ಹಳದಿ ಫಲಕದ ವಾಹನಗಳಿಗೆ ಮಾತ್ರ ಅವಕಾಶ: ಜಿಲ್ಲಾಧಿಕಾರಿ
ಮಾಂದಲಪಟ್ಟಿ ಸಂಚಾರ
Team Udayavani, Nov 29, 2019, 5:44 AM IST
ಮಡಿಕೇರಿ: ತಾಲೂಕಿನ ಪ್ರವಾಸಿ ತಾಣ ಮಾಂದಲ್ಪಟ್ಟಿಗೆ ಹಳದಿ ಬಣ್ಣದ ನೋಂದಣಿ ಫಲಕ (ಯಲ್ಲೊ ಬೋರ್ಡ್) ಹೊಂದಿರುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಂದಲ್ಪಟ್ಟಿಗೆ ತೆರಳುವ ವಾಹನಗಳ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಹಳದಿ ಬಣ್ಣದ ನಂಬರಿನ ಫಲಕ ವಾಹಗಳಿಗೆ ಮಾತ್ರ ಮಾಂದಾಲ್ಪಟ್ಟಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಸಮಿತಿ ನೀಡುವ ನಿಬಂಧನೆಗಳನ್ನು ಚಾಲಕರು ಪಾಲಿಸಬೇಕು ಎಂದು ನಿರ್ದೇಶ ನೀಡಿದರು.
ಮಾಂದಲ್ಪಟ್ಟಿಗೆ ತೆರಳುವ ಹಳದಿ ಬಣ್ಣದ ನೋಂದಣಿ ಫಲಕ ವಾಹನಗಳ ಸಂಬಂಧ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿ ಗುರುತಿನ ಚೀಟಿ ಪಡೆಯುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಅರಣ್ಯ ಅಥವಾ ಪಂಚಾಯತ್ ರಾಜ್ ಯಾವುದರೂ ಒಂದು ಇಲಾಖೆಯವರು ಮಾತ್ರ ವಾಹನ ನಿಲುಗಡೆ ಶುಲ್ಕ ಪಡೆಯಲಾಗುತ್ತದೆ ಎಂದು ಎಂದು ಅವರು ಮಾಹಿತಿ ನೀಡಿದರು.
ಮಾಂದಲ್ಪಟ್ಟಿ ಬಳಿ ಅರಣ್ಯ ಇಲಾಖೆಯವರು ಅಳಡಿಸಿರುವ ಗೇಟ್‌ನಿಂದ ಒಳ ಪ್ರವೇಶಿಸುವ ವಾಹನಗಳಿಗೆ 50 ರೂ ಮತ್ತು ಒಬ್ಬ ಪ್ರವಾಸಿಗರಿಗೆ 25 ರೂ ಪಡೆಯಲಾಗುವುದು ಹಾಗೂ ಗೇಟ್ ಬಳಿ ವಾಹನ ನಿಲುಗಡೆ ಮಾಡಿದ್ದಲ್ಲಿ ಪಂಚಾಯತ್ ರಾಜ್ ಇಲಾಖೆಯವರು 4 ಚಕ್ರದ ವಾಹನಗಳಿಗೆ 25 ರೂ ಮತ್ತು ದ್ವಿಚಕ್ರದ ವಾಹನಗಳಿಗೆ 15 ರೂ ಶುಲ್ಕ ಪಡೆಯಲಾಗುವುದು ಎಂದು ಸಮಿತಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಹಾಗೂ ತಾ.ಪಂ.ಇಒ ಲಕ್ಷಿ¾ ಅವರು ತಿಳಿಸಿದರು.
ಡಿವೈಎಸ್‌ಪಿ ದಿನೇಶ್ ಕುಮಾರ್ ಅವರು ಮಾಂದಲ್ಪಟ್ಟಿಗೆ ತೆರಳುವ ವಾಹನಗಳು ಮಡಿಕೇರಿ ಮತ್ತು ಗಾಳಿಬೀಡು ಗ್ರಾ.ಪಂ.ಕಚೇರಿ ಬಳಿ ನಿಲುಗಡೆ ಮಾಡಬಹುದಾಗಿದೆ ಎಂದರು.
ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿ ಪಿ.ಚಂದನ್ ಸಮಿತಿ ಸದಸ್ಯರಾದ ಧನಂಜಯ ಹಾಗೂ ಥಾಮಸ್ ಅವರು Ê ಮಾಹಿತಿ ನೀಡಿದರು.
ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ವ್ಯವಸ್ಥಾಪಕ ಶಿವಣ್ಣ, ತಾ.ಪಂ.ಇಒ ಲಕ್ಷಿ¾, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ, ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘ ಐವೇಂದ್ರ, ಪಿಡಿಒಗಳಾದ ಶಶಿಕಲಾ ಮತ್ತು ನಂಜುಂಡಸ್ವಾಮಿು ಮಾಹಿತಿ ನೀಡಿದರು.
ಅಗತ್ಯ ಕ್ರಮಕ್ಕೆ ಸಲಹೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಮಾಂದಲ್ಪಟ್ಟಿಗೆ ತೆರಳುವ ರಸ್ತೆ ಮಾರ್ಗ ಸ್ಪೀಡ್ ಬ್ರೇಕರ್ ಹಾಗೂ ಸಿಸಿಟಿವಿ ಅಳವಡಿಸುವ ಸಂಬಂಧ ಪಂಚಾಯತ್ ರಾಜ್, ಪೊಲೀಸ್ ಇಲಾಖೆ ಹಾಗೂ ಎಂಜಿನಿಯರ್‌ಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ಮಾಡಿದರು.
ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಾಂದಾಲ್ಪಟ್ಟಿಗೆ ಭೇಟಿ ನೀಡುವುದರಿಂದ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜಿಸಬೇಕು ಎಂದರು.
ಪಾನಮತ್ತರಾಗಿ ವಾಹನ ಚಲಾಯಿಸುವ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ಕೊನೆಗೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.