ಶನಿವಾರಸಂತೆ: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ದಾಂಧಲೆ
Team Udayavani, Jul 10, 2017, 4:00 AM IST
ಶನಿವಾರಸಂತೆ: ಬೆಳ್ಳಂಬೆಳಗ್ಗೆ ಕಾಫಿತೋಟಗಳಿಗೆ ಏಕಾಏಕಿ ನುಗ್ಗಿದ ಕಾಡಾನೆಗಳ ಹಿಂಡು ದಾಂಧಲೆ ಎಬ್ಬಿಸಿ ಗ್ರಾಮಸ್ಥರನ್ನು ಗಾಬರಿಗೊಳಿಸಿದ್ದು, ಅನಂತರ ಗ್ರಾಮಸ್ಥರು ಕಾಡಾನೆಗಳನ್ನು 4 ಕಿ.ಮೀ. ದೂರದ ತನಕ ಓಡಿಸಿಕೊಂಡು ಹೋಗಿ ಅರಣ್ಯಕ್ಕೆ ಅಟ್ಟಿದ ಘಟನೆ ಶನಿವಾರ ಬೆಳಗ್ಗೆ ನಿಡ್ತ ಗ್ರಾ.ಪಂ.ವ್ಯಾಪ್ತಿಯ ಹಿತ್ಲುಕೇರಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ ಚೌಡನಹಳ್ಳಿ ಗ್ರಾಮದಿಂದ ಬಂದ ಮರಿ ಆನೆಯೊಂದು ಸೇರಿದಂತೆ ಒಟ್ಟು 6 ಕಾಡಾನೆಗಳ ಹಿಂಡು ಹಿತ್ಲುಕೇರಿ ಗ್ರಾಮದ ಕಾಫಿತೋಟ ವೊಂದಕ್ಕೆ ನುಗ್ಗಿ ತೋಟದೊಳಗೆ ದಾಂಧಲೆ ಎಬ್ಬಿಸಿವೆ, ತೋಟ ದಲ್ಲಿ ಕಾಡಾನೆಗಳ ಹಿಂಡು ದಾಂಧಲೆ ಎಬ್ಬಿಸುತ್ತಿರುವ ಸುಳಿವು ತಿಳಿದ ನಾಯಿಗಳು ಬೊಗಳುತ್ತಿರುವ ಶಬ್ದ ಕೇಳಿ ಮನೆಯಿಂದ ಹೊರಬಂದ ಕಾಫಿತೋಟದ ಮಾಲಕರು ತೋಟದಲ್ಲಿ ಕಾಡಾನೆಗಳ ಹಿಂಡು ಓಡಾತ್ತಿರುವುದನ್ನು ಗಮನಿಸಿ ಅಕ್ಕಪಕ್ಕದ ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
ಅಕ್ಕಪಕ್ಕದ ಕಾಫಿತೋಟದ ಮಾಲಕರು ಹಾಗೂ ಗ್ರಾಮಸ್ಥರೆ ಲ್ಲರೂ ಸೇರಿಕೊಂಡು ತೋಟದಿಂದ ಮತ್ತೂಂದು ತೋಟಕ್ಕೆ ಕಾಡಾನೆಗಳನ್ನು ಬೊಬ್ಬೆ ಹಾಕಿಕೊಂಡು ಓಡಿಸಿದ್ದಾರೆ. ಪಟಾಕಿ ಸಿಡಿಸಿ ಮತ್ತು ಇತರ ವಸ್ತುಗಳಿಂದ ಶಬ್ದವನ್ನು ಭರಿಸಿ ಗ್ರಾಮಸ್ಥರು ಕಾಡಾನೆಗಳನ್ನು ಓಡಿಸಿದ್ದಾರೆ. ಇದೇರೀತಿ ಸುಮಾರು 4 ಕಿ.ಮೀ. ದೂರದ ತನಕ ಗ್ರಾಮಸ್ಥರು ಕಾಡಾನೆಗಳನ್ನು ಓಡಿಸಿಕೊಂಡು ಹೋಗಿದ್ದಾರೆ. ಕಾಡಾನೆಗಳನ್ನು ತೋಟದೊಳಗೆ ಓಡಿಸುತ್ತಿದ್ದ ಸಂದರ್ಭದಲ್ಲಿ ಗಾಬರಿಗೊಂಡ ಹಿಂಡಿನಲ್ಲಿದ್ದ ಕೆಲವು ಆನೆಗಳು ಗ್ರಾಮಸ್ಥರನ್ನು ಅಟ್ಟಾಡಿಸಿಕೊಂಡು ಹೋಗಿವೆ.
