Rain ವಿಳಂಬ: ಬರಿದಾಗುತ್ತಿದೆ ಕಾವೇರಿ

Team Udayavani, Jun 19, 2023, 6:27 AM IST

Rain ವಿಳಂಬ: ಬರಿದಾಗುತ್ತಿದೆ ಕಾವೇರಿ

ಮಡಿಕೇರಿ: ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡಿದ್ದರೂ ನಿರೀಕ್ಷಿತ ಮಳೆಯಾಗುತ್ತಿಲ್ಲ. ವಾರ್ಷಿಕ 150ರಿಂದ 250 ಇಂಚಿಗೂ ಅಧಿಕ ಮಳೆಯಾಗುವ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದ್ದು, ಕಾವೇರಿಯ ಒಡಲು ಬರಿದಾಗಿದೆ.

ಬಿಸಿಲ ನಡುವೆಯೇ ತುಂತುರು ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ದೊಂದಿಗೆ ಚಳಿಯೂ ಇದೆ. ಆದರೆ ಮಳೆಗಾಲದ ಲಕ್ಷಣ ಗೋಚರಿಸುತ್ತಿಲ್ಲ. ಮಳೆ ವಿಳಂಬದಿಂದ ಕೃಷಿಕ ವರ್ಗ ಆತಂಕಗೊಂಡಿದೆ. ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಜಲಮೂಲಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಹಸುರು ಆಹಾರದ ಕೊರತೆಯಿಂದ ವನ್ಯಜೀವಿಗಳು ನಾಡಿಗೆ ಲಗ್ಗೆ ಇಡುತ್ತಿವೆ.

ಜಿಲ್ಲೆಯ ವಿವಿಧೆಡೆ ಕಾವೇರಿ ಒಡಲು ಬರಿ ದಾ ಗಿದ್ದು, ಕಲ್ಲು ಬಂಡೆಗಳು ಕಾಣಿಸುತ್ತಿವೆ. ರಾಜ್ಯ ಮತ್ತು ಹೊರ ರಾಜ್ಯದ ಕೋಟ್ಯಂತರ ಮಂದಿಗೆ ಕುಡಿಯುವ ನೀರನ್ನು ಒದಗಿಸು ತ್ತಿರುವ ಕಾವೇರಿ ಮಳೆಯಿಲ್ಲದೆ ಬಡವಾಗಿದೆ. ಇನ್ನು ಒಂದು ವಾರದಲ್ಲಿ ಉತ್ತಮ ಮಳೆಯಾಗ ದಿದ್ದಲ್ಲಿ ಪರಿಸ್ಥಿತಿ ಕೈಮೀರಿ ಕುಡಿಯುವ ನೀರಿಗೂ ಬರ ಬರುವ ಸಾಧ್ಯತೆ ಇದೆ.

ಪ್ರತಿವರ್ಷ ಜೂನ್‌ ಮೊದಲ ವಾರ ದಿಂದಲೇ ಸುರಿಯುತ್ತಿದ್ದ ಮಳೆ ಕಳೆದ ಕೆಲವು ವರ್ಷಗಳಿಂದ ತನ್ನ ವೇಳಾಪಟ್ಟಿಯನ್ನೇ ಬದಲಾಯಿಸಿಕೊಂಡು ಬಿಟ್ಟಿದೆ. ಈ ಬಾರಿ ಯಂತೂ ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಜುಲೈಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಗಳಿರುವುದರಿಂದ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಒಣಗುತ್ತಿರುವ ಬೆಳೆ; ಕೃಷಿಕರು ಕಂಗಾಲು
ಸುಂಟಿಕೊಪ್ಪ:ಜೂನ್‌ ತಿಂಗಳಿನಲ್ಲಿ ಸುರಿಯುವ ಮೃಗಶಿರ ಮಳೆ ರೈತರ ಚಟುವಟಿಕೆಗಳಿಗೆ ಆಶಾ ದಾಯಕ. ಆದರೆ ಈ ವರ್ಷ ಮಳೆ ಬಾರದೆ ಕರಿಮೆಣಸಿನ ಫ‌ಸಲಿಗೆ ಹೊಡೆತ ನೀಡಿದೆ. ಭತ್ತದ ಬಿತ್ತನೆಗಾಗಿ ಗದ್ದೆ ಹದ ಮಾಡಿದ ರೈತ ಮಳೆಗಾಗಿ ಆಕಾಶದತ್ತ ನೋಡುವಂತಾಗಿದೆ. ಕರಿಮೆಣಸು ಕಾಳು ಕಟ್ಟುವ ಸಮಯದಲ್ಲಿ ಮಳೆ ಇಲ್ಲವಾಗಿರುವುದು ಮುಂದಿನ ವರ್ಷದ ಕರಿಮೆಣಸು ಇಳುವರಿಗೆ ಭಾರೀ ಹಿನ್ನಡೆಯಾಗಲಿದೆ. ಕಾಫಿ ಗಿಡಕ್ಕೂ ಜೂನ್‌ ತಿಂಗಳ ಮಳೆ ಅನಿವಾರ್ಯವಾಗಿದ್ದು, ಬೆಳೆಗಾರರು ವರುಣನ ಕೃಪೆಗಾಗಿ ಕಾದು ಕುಳಿತಿದ್ದಾರೆ.

