ಮುಳ್ಳೂರು ಶಾಲೆ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ
Team Udayavani, Mar 2, 2019, 1:15 AM IST
ಶನಿವಾರಸಂತೆ : ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಜನರಿಗಾಗಿ ವಿಜ್ಞಾನ ಮತ್ತು ವಿಜ್ಞಾನಕ್ಕಾಗಿ ಜನರು ಎಂಬ ಧ್ಯೇಯ ವಾಕ್ಯದಡಿಯಲ್ಲಿ ದಿನದ ಮಹತ್ವವನ್ನು ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಪ್ರಯೋಗ ಪ್ರದರ್ಶನದ ಮೂಲಕ ವಿನೂತನವಾಗಿ ಆಚರಿಸಿಕೊಂಡರು. ವಿದ್ಯಾರ್ಥಿಗಳು ತಮ್ಮ ತಮ್ಮ ಬೆಳಕಿನ ವಿವಿಧ ಪ್ರಯೋಗಗಳ ಮೂಲಕ ಬೆಳಕಿ ನೊಂದಿಗೆ ಆಟವಾಡಿ ಆನಂದಿಸಿದರು.
ಇಕೋ ಕ್ಲಬ್ ಸಂಚಾಲಕ ಹಾಗೂ ವಿಜ್ಞಾನ ಪ್ರಯೋಗ ಮಾರ್ಗ ದರ್ಶಕ ಸಿ.ಎಸ್.ಸತೀಶ್ ದಿನದ ಮಹತ್ವದ ಕುರಿತು ಮಾಹಿತಿ ನೀಡಿ, ಅಮೆರಿಕ, ಜಪಾನ್, ಇಂಗ್ಲೆಂಡ್, ಜರ್ಮನಿಗಳಂತಹ ದೊಡ್ಡ ದೇಶ ಗಳಲ್ಲಿಯೇ ಸಂಶೋಧನೆಗಳು ಹುಟ್ಟಿವೆ ಎಂದು ತಿಳಿದಿದ್ದ ಕಾಲ ಘಟ್ಟದಲ್ಲಿ ನಮ್ಮ ನೆಲದಲ್ಲಿಯೇ ಜನಿಸಿ ಇಲ್ಲಿಯೇ ವಿದ್ಯಾಭ್ಯಾಸ ಪೂರೈಸಿ ಇಲ್ಲಿರುವ ಸಂಪನ್ಮೂಲಗಳನ್ನೆ ಸದ್ಬಳಕೆ ಮಾಡಿಕೊಂಡು ಮಹಾನ್ ಸಾಧನೆಯನ್ನು ಮಾಡಿ ನೊಬೆಲ್ ಪ್ರಶಸ್ತಿ ಪಡೆದ ಮೇರು ವ್ಯಕ್ತಿ ಡಾ|ಸಿ.ವಿ.ರಾಮನ್ ಅವರ ಸಂಶೋಧನೆಯಿಂದಾಗಿ ವಿಶ್ವ ಭೂಪಟದಲ್ಲಿ ಭಾರತಕೊಂದು ಮಹತ್ತರ ಸ್ಥಾನಮಾನ ದೊರಕಿದೆ ಎಂದರು.
ಡಾ| ಸಿ.ವಿ.ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿ ಶತಮಾನ ವಾಗುತ್ತಾ ಬಂದರೂ ನಮ್ಮ ವಿಶ್ವ ವಿದ್ಯಾನಿ ಲಯಗಳು ಮತ್ತೂಬ್ಬ ಸಿ.ವಿ.ರಾಮನ್‌ನನ್ನು ತಯಾರು ಮಾಡದಿರುವುದು ವಿಪರ್ಯಾಸ ಎಂದರು.
ಇಂದಿನ ವಿಜ್ಞಾನ ಕ್ಷೇತ್ರವು ಎಲ್ಲವನ್ನೂ ವ್ಯಾಪಾರಿ ಮನೋಧರ್ಮದಲ್ಲಿ ಕಾಣುವ ಹಾಗೂ ಹಣಗಳಿಕೆಯ ಉದ್ದೇಶದಿಂದ ವಿದೇಶಗಳಿಗೆ ಪಲಾಯನ ಮಾಡು ತ್ತಿರುವುದ್ದರಿಂದ ನಮ್ಮ ದೇಶದ ವಿಜ್ಞಾನಕ್ಕೆ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅವರು ಹೇಳಿದರು . ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ದಿನಾಚರಣೆಯನ್ನು ಉದ್ಘಾಟಿಸಿ ಮಾತ ನಾಡಿದರು. ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
Kasaragodu: ಸಿವಿಲ್ ಪೊಲೀಸ್ ಆಫೀಸರ್ ಕೊಲೆ ಪ್ರಕರಣ: ಪತಿಯ ಸೆರೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Court: ಮಾವೋವಾದಿ ಸೋಮನ್ ಕಾಸರಗೋಡು ಕೋರ್ಟಿಗೆ ಹಾಜರು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.