ಭಯಭೀತರಾದ ಗ್ರಾಮಸ್ಥರು ಎದ್ದನೋ ಬಿದ್ದನೋ ಎನ್ನುವಂತೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಕೊನೆಗೆ ಕಾಫಿ ತೋಟದಿಂದ ಹೊರಬಂದ ಕಾಡಾನೆಗಳ ಹಿಂಡು ಕಾರ್ಗೊಡು ಬಳಿ ಶನಿವಾರಸಂತೆ ಮುಖ್ಯರಸ್ತೆಯನ್ನು ದಾಟಿಕೊಂಡು ಕಾರ್ಗೊಡು ಮೀಸಲು ಅರಣ್ಯದೊಳಗೆ ಹೋಗಿವೆ. ಸುಮಾರು 4 ಕಿ.ಮೀ. ದೂರದ ತನಕ ಕಾಡಾನೆಗಳನ್ನು ಓಡಿಸಿಕೊಂಡು ಹೋದ ಗ್ರಾಮಸ್ಥರು ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿ ಯಾದರು. ಕಾರ್ಯಾಚರಣೆಯಲ್ಲಿ ಹಿತ್ಲುಕೇರಿ ಗ್ರಾಮದ ಸುಮಾರು 50ಕ್ಕಿಂತ ಹೆಚ್ಚಿನ ಗ್ರಾಮಸ್ಥರು ಪಾಲ್ಗೊಂಡಿದ್ದರು ಇದೇ 6 ಕಾಡಾನೆಗಳ ಹಿಂಡು ಶನಿವಾರ ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಚೌಡನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಚೌಡನಹಳ್ಳಿ ಗ್ರಾಮದ ಖತೀಜ ಬಾಬು ಎಂಬುವರು ಬೆಳಗ್ಗೆ 7 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದೆ ನಾಯಿಗಳು ಬೊಗಳುತ್ತಿರುವುದನ್ನು ಗಮನಿಸಿ ಹೊರಬಂದಾಗ ಮನೆಯ ಮುಂದೆ ಕಾಡಾನೆಗಳು ಇರುವುದನ್ನು ತಿಳಿದು ಗಾಬರಿಯಿಂದ ಮನೆಯೊಳಗೆ ಓಡಿಹೋಗಿ ಬಾಗಿಲನ್ನು ಹಾಕಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಆನೆಯೊಂದು ಖತೀಜ ಬಾಬು ಅವರ ಮನೆಯ ಗೋಡೆಗೆ ಅಪ್ಪಳಿಸಿದೆ. ಇದರಿಂದ ಅವರ ವಾಸದ ಮನೆಯ ಗೋಡೆ ಬಿರುಕುಗೊಂಡಿದೆ. ಅಕ್ಕಪಕ್ಕದ ಮನೆಯವರು ಕೂಗಿಕೊಂಡಾಗ ಕಾಡಾನೆಗಳ ಹಿಂಡು ನಿಡ್ತ, ಹಿತ್ಲುಕೇರಿ ಗ್ರಾಮಗಳತ್ತ ನುಸುಳಿದವು ಎಂದು ಗ್ರಾಮಸ್ಥರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ
Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್
Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.