ಅರೆಭಾಷೆ ಸಂಸ್ಕೃತಿ ಉಳಿವಿಗೆ ಆಚರಣೆ ಅಗತ್ಯ:ಹರೀಶ್
Team Udayavani, Feb 18, 2020, 7:34 AM IST
ಮಡಿಕೇರಿ: ಅರೆಭಾಷೆಯ ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಹಬ್ಬಗಳ ಆಚರಣೆ ಅತಿ ಮುಖ್ಯವೆಂದು ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಅವರು ಹೇಳಿದ್ದಾರೆ.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಶ್ರೀ ಭಗವಾನ್ ಸಂಘ ಊರುಬೈಲು, ಸ್ವಾಮಿ ವಿವೇಕಾನಂದ ಯುವಕ ಮಂಡಲ ಇವರ ಸಹಯೋಗದಲ್ಲಿ ಚೆಂಬು ಗ್ರಾಮದ ಕೂಡಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಅರೆಭಾಷೆ ಸಿರಿ ಸಂಸ್ಕೃತಿ ಮತ್ತು ಕೆಡ್ಡಾಸ ಗೌಜಿ ಸಾಂಸ್ಕೃತಿಕ ಜಂಬರ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಗೆ ತೆಂಗಿನ ಎಣ್ಣೆಯನ್ನು ಅರ್ಪಿಸುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮವಾಗಬೇಕು. ಅರೆಭಾಷೆ ಮಾತನಾಡುವ ಜನಾಂಗದ ಪ್ರತಿಭೆಯನ್ನು ಹೊರತರಲು ಈ ಇಂತಹ ಕಾರ್ಯಕ್ರಮ ಅವಶ್ಯಕ ಎಂದು ಅವರು ಹೇಳಿದರು.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಅಂತೆಯೇ ನಮ್ಮ ರಾಜ್ಯವೂ ಸಹ ವಿವಿಧ ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡಿದೆ. ಅವುಗಳಲ್ಲಿ ಅರೆಭಾಷೆ ಸಂಸ್ಕೃತಿಯಲ್ಲಿ ಆಚರಿಸಲ್ಪಡುವ ಕೆಡ್ಡಾಸ ಹಬ್ಬ ಬಹಳಷ್ಟು ವೈವಿಧ್ಯತೆಯನ್ನು ಒಳಗೊಂಡಿದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮುಂದೆಯೂ ಇಂತಹದೇ ಕಾರ್ಯಕ್ರಮಗಳನ್ನು ಆಯೋಜಿಸಲಿ. ಈ ಮೂಲಕ ಮುಂದಿನ ಜನಾಂಗಕ್ಕೂ ಸಹ ಈ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಲಿ ಎಂದು ಶುಭ ಹಾರೈಸಿದರು.
ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್ ಅವರು ಮಾತನಾಡಿ, ಅರೆಭಾಷೆ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಅವರು ಹೇಳಿದರು
ಅರೆಭಾಷೆ ಜನಾಂಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು. ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಅರೆಭಾಷೆ ಸಾಂಸ್ಕೃತಿಕ ಪರಂಪರೆಯ ಬಗ್ಗೆಯೂ ತಿಳಿಸಬೇಕು. ಮುಂದಿನ ಪೀಳಿಗೆಗೂ ಈ ಸಂಸ್ಕೃತಿಯನ್ನು ಮುಂದಿವರೆಸಿಕೊಂಡು ಹೋಗುವಂತಾಗಲಿ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಲಕ್ಷಿ¾ ನಾರಾಯಣ ಕಜೆಗದ್ದೆ ಅವರು ಮಾತನಾಡಿ ಬದುಕು ಆಧುನಿಕತೆಗೆ ಹೊಂದಿಕೊಳ್ಳುತ್ತಿದ್ದಂತೆ ಅರೆಭಾಷೆ ಮಾತನಾಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಅರೆಭಾಷೆಯ ಬಗ್ಗೆ ಹಲವರಲ್ಲಿರುವ ಕೀಳರಿಮೆ ಇದಕ್ಕೆ ಕಾರಣ. ಅರೆಭಾಷೆ ಸಂಸ್ಕೃತಿಗೆ ಸುಧೀರ್ಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯಿದೆ. ಇವೆಲ್ಲವನ್ನು ಅರಿತು, ಅರೆಭಾಷೆಯ ಬಗ್ಗೆ ಅಭಿಮಾನವನ್ನು ಬೆಳಸಿಕೊಳ್ಳಬೇಕು ಎಂದರು.
