ಖಾಸಗಿ ಬಸ್ ನಿಲ್ದಾಣಕ್ಕೆ ವಿರೋಧವಿಲ್ಲ: ಬಿಜೆಪಿ
Team Udayavani, Mar 17, 2017, 2:13 PM IST
ಮಡಿಕೇರಿ: ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕೆನ್ನುವ ಉದ್ದೇಶದಿಂದ ಶಾಸಕರು ತಾತ್ಕಾಲಿಕವಾಗಿ ಅಡಿಪಾಯದ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆಯೇ ಹೊರತು ಸಂಪೂರ್ಣವಾಗಿ ಯೋಜನೆಗೆ ವಿರೋಧ ವ್ಯಕ್ತಪಡಿಸಿಲ್ಲವೆಂದು ನಗರಸಭೆಯ ಬಿಜೆಪಿ ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್. ರಮೇಶ್, ನಗರ ಕಾಂಗ್ರೆಸ್ ಪ್ರಮುಖರು ಖಾಸಗಿ ಬಸ್ ನಿಲ್ದಾಣದ ಯೋಜನೆಗೆ ಬಿಜೆಪಿ ಸಂಪೂರ್ಣ ವಿರೋಧವಿದೆ ಎನ್ನುವ ರೀತಿಯಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.
ಅಡಿಪಾಯ ತೆಗೆಯುವ ಮೊದಲು ಹಳೆಯ ಮಣ್ಣನ್ನು ಸಂಪೂರ್ಣ ತೆರವುಗೊಳಿಸದೆ ಕಾಮಗಾರಿ ನಡೆಸುತ್ತಿದ್ದು ದರಿಂದ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಅಡಿಪಾಯದ ಗುಂಡಿ ನಿರ್ಮಾಣದ ಸಂದರ್ಭ ನೀರು ಬಂದಿದ್ದು, ಮುಂದೆ ಕಟ್ಟಡ ನಿರ್ಮಾಣ ಗೊಂಡರೆ ಕಟ್ಟಡದ ಅಸ್ತಿತ್ವಕ್ಕೆ ಧಕ್ಕೆಯಾಗುವುದನ್ನು ತಡೆ ಯಲು ಗುಣಮಟ್ಟದ ಕಾಮಗಾರಿ ನಡೆಯಬೇಕೆಂದು ಶಾಸಕರಾದಿಯಾಗಿ ಬಿಜೆಪಿ ಸದಸ್ಯರು ಆಸಕ್ತಿ ವಹಿಸಿದ್ದಾರೆ. ಅಡಿಪಾಯದ ಗುಂಡಿ ತೆಗೆದ ಅನಂತರ ಮಣ್ಣು ಪರೀಕ್ಷೆ ಮಾಡಲಾಗಿ ಈಗಿರುವ ಗುಂಡಿಗಿಂತ ಮೂರು ಪಟ್ಟು ಹೆಚ್ಚಿನ ಗುಂಡಿಯನ್ನು ತೆಗೆದು ಪಿಲ್ಲರ್ ಅಳವಡಿಸಬೇಕೆಂದು ಅಧಿಕಾರಿಗಳು ಈಗಾಗಲೆ ಸಲಹೆ ನೀಡಿದ್ದಾರೆ ಎಂದರು.
ಇದನ್ನು ಮೀರಿ ಕಟ್ಟಡ ನಿರ್ಮಾಣ ಗೊಂಡರೆ ವಾಲುವ ಎಲ್ಲ ಸಾಧ್ಯತೆಗಳಿದೆ ಎಂದು ಕೆ.ಎಸ್. ರಮೇಶ್ ಆತಂಕ ವ್ಯಕ್ತಪಡಿಸಿದರು.
