ಮಡಿಕೇರಿಯ ರೈಲ್ವೇ ಟಿಕೆಟ್ ಬುಕ್ಕಿಂಗ್ ಸೆಂಟರ್ಗೆ ಬೀಗ!
Team Udayavani, Oct 12, 2022, 9:09 AM IST
ಮಡಿಕೇರಿ : ರಾಜ್ಯದ “ಹಳಿಗಳೇ ಇಲ್ಲದ ಜಿಲ್ಲೆ’ ಖ್ಯಾತಿಯ ಕೊಡಗಿನಲ್ಲಿ ಒಂದೂವರೆ ದಶಕ ಗಳಿಂದ ಇದ್ದ ಏಕೈಕ ನೈಋತ್ಯ ರೈಲ್ವೇ ಟಿಕೆಟ್ ಬುಕ್ಕಿಂಗ್ ಕೇಂದ್ರವನ್ನು ಯಾವುದೇ ಮಾಹಿತಿ ಇಲ್ಲದೆ ಮುಚ್ಚಲಾಗಿದೆ.
ರಾಷ್ಟ್ರದ ಸೇನೆಯಲ್ಲಿ ಕೊಡಗಿನ ಸಹಸ್ರಾರು ಮಂದಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರೆ, ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯಲು ದೇಶದ ಮತ್ತು ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಮಂದಿ ಕಾರ್ಮಿಕರು ಬರುತ್ತಾರೆ. ಜಿಲ್ಲಾ ಕೇಂದ್ರ ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದ ನಗರ ಸಭೆಯ ಮಳಿಗೆಯೊಂದರಲ್ಲಿ ಒಂದೂ ವರೆ ದಶಕಗಳ ಹಿಂದೆ ಈ ರೈಲ್ವೇ ಬುಕ್ಕಿಂಗ್ ಕೇಂದ್ರವನ್ನು ತೆರೆಯ ಲಾಗಿತ್ತು. 2018ರ ಪ್ರಾಕೃತಿಕ ವಿಕೋಪ, ತದನಂತರ 2019ರಿಂದ ಸುಮಾರು ಎರಡು ವರ್ಷಗಳ ಕಾಲ ಕೊರೊನಾ ಸಾಂಕ್ರಾಮಿಕದ ಹಂತದಲ್ಲಿ ಮುಚ್ಚಲ್ಪಟ್ಟ ಬುಕ್ಕಿಂಗ್ ಕೇಂದ್ರ ಇದುವರೆಗೂ ತೆರೆದಿಲ್ಲ.
ಕೊಡಗಿಗೆ ಸಮೀಪದ ರೈಲು ನಿಲ್ದಾಣಗಳೆಂದರೆ ಮೈಸೂರು, ಪುತ್ತೂರು, ಮಂಗಳೂರು ಮತ್ತು ಹಾಸನ. ಜಿಲ್ಲೆಯಿಂದ ಹೊರ ತೆರಳು ವವರು ಮತ್ತು ಬರುವವರು ಹೆಚ್ಚಾಗಿ ಮೈಸೂರನ್ನು ಅವಲಂಬಿಸುತ್ತಾರೆ. ಈ ಬುಕ್ಕಿಂಗ್ ಸೆಂಟರ್ನಲ್ಲಿ ಪ್ರತಿನಿತ್ಯ ಸರಾಸರಿ 2ರಿಂದ 4 ಲಕ್ಷ ರೂ. ವ್ಯವಹಾರ ನಡೆಯುತ್ತಿತ್ತು. ಆನ್ಲೈನ್ ವ್ಯವಸ್ಥೆ ಇದ್ದರೂ ಕಾರ್ಮಿಕರು ಇದನ್ನು ಬಳಸುವುದು ಅಷ್ಟಕ್ಕಷ್ಟೆ ಆಗಿರುವುದ ರಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ : ಭಾರತ ಜೋಡೋ ಯಾತ್ರೆ : ಚಳ್ಳಕೆರೆಯಿಂದ ಪಾದಯಾತ್ರೆ ಆರಂಭ, ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.