ಶ್ರೇಷ್ಠದಾನಗಳಲ್ಲಿ ಮತದಾನವೂ ಒಂದು- ರಘುನಂದನ್ ಜೀ
Team Udayavani, Mar 29, 2019, 6:05 AM IST
ಮಡಿಕೇರಿ : ಪ್ರಜಾಪ್ರಭುತ್ವದ ಅಳಿವು, ಉಳಿವು ಪ್ರತಿಯೊಬ್ಬರ ಮತದಾರರ ಕೈಯಲ್ಲಿದೆ, ಅತ್ಯಂತ ಶ್ರೇಷ್ಠದಾನಗಳಲ್ಲಿ ಮತದಾನವು ಒಂದು ಎಂದು ತಿಳಿದು ಪ್ರಜಾಪ್ರಭುತ್ವದ ನಿರ್ಣಾಯಕ ಅಳಿವು ಉಳಿವಿನ ಪ್ರಶ್ನೆಯಲ್ಲಿ ಚುನಾವಣೆ ಮಹತ್ತರ ಪಾತ್ರ ವಹಿಸಲಿರುವುದರಿಂದ ಮತದಾನ ಮಾಡುವುದು ನಮ್ಮ ಕರ್ತವ್ಯವಾಗಬೇಕೆಂದು ಪ್ರಜ್ಞಾಪ್ರವಾಹದ ಕ್ಷೇತ್ರಿಯ ಸಂಚಾಲಕರಾದ ರಘುನಂದನ್ ಜಿ ವ್ಯಾಖ್ಯಾನಿಸಿದ್ದಾರೆ.
ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣಲ್ಲಿ ಸಮರ್ಥ ಭಾರತ ಕೊಡಗು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ 2014ರಿಂದ 2019ರವರೆಗಿನ ಭಾರತ ಪರಿವರ್ತನಾ ವಿಷಯದ ಕುರಿತು ಮಾತನಾಡಿದ ಅವರು, ಸಂವಿಧಾನದ ತಿದ್ದುಪಡಿ ಮತ್ತು ಬದಲಾವಣೆ ಕುರಿತಂತೆ ಎದ್ದಿರುವ ಊಹಾ ಪೋಹಗಳು ಅಪಪ್ರಚಾರಗಳು ಮತ್ತು ವಾದ ವಿವಾದಗಳ ಬಗ್ಗೆ ತಮ್ಮ ಮಾತನ್ನು ಆರಂಭಿಸಿ 1949ರಷ್ಟು ಹಿಂದೆಯೇ ಸಂವಿಧಾನ ರಚನಾ ಸಭೆಯಲ್ಲಿ ಏನೇನು ಚರ್ಚೆ ಮತ್ತು ಯಾವ ರೀತಿ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು ಎಂಬುದರ ಬಗ್ಗೆ ಸಂವಿಧಾನ್ ಎಂಬ ಹತ್ತು ಧಾರಾ ವಾಹಿಗಳುಳ್ಳ ವಿವರಣೆ ಯೂಟೂಬ್‌ನಲ್ಲಿ ಲಭ್ಯವಿದೆ.
ದುರದೃಷ್ಟವಶಾತ್, ಸಂವಿಧಾನ, ಅದರ ಬದಲಾವಣೆ ಕುರಿತು ಮಾತನಾಡಿದರೆ ಡಾ| ಬಿ.ಆರ್. ಅಂಬೇಡ್ಕರ್ ಹೆಸರು ಹೇಳಿ ಬಾಯಿ ಮುಚ್ಚಿಸುತ್ತಾರೆ.