ಕಾಮಗಾರಿಯನ್ನು ಪುನರ್ ಪರಿಷ್ಕ ರಿಸಿ ಪಿಲ್ಲರ್‌ನ್ನು ಮತ್ತಷ್ಟು ಆಳದಲ್ಲಿ ಅಳವಡಿಸುವ ಮೂಲಕ ಮುಂದಿನ 50 ವರ್ಷಗಳ ವರೆಗೆ ಬಾಳಿಕೆ ಬರುವಂತಹ ಬಸ್ ನಿಲ್ದಾಣ ನಿರ್ಮಾಣವಾಗಬೇಕೆನ್ನುವುದು ನಮ್ಮ ಉದ್ದೇಶವೆಂದು ಸ್ಪಷ್ಟಪಡಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷರು ನಗರದ ಅಭಿವೃದ್ಧಿಗೆ ಶಾಸಕರು ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನೂತನ ಬಸ್ ನಿಲ್ದಾಣಕ್ಕಾಗಿ ಜಾಗ ಮಂಜೂರು ಮಾಡಿಸಿರುವುದೆ ದೊಡ್ಡ ಕೊಡುಗೆಯಾಗಿದೆ ಎಂದು ಅಭಿಪ್ರಾಯಪಟ್ಟ ಕೆ.ಎಸ್. ರಮೇಶ್, ಶಾಸಕರು ಸಾಕಷ್ಟು ಕೊಡುಗೆಗಳನ್ನು ನೀಡಿರುವುದರಿಂದಲೆ ಸತತ ನಾಲ್ಕು ಬಾರಿ ಗೆದ್ದು ಬಂದಿದ್ದಾರೆ ಎಂದು ಸಮರ್ಥಿಸಿಕೊಂಡರು.
ನಗರ ಕಾಂಗ್ರೆಸ್ ಅಧ್ಯಕ್ಷರ ಪ್ರಶ್ನೆಗಳಿಗೆ 2018ರ ಚುನಾವಣೆ ಉತ್ತರ ನೀಡಲಿದೆಯೆಂದು ರಮೇಶ್ ಹೇಳಿದರು.ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮಾತನಾಡಿ, ಕಳಪೆ ಕಾಮಗಾರಿ ನಡೆದು ಮುಂದೆ ಅನಾಹುತ ಸಂಭ ವಿಸಿದಲ್ಲಿ ಜನ ಸಾಮಾನ್ಯರು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಹಾಕಿರುವ ಮಣ್ಣಿನಲ್ಲೆ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಸ್ಥಗಿತಗೊಳಿಸು ವಂತೆ ಸೂಚಿಸಿದರು ಕಾಮಗಾರಿ ಮುಂದುವರಿದಿದೆ. ನೂತನ ತಂತ್ರ ಜ್ಞಾನದ ಮೂಲಕ ಗುಣಮಟ್ಟದ ಕಾಮಗಾರಿ ನಡೆಸಿದರೆ ಬಸ್ ನಿಲ್ದಾಣದ ಯೋಜನೆಗೆ ವಿರೋಧವಿಲ್ಲವೆಂದು ಅವರು ಸ್ಪಷ್ಟಪಡಿಸಿದರು.ಕಾಂಗ್ರೆಸ್‌ನವರೇ ಅಭಿವೃದ್ಧಿ ವಿಚಾರ ದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದ ಪ್ರಕಾಶ್, ಅಧ್ಯಕ್ಷರು ಕುಂಡಾಮೇಸಿŒಯ ಕಾಮಗಾರಿ ಪರಿಶೀಲನೆಯ ಸಂದರ್ಭ ತಮ್ಮನ್ನು ಆಹ್ವಾನಿಸದೆ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.ಸದಸ್ಯ ಪಿ.ಡಿ. ಪೊನ್ನಪ್ಪ ಮಾತನಾಡಿ, ಖಾಸಗಿ ಬಸ್‌ಗಳ ಸಂಚಾರಕ್ಕೆ ಮೊದಲು ಮಾರ್ಗವನ್ನು ಸೂಚಿಸಲಿ ಎಂದರು. ಶನಿವಾರ ಮತ್ತು ರವಿವಾರದಂದು ರಾಜಾಸೀಟು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ರಾಜಾಸೀಟು ಬಳಿಯಲ್ಲಿರುವ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ ಎನ್ನುವುದು ಅರ್ಥಹೀನ ಕ್ರಮವೆಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರುಗಳಾದ ಸವಿತಾ ರಾಕೇಶ್, ಲಕ್ಷಿ¾, ಅನಿತಾ ಪೂವಯ್ಯ ಹಾಗೂ ಉಣ್ಣಿ ಕೃಷ್ಣನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.