ಹದಗೆಟ್ಟ ಹರದೂರು ವ್ಯಾಪ್ತಿಯ ನಿರ್ಮಾಣ ಹಂತದ ಗ್ರಾಮೀಣ ರಸ್ತೆ
Team Udayavani, Jun 30, 2018, 7:00 AM IST
ಸೋಮವಾರಪೇಟೆ: ತಾಲ್ಲೂಕಿನ ಹರದೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಗ್ರಾಮೀಣ ರಸ್ತೆ ಟಿಂಬರ್ ಲಾರಿ ಸಂಚಾರದಿಂದ ಹದಗೆಟ್ಟಿದೆ.
ಹೊಸತೋಟದಿಂದ ಗರಗಂದೂರು ಗ್ರಾಮವನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, 8.50ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಪ್ರತಿನಿತ್ಯ ಈ ರಸ್ತೆಯಲ್ಲಿ ರಾಜರೋಷವಾಗಿ 25 ಟನ್ ತೂಕಕ್ಕೂ ಅಧಿಕ ಸಾಮಾರ್ಥ್ಯವುಳ್ಳ ಮರಗಳನ್ನು ತುಂಬಿಸಿಕೊಂಡು ಲಾರಿಗಳು ಸಂಚರಿಸುತ್ತಿದೆ. ಕುಂಬಾರಬಾಣೆ ಎಂಬಲ್ಲಿ ರಸ್ತೆ ಬದಿಯಲ್ಲಿ ಹೊನ್ನೆ, ನಂದಿ, ಸಿಲ್ವರ್ ಮರಗಳನ್ನು ನಾಟಗಳಾನ್ನಾಗಿ ಪರಿವರ್ತಿಸಿ, ರಸ್ತೆ ಬದಿಯಲ್ಲೆ ಸಂಗ್ರಹಿಸಿದ್ದಾರೆ. ಇದರಿಂದ ಕೋಟಿ ವೆಚ್ಚದ ಗ್ರಾಮೀಣ ರಸ್ತೆ ಹಾಳಾಗುತ್ತಿದ್ದು, ಲೋಕೋಪಯೋಗಿ ಇಲಾಖೆ ಮೌನಕ್ಕೆ ಶರಣಾಗಿದೆ.
ಗ್ರಾಮೀಣ ರಸ್ತೆಯಲ್ಲಿ 8 ಟನ್ ಮತ್ತು ರಾಜ್ಯಹೆದ್ದಾರಿಯಲ್ಲಿ 25 ಟನ್ ಸಾಮಾರ್ಥ್ಯದ ವಾಹನಗಳು ಮಾತ್ರ ಸಂಚರಿಸಬೇಕೆಂದು ಲೋಕೋಪಯೋಗಿ ನಾಮಫಲಕ ಸೂಚಿ ಸುತ್ತದೆ. ಆದರೆ ನಿಯಮಗಳನ್ನು ಮೀರಿ ಟಿಂಬರ್ ಲಾರಿಗಳು ಸಂಚರಿಸುತ್ತಿದ್ದು, ಇದ ರಿಂದ ಬಹುತೇಕ ರಸ್ತೆಗಳು ಹಾಳಾಗುತ್ತಿದ್ದು, ಸರ್ಕಾರದ ಕೋಟ್ಯಂತರ ರೂ. ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಭಾಗದಲ್ಲಿ ಅಧಿಕ ಸಾಮಾರ್ಥ್ಯದ ಟಿಂಬರ್ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆ ಹಾಳಾಗುವುದರೊಂದಿಗೆ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಟಿಂಬರ್ ಲಾಭಿ ಕೊಡಗಿನಲ್ಲಿ ಬಲಿಷ್ಟವಾಗಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ ಎಂದು ಗರಗಂದೂರಿನ ಕೆ.ಎಂ.ಲಕ್ಷೆ„ಣ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.