ಕೊಡಗು ಜಿಲ್ಲೆಯಲ್ಲಿ ಶೇ. 26ರಷ್ಟು ಮಳೆ ಕೊರತೆ
Team Udayavani, Aug 4, 2017, 6:25 AM IST
ಮಡಿಕೇರಿ : ಹಿಂದೆ ಆಷಾಡ ಮಾಸವೆಂದರೆ ಮಳೆಯ ಸಂಭ್ರಮವಿರುತ್ತಿತ್ತು. ಆಷಾಡ ಮಾಸದಲ್ಲಿ ಮನೆಯಲ್ಲಿದ್ದ ಧವಸ ಧಾನ್ಯವೆಲ್ಲ ಖಾಲಿಯಾಗಿ ಶ್ರಾವಣ ಮಾಸದ ಆರಂಭದಲ್ಲಿ ರಾಗಿ, ಜೋಳ, ಕಂಬು, ನವಣೆ, ಅಲಸಂದೆ ಜೊತೆಗೆ ವಾಣಿಜ್ಯ ಬೆಳೆಯಾದ ಸೂರ್ಯಕಾಂತಿ, ಕಡ್ಲೆಕಾಯಿ ಹೀಗೆ ನಾನಾ ರೀತಿಯ ಹೊಸ ಬೆಳೆಗಾಗಿ ಕಾಯುತ್ತಿದ್ದರು. ಜುಲೈ ಅಂತ್ಯ ಹಾಗೂ ಆಗಸ್ಟ್ ಆರಂಭದ ಅವಧಿಯಲ್ಲಿ ಹೊಲದಲ್ಲಿ ಬೆಳೆಗಳನ್ನು ನೋಡುವುದೇ ಒಂದು ರೀತಿ ಸಂತಸವಾಗುತ್ತಿತ್ತು.
ಆದರೆ ಇದು ಒಂದೆಡೆಯಾದರೆ, ಮಲೆನಾಡು ಕೊಡಗು ಜಿಲ್ಲೆಯಲ್ಲಿಯೇ ಕಳೆದ ನಾಲ್ಕು ವರ್ಷಗಳಿಂದ ಸರಾಸರಿ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬಂದಿರುವುದು ಕಾವೇರಿ ಕಣಿವೆಯ ಜನತೆಯಲ್ಲಿ ಆತಂಕಕ್ಕೆ ದೂಡಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆ ಮಳೆಯಾದರೆ ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳು ಭರ್ತಿಯಾಗುತ್ತಿದ್ದವು, ಆದರೆ ಹಾರಂಗಿ ಜಲಾಶಯ ಹೊರತುಪಡಿಸಿ ಕೃಷರಾಜ ಸಾಗರ, ಕಬಿನಿ, ಹೇಮಾವತಿ ಜಲಾಶಯಗಳು ಭರ್ತಿಯಾಗದಿರುವುದು ಎಲ್ಲರನ್ನೂ ಚಿಂತೆಗೆ ದೂಡಿದೆ. ಜುಲೈ ಅಂತ್ಯ ಹಾಗೂ ಆಗಸ್ಟ್ ಆರಂಭದಲ್ಲಿ ಹಾಗಾಗ ಮಳೆ ಮತ್ತು ಮೊಡಕವಿದ ವಾತಾವರಣವಿದೆಯೇ ಹೊರತು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ, ಇದರಿಂದ ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವುದಾದರೂ ಹೇಗೆ ಎಂಬುದು ಕಾಡುತ್ತಿದೆ.
ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿನ ಸರಾಸರಿ ಮಳೆಯ ಪ್ರಮಾಣವನ್ನು ಅವಲೋಕನ ಮಾಡಿದಾಗ ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1669.86 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಜುಲೈ ಅಂತ್ಯದವರೆಗೆ 1224.43 ಮಿ.ಮೀ.ಮಳೆಯಾಗಿದ್ದು, ಶೇ.73.33 ರಷ್ಟು ಮಳೆಯಾಗಿದೆ. 2016ರಲ್ಲಿ 1184.31 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 1544.27 ಮಿ.ಮೀ. ಮಳೆಯಾಗಿತ್ತು. ಒಟ್ಟಾರೆ ಜಿಲ್ಲೆಯಲ್ಲಿ ಶೇ. 26 ಮಳೆ ಕೊರತೆ ಉಂಟಾಗಿದೆ.
ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ ತಾಲ್ಲೂಕಿನಲ್ಲಿ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1992.30ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಜುಲೈ, 31ರ ವರೆಗೆ 1683.75 ಮಿ.ಮೀ.ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 1759.32 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 2286.70 ಮಿ.ಮೀ.ಮಳೆಯಾಗಿತ್ತು. ಒಟ್ಟಾರೆ ತಾಲ್ಲೂಕಿನಲ್ಲಿ ಈ ಬಾರಿ ಶೇ 84.51 ರಷ್ಟು ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1294 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಇಲ್ಲಿಯವರೆಗೆ 952.55 ಮಿ.ಮೀರಷ್ಟು ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 912.60 ಮಿ.ಮೀ.ಮಳೆಯಾಗಿದೆ. ಹಾಗೆಯೇ 2015ರ ಇದೇ ಅವಧಿಯಲ್ಲಿ 1059.41 ಮಿ.ಮೀ. ಮಳೆಯಾಗಿತ್ತು. ತಾಲ್ಲೂಕಿನಲ್ಲಿ ಶೇ.73.61ರಷ್ಟು ಮಳೆಯಾಗಿದೆ.
ವಿರಾಜಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 1723.30 ಮಿ.ಮೀ.ಗಳಾಗಿದ್ದು, 2017ರ ಜನವರಿಯಿಂದ ಇಲ್ಲಿಯವರೆಗಿನ ಮಳೆ 1036.98 ಮಿ.ಮೀ.ರಷ್ಟು ಮಳೆಯಾಗಿದೆ. 2016ರ ಇದೇ ಅವಧಿಯಲ್ಲಿ 881.05 ಮಿ.ಮೀ. ಮಳೆಯಾಗಿದೆ. ಹಾಗೆಯೇ 2015ರ ಇದೇ ಅವಧಿಯಲ್ಲಿ 1286.68 ಮಿ.ಮೀ. ಮಳೆಯಾಗಿ ಶೇ. 60.17ರಷ್ಟು ಮಾತ್ರ ಮಳೆಯಾಗಿದೆ.
ಒಟ್ಟಾರೆ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು, ಆದರೆ ಕಳೆದ ಮೂರು ವರ್ಷಗಳಲ್ಲಿ ಮಳೆಯ ಕೊರತೆ ಉಂಟಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.