ಕಾಫಿ, ಕರಿಮೆಣಸಿನಿಂದ ಬದುಕು ಸಾಗಿಸುತ್ತಿರುವ ಕೊಡಗು ಜಿಲ್ಲೆಯ ಮಧ್ಯಮ ಹಾಗೂ ಸಣ್ಣ ಬೆಳೆಗಾರರು ಮಳೆ ಕೈಕೊಟ್ಟಿರೆ ಸರಿಯಾಗಿ ಇಳುವರಿ ಬಾರದಿದ್ದರೆ ಈ ವರ್ಷ ಬ್ಯಾಂಕ್‌ ಸಾಲ ಹೇಗೆ ಕಟ್ಟುವುದು, ವಿದ್ಯಾರ್ಥಿಗಳ ಶಾಲೆ ಕಾಲೇಜಿನ ಶುಲ್ಕ ಹೇಗೆ ಪಾವತಿಸುವುದು, ಗೊಬ್ಬರ ಖರೀದಿಸುವುದು ಎಲ್ಲಿಂದ ಕೂಲಿ ಕಾರ್ಮಿಕರಿಗೆ ಸಂಬಳ ನೀಡುವುದೆಂತು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ಟಾಪ್ ನ್ಯೂಸ್

10

Tollywood: ʼಪುಷ್ಪ-3 ಬರುವುದು ಕನ್ಫರ್ಮ್..‌ ನಿರ್ಮಾಪಕರೇ ಬಿಟ್ಟು ಕೊಟ್ರು ಗುಟ್ಟು

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

MS Dhoni Sends ‘shocking’ Message To Chennai Super Kings

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

9

Actor Suriya: ತಾಯಿ ಮಾಡಿದ 25 ಸಾವಿರ ರೂ. ಸಾಲ ತೀರಿಸಲು ಸಿನಿಮಾ ರಂಗಕ್ಕೆ ಬಂದ ಸೂರ್ಯ

ಕಾನೂನು ಸಮರದಲ್ಲಿ ಪವಾರ್‌ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್‌ ಬಣಕ್ಕೆ ಮೇಲುಗೈ

ಕಾನೂನು ಸಮರದಲ್ಲಿ ಪವಾರ್‌ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್‌ ಬಣಕ್ಕೆ ಮೇಲುಗೈ

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Kasaragod: ಸಚಿತಾ ರೈ ವಿರುದ್ಧ ಮತ್ತೊಂದು ಪ್ರಕರಣ ದಾಖಲು

Crime-News-s

Kasaragod ಅಪರಾಧ ಸುದ್ದಿಗಳು

police

Kumbale: ವಂಚನೆ: ಸಚಿತಾ ಮನೆಗೆ ಪೊಲೀಸ್‌ ದಾಳಿ

money

Madikeri: ಹಣ ನೀಡದೆ ವಂಚನೆ: ಖಾಸಗಿ ಸಂಸ್ಥೆ ವಿರುದ್ಧ ದೂರು

red-Corner

Kumbale: ಕೊಲ್ಲಿಗೆ ಪರಾರಿಯಾದ 6 ಮಂದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

10

Tollywood: ʼಪುಷ್ಪ-3 ಬರುವುದು ಕನ್ಫರ್ಮ್..‌ ನಿರ್ಮಾಪಕರೇ ಬಿಟ್ಟು ಕೊಟ್ರು ಗುಟ್ಟು

8

KSRTC ನಿಲ್ದಾಣ-ಲಾಲ್‌ಭಾಗ್‌ ರಸ್ತೆ ಫುಟ್‌ಪಾತ್‌ ಇಲ್ಲದೆ ಪಾದಚಾರಿಗಳ ಪರದಾಟ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

MS Dhoni Sends ‘shocking’ Message To Chennai Super Kings

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

7

Thekkatte: ಹೆದ್ದಾರಿ ಹೊಡೆತದಿಂದ ತೆಕ್ಕಟ್ಟೆ ಕನ್ನಡ ಶಾಲೆ ಉಳಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.