ಅಕಾಡಮಿಯ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರ ಜೊತೆಗೆ ಭಾಷೆ ಬೆಳವಣಿಗೆಗೆ ಅಗತ್ಯವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಿಂತಲೂ ಹೆಚ್ಚು ಭಾಷಾ ಬೆಳವಣಿಗೆಗೆ ಅಗತ್ಯವಿರುವ ವೈಜ್ಞಾನಿಕ ಕಾರ್ಯಕ್ರಮಗಳನ್ನು ಅಕಾಡಮಿ ವತಿಯಿಂದ ಆಚರಿಸುವ ಯೋಜನೆ ಇದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯರಾದ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ, ಕೆಡ್ಡಸ ಗೌಜಿ ಮಣ್ಣಿನೊಂದಿಗೆ ಬೆಳೆದು ಬಂದ ಹಬ್ಬವಾಗಿದೆ. ಕಾಲ ಬದಲಾದಂತೆ ಹಬ್ಬ ಆಚರಣೆಯೂ ಕಡಿಮೆಯಾಗಿದೆ. ಕೇಂದ್ರ ಸಚಿವರಾದ ಡಿ.ವಿ ಸದಾನಂದ ಗೌಡ ಮತ್ತು ಕೆ.ಜಿ ಬೋಪಯ್ಯ ಅವರ ಶ್ರಮದಿಂದ ಇಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪಿತವಾಗಿದೆ. ಮುಂದೆಯೂ ಅರೆಭಾಷೆ ಸಂಸ್ಕೃತಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದರು.
ಚೆಂಬು ಗ್ರಾಮಪಂಚಾಯಿತಿ ಅಧ್ಯಕ್ಷರಾದ ದಿನೇಶ್ ಊರುಬೈಲು ಅವರು ಮಾತನಾಡಿ, ಚೆಂಬು ಗ್ರಾಮದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ. ಕನ್ನಡ ನುಡಿ ಮತ್ತು ಸಂಸ್ಕೃತಿಯ ಭಾಗ ಈ ಅರೆಭಾಷೆ. ಇದನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯವಾಗಬೇಕು ಎಂದು ನುಡಿದರು. ಕೆ.ವಿ.ಜಿ.ಸಿ.ಇ ಕಾಲೇಜಿನ ಪ್ರಾಂಶುಪಾಲರು ಮತ್ತು ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷರಾದ ಡಾ. ಎನ್.ಎ ಜ್ಞಾನೇಶ್ ಅವರು ಮಾತನಾಡಿ, ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಲಿ. ಯುವ ಜನಾಂಗ ಈ ಅರೆಭಾಷೆಯನ್ನು ಬೆಳೆಸುವ ಕಾರ್ಯದತ್ತ ಮುಖ ಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಸಿ ಅನಂತ, ನಿವೃತ್ತ ಪ್ರಾಂಶುಪಾಲರು ಮತ್ತು ಲೇಖಕರಾದ ಕುಯಿಂತೋಡು ದಾಮೋದರ, ಚೆಂಬುವಿನ ಸ್ವಾಮಿ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷರಾದ ದಿನೇಶ್ ಪೂಜಾರಿ ಗದ್ದೆ, ಕೂಡಡ್ಕ ಸ.ಹಿ.ಪ್ರಾ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜೀವನ್ ಪೆರಿಗೇರಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ ಸೇರಿದಂತೆ ಇತರರು ಇದ್ದರು.
ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಂಯೋಜಕ ಲೋಕೇಶ್ ಊರುಬೈಲು ಪ್ರಸ್ತಾವನೆಗೈದರು.ದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಸದಸ್ಯರಾದ ಸ್ಮಿತಾ ಅಮೃತರಾಜ್ ಸ್ವಾಗತಿಸಿದರು, ರಮೇಶ ನಂಬಿಯಾರ್ ನಿರೂಪಿಸಿದರು. ರವಿಕುಮಾರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nuclear Power Plant: ಇನ್ನೊಂದು ಅಣುಸ್ಥಾವರ ಮೂರು ಜಿಲ್ಲೆಗಳಲ್ಲಿ ಪರಿಶೀಲನೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.