ್ಟು ಹೆಚ್ಚಿನ ಸಮಯವನ್ನು ಕೊಡಗಿಗೆ ಮೀಸಲಿಟ್ಟಿದ್ದುದಲ್ಲದೆ, ಮತದಾನದ ದಿನವೂ ಮಡಿಕೆೇರಿಯ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದ್ದರು.
ಬಿಜೆಪಿಯ ಭದ್ರಕೋಟೆಯನ್ನು ಜೆಡಿಎಸ್‌ನೊಂದಿಗಿನ ಮೈತ್ರಿಯ ಮೂಲಕ ಒಡೆದು ವಿಜಯ ಪತಾಕೆ ಹಾರಿಸುವ ಪ್ರಯತ್ನ ಕಾಂಗ್ರೆಸ್‌ನಿಂದಲು ನಡೆದಿದೆ. ಇದಕ್ಕೆ ಆರಂಭಿಕ ಹಂತದಲ್ಲಿ ಜೆಡಿಎಸ್‌ನೊಳಗಿನ ಆಂತರಿಕ ಭಿನ್ನಮತ ತೊಡಕಾಗಿ ಕಂಡು ಬಂದಿತಾದರು, ಆ ನಂತರದ ದಿನಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆದಿದೆ ಎಂದು ಮುಖಂಡರೂ ಹೇಳಿಕೊಳ್ಳುತ್ತಿದ್ದು, ಇದು ಎಷ್ಟರ ಮಟ್ಟಿಗೆ ಮತವಾಗಿ ಪರಿವರ್ತನೆಯಾಗಿದೆ ಎನ್ನು ವುದರ ಮೇಲೆ ವಿಜಯಶಂಕರ್ ಭವಿಷ್ಯ ನಿರ್ಧಾರವಾಗಲಿದೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಸದ ಪ್ರತಾಪಸಿಂಹ ಅವರ ನಡೆಯ ಬಗ್ಗೆ ಸ್ಥಳೀಯ ಶಾಸಕರಿಂದ ಆಕ್ಷೇಪವೂ ವ್ಯಕ್ತವಾಗಿತ್ತು. ತಮ್ಮ ಪಕ್ಷದ ಕೆಲವು ಮುಖಂಡ ರೊಂದಿಗೂ ಮನಸ್ತಾಪ ಮಾಡಿಕೊಂಡಿದ್ದರು ಸಿಂಹ. ಈ ಎಲ್ಲÉ ಕಾರ್ಮೋಡಗಳು ಒಮ್ಮೆಗೆ ಕರಗಿ ಬಿಜೆಪಿಯ ನಾಗಾಲೋಟ ಮುಂದುವರಿಯುತ್ತದೆಯೆ ಅಥವಾ ವಿಜಯದ ಹಾದಿಯಲ್ಲಿ ಎಡವಿದೆಯೇ ಎಂಬುವುದನ್ನು ಕಾದು ನೋಡಬೇಕಾಗಿದೆ.
ಈ ಎಲ್ಲ ರಾಜಕೀಯ ಬೆಳವಣಿಗೆಗಳ ನಡುವೆ ಪ್ರಸ್ತಾಪಿಸಲ್ಪಟ್ಟಿರುವ ಮೋದಿ ಅಲೆ ತಳಮಟ್ಟದಲ್ಲಿ ನಿಜಕ್ಕೂ ಕೆಲಸ ಮಾಡಿದೆಯೇ ಅಥವಾ ಇದೊಂದು ಕೇವಲ ಭ್ರಮೆಯೇ ಎನ್ನುವುದು ಕೂಡ ಮೇ 23 ರಂದು ಸ್ಪಷ್ಟವಾಗಲಿದೆ.
ಕಾದು ನೋಡಬೇಕು
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇà ಇದ್ದು, ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೊಟೆ ಎನ್ನುವ ಹಣೆಪಟ್ಟಿಯನ್ನು ಹೊತ್ತಿದೆ. ಅದಕ್ಕೆ ತಕ್ಕಂತೆ ಬಿಜೆಪಿ ಪ್ರಮುಖರು ಈ ಬಾರಿ ಲೋಕಸಭೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಅಭ್ಯರ್ಥಿಯ ಹೆಸರನ್ನು ಅಷ್ಟಾಗಿ ಪ್ರಸ್ತಾವಿಸದೆ ಮೋದಿ, ತಾವರೆ, ದೇಶದ ಭದ್ರತೆಯ ಹೆಸರಿನಲ್ಲಿ ಪ್ರತಾಪ್‌ಸಿಂಹ ಪರ ಮತಯಾಚಿಸಿರುವ ಬಿಜೆಪಿ ತಂತ್ರಗಾರಿಕೆ ಫಲ ನೀಡುವುದೇ ಅಥವಾ ಮೈತ್ರಿ ಮಂತ್ರ ಫಲ ನೀಡುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.