ಆದರೆ, ಸಂವಿಧಾನ ಪೀಠಿಕೆಯಲ್ಲಿ ಹೇಳಲಾದ ಸಮಾಜವಾದ ಮತ್ತು ಜಾತ್ಯಾತೀತ ಎನ್ನುವ ಪದಗಳು ಪಕ್ಷದ ಸಿದ್ದಾಂತವಾಗಬಹುದೇ ಹೊರತು ದೇಶದ ಸಿದ್ದಾಂತವಾಗಲು ಸಾಧ್ಯವಿಲ್ಲ. ದೇಶದ ನೀತಿ ಜನಕಲ್ಯಾಣ ಎಂದು ಸ್ಪಷ್ಟವಾಗಿ ನುಡಿದ ಅವರು, 1975ರಲ್ಲಿ ಪ್ರಜಾಪ್ರಭುತ್ವಕ್ಕೆ ಕಪ್ಪು ಮಸಿಯನ್ನು ಬಳಿದು, ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು, ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ತಮಗೆ ಬೇಕಾದಂತೆ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ. ಸಂವಿಧಾನಕ್ಕೆ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ತಿದ್ದುಪಡಿಗಳು ಆಗಿವೆ ಎಂಬುದು° ನಾವು ನೆನಪಿಡಬೇಕು ಎಂದು ಕೂಡ ರಘುನಂದನ್ ಜೀ ಉಲ್ಲೇಖೀಸಿದರು.
ಒಂದು ಕಾಲದಲ್ಲಿ ಚಿನ್ನವನ್ನು ಬೇಕಾದಂತೆ ಖರೀದಿಸಬಹುದಿತ್ತು ಆದರೆ, ಗ್ಯಾಸ್ ಸಿಲಿಂಡರ್‌ಗಳು ಸಿಗುತ್ತಿರಲಿಲ್ಲ. ಆದರೆ, ವಾಜಪೇಯಿ ಸರ್ಕಾರ ಬಂದ ಮೇಲೆ ಅಮೇರಿಕ ಮತ್ತು ಸ್ವಿಜರ್ ಲ್ಯಾಂಡ್‌ಗಳಿÉ ಇರುವಂತಹ ರಸ್ತೆಗಳು ನಮ್ಮಲ್ಲಿ ಆದವು. ಯಾವುದೇ ಸಂದರ್ಭಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆಯುವಂತಹ ವ್ಯವಸ್ಥೆ ಬಂದಿದ್ದು, ಪ್ರಧಾನಮಂತ್ರಿ ಗ್ರಾಮ ಸಡಕ್ ರಸ್ತೆ, ಸರ್ವಋತು ರಸ್ತೆ, ಸರ್ವಶಿಕ್ಷ ಅಭಿಯಾನ, ಪ್ರೋಖರಣ್ ಅಣು ಪರೀಕ್ಷೆ, ಇವೆಲ್ಲವುಗಳ ಹಿನ್ನಲೆಯಲ್ಲಿ ಮತ್ತೆ ವಾಜಪೇಯಿ ನೇತೃತ್ವದ ಸರ್ಕಾರ ಬರುತ್ತದೆ ಎಂದು ಹೆಚ್ಚಿನ ಮಂದಿ ಉದಾಸೀನ ಮಾಡಿದ ಹಿನ್ನೆಲೆಯಲ್ಲಿ ಮುಂದಿನ ಹತ್ತು ವರ್ಷ ಏನಾಯಿತು ಎಂಬುದನ್ನು ವಿವರಿಸಬೇಕಾಗಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ, ಯಥಾ ರಾಜಾ ತಥಾ ಪ್ರಜಾ ಆಗಬೇಕಾಗಿದ್ದುದು ಯಥಾ ಪ್ರಜಾ ತಥಾ ರಾಜಾ ಆಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಂಚಾಲಕ ಡಾ.ಬಿ.ಸಿ.ನವೀನ್ ಕುಮಾರ್ ಪ್ರಾಸ್ಥಾವಿಕವಾಗಿ ಮಾತನಾಡಿ, ಆಡಳಿತ ವಿಕೇಂದ್ರಿಕರಣ ಹಿನ್ನಲೆಯಲ್ಲಿ ಗ್ರಾಮ ಮಟ್ಟದಲ್ಲಿ, ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳ ಮೂಲಕ ತಮಗೆ ಬೇಕಾದ ವ್ಯವಸ್ಥೆಯನ್ನು ಪಡೆಯಲು ಅವಕಾಶವಿದೆ. ಮತದಾನ ಮಾಡುವ ಮೂಲಕ ದೇಶಕಟ್ಟುವ ಕೆಲಸದಲ್ಲಿ ನಾವು ಕೂಡ ಪಾಲುದಾರರಾಗಬೇಕೆಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.