“ಭೂಮಂಡಲಕ್ಕೆ ಪ್ರಕೃತಿ ನೀಡಿರುವ ಕೊಡುಗೆ ಅಪಾರ’
Team Udayavani, Apr 24, 2019, 6:13 AM IST
ಮಡಿಕೇರಿ : ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಅಭಿಯಾನ, ಸೋಮವಾರಪೇಟೆ ತಾಲೂಕು ಬಿ.ಆರ್.ಸಿ.ಕೇಂದ್ರ ಇವರ ವತಿಯಿಂದ ಕುಶಾಲನಗರ ಹೋಬಳಿ ನಂಜರಾಯಾಪಟ್ಟಣ ಕ್ಲಷ್ಟರ್ ವ್ಯಾಪ್ತಿಯ ವಾಲೂ°ರು ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “”ಸ್ವಲ್ಪ ಓದು, ಸ್ವಲ್ಪ ಮೋಜು” ಎಂಬ ಶೀರ್ಷಿಕೆಯಡಿ ವಿಶ್ವ ಭೂ ದಿನದ ಅಂಗವಾಗಿ ಸರಕಾರಿ ಪ್ರಾಯೋಜಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಇರುವುದೊಂದೇ ಭೂಮಿ ಇದನ್ನು ಸಂರಕ್ಷಿಸಿ ಸಂಪೋಷಿಸಲು ನಾವೆಲ್ಲರೂ ಪ್ರಯತ್ನಿಸೋಣ. ಜಾಗತಿಕ ತಾಪಮಾ ನದಿಂದ ಉರಿಯುತ್ತಿರುವ ಭೂಮಿಯನ್ನು ತಂಪಾಗಿಸೋಣ ಬನ್ನಿ” ಎಂದು ಸಮನ್ವಯ ಶಿಕ್ಷಣ ಜಿಲ್ಲಾ ಸಂಯೋಜಕರಾದ ಎಚ್.ಎಂ.ವೆಂಕಟೇಶ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಎಚ್.ಕೆ.ಕುಮಾರ್ ವಹಿಸಿ ಮಾತನಾಡಿ ,ಐದು ವಾರಗಳವರೆಗೆ ಬೇಸಿಗೆ ಶಿಬಿರ ನಡೆಯಲಿದ್ದು. ಮಕ್ಕಳು ದಿನನಿತ್ಯ ತಪ್ಪಿಸಿಕೊಳ್ಳದೆ ಶಾಲೆಗೆ ಬರಬೇಕು. ಶಿಕ್ಷಕರು ನೀಡುವ ಮಾಹಿತಿಗಳನ್ನು ಪಡೆದುಕೊಂಡು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಬೇಕು ಎಂದು ತಿಳಿಸಿದರು. ಅಲ್ಲದೆ ಮುಖ್ಯ ಶಿಕ್ಷಕರು ಶಿಬಿರಕ್ಕೆ ಹಾಜರಾದ ಮಕ್ಕಳಿಗೆ ಉಚಿತವಾಗಿ ಪೆನ್ ಮತ್ತು ನೋಟ್‌ಬುಕ್ ಗಳನ್ನು ವಿತರಿಸಿದರು.
ಶಾಲಾ ಶಿಕ್ಷಕರಾದ ಸುರೇಶ್ ಅವರು ಸ್ವಾಗತಿಸಿ, ವಂದಿಸಿದರು. ಮುಖ್ಯ ಶಿಕ್ಷಕರಾದ ಕುಮಾರ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಕರಾದ ಚೇತನ್ ಅವರು ಮತ್ತು ಕ್ಲಷ್ಟರ್ ಸಿ.ಆರ್.ಪಿ. ಸತ್ಯನಾರಾಯಣ ಉಪಸ್ಥಿತರಿದ್ದರು.
ಶಿಕ್ಷಕ ಚೇತನ್ ರವರು ಕಳೆದ ಸಾಲಿನ ಬೇಸಿಗೆ ಶಿಬಿರದ ಅನುಭವ ಹಂಚಿಕೊಂಡರು. ಬೇಸಿಗೆ ಸಂಭ್ರಮಕ್ಕೆ ಗಿರಿಜನ ಹಾಡಿ ಸೇರಿದಂತೆ 45 ಮಕ್ಕಳು ಹಾಜರಿದ್ದರು.
ಇದೇ ರೀತಿ ಸೋಮವಾರಪೇಟೆ ತಾಲೂಕಿನ ಹೊಸತೋಟ ಶಾಲೆಯಲ್ಲಿ 10 ಮಕ್ಕಳು ಕುಶಾಲನಗರದಲ್ಲಿ 13 ಮಕ್ಕಳು, ನೆಲ್ಯಹುದಿಕೇರಿಯಲ್ಲಿ 7 ಮಕ್ಕಳು ಮತ್ತು ಮಾದಾಪಟ್ಟಣ ಶಾಲೆಯಲ್ಲಿ 10 ಮಕ್ಕಳು ಭಾಗವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.