“ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಯೋಜನೆ ಎಲ್ಲೆಡೆ ತಲುಪಲಿ’
ಅಲೂರು ಸಿದ್ದಾಪುರದಲ್ಲಿ 2 ನೇ ಅರೆಭಾಷೆ ಸಾಹಿತ್ಯ ಸಮ್ಮೇಳನ
Team Udayavani, Feb 25, 2020, 5:04 AM IST
ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಆಲೂರು ಸಿದ್ದಾಪುರ, ಸಂಗಯ್ಯನಪುರ ಅರೆಭಾಷೆ ಗೌಡ ಸಮಾಜ ಆಶ್ರಯದಲ್ಲಿ ಎರಡನೇ ಅರೆಭಾಷೆ ಸಾಹಿತ್ಯ ಸಮ್ಮೇಳನಕ್ಕೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಕೇಂದ್ರ ಸಚಿವ ದೇವರಗುಂಡ ವಿ.ಸದಾನಂದ ಗೌಡ ಚಾಲನೆ ನೀಡಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ರಾಜ್ಯದ ವಿವಿಧ ಭಾಗಗಳಿಗೂ ತಲುಪಬೇಕು. 10 ಕುಟುಂಬ 18 ಗೋತ್ರದ ವಿಚಾರಗಳು ತಿಳಿಯಬೇಕು. ಹುಟ್ಟಿನಿಂದ ಕೊನೆತನಕ ಇರುವ ಸಂಸ್ಕೃತಿ ಪರಂಪರೆ ಹಾಗೂ ಪದ್ಧತಿ ಬಗ್ಗೆ ತಿಳಿಯಬೇಕು ಎಂದರು.
ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿ ಬೆಳೆಸಬೇಕಿದೆ. ಆ ನಿಟ್ಟಿನಲ್ಲಿ ಅರೆಭಾಷೆಯನ್ನು ಉಳಿಸಬೇಕಿದೆ ಎಂದರು.
ಡಿ.ವಿ.ಸದಾನಂದ ಗೌಡ ಅವರು ಕಾಫಿ ಬೆಳೆಗಾರರ ಸಂಕಷ್ಟವನ್ನು ಆಲಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ರಾಷ್ಟ್ರ ಅನೇಕತೆಯಲ್ಲಿ ಏಕತೆ ಹೊಂದಿದ್ದು, ಅರೆಭಾಷೆ ಬಗ್ಗೆ ಅಭಿಮಾನವಿರಲಿ ಜೊತೆಗೆ ಸ್ವಾಭಿಮಾನವಿರಲಿ, ಆದರೆ ದುರಾಭಿಮಾನ ಬೇಡ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷಿ¾ ನಾರಾಯಣ ಕಜೆಗದ್ದೆ ಅವರು ಮಾತನಾಡಿ ರಾಜಕೀಯ, ಸಾಮಾಜಿಕ ಮತ್ತಿತರ ಕ್ಷೇತ್ರದಲ್ಲಿ ಮುಖ್ಯವಾಹಿನಿಯಲ್ಲಿದ್ದು, ಕಲೆ, ಚಿತ್ರಕಲೆ, ಚಲನಚಿತ್ರ ಹೀಗೆ ಇನ್ನೂ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಅವರು ಸಲಹೆ ಮಾಡಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷಪಿ.ಸಿ.ಜಯರಾಮ ಅರೆಭಾಷೆ ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷಕೆ.ಆರ್.ಗಂಗಾಧರ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿದರು.
ಅರೆಭಾಷೆ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭವಾನಿ ಶಂಕರ ಹೊದ್ದೆಟ್ಟಿ ಮಾತನಾಡಿ ಅರೆಭಾಷೆ ಪುಸ್ತಕಗಳನ್ನು ಕೊಂಡು ಓದಬೇಕು ಎಂದು ಸಲಹೆ ಮಾಡಿದರು. ಅರೆಭಾಷೆ ಕಾದಂಬರಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಜಿ.ಪಂ.ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್, ಜಿ.ಪಂ.ಸದಸ್ಯರಾದ ಸರೋಜಮ್ಮ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಜಿ.ಮೇದಪ್ಪ, ಆಲೂರು ಸಿದ್ದಾಪುರ ಗೌಡ ಸಮಾಜದ ಅಧ್ಯಕ್ಷರಾದ ದೇವಾಯಿರ ಗಿರೀಶ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಇತರರು ಇದ್ದರು.
ಧನಂಜಯ ಅಗೋಳಿಕಜೆ ಅರು ಸ್ವಾಗತಿಸಿದರು, ಪಟ್ಟಡ ಲೀಲಾ ಕುಮಾರ್ ಮತ್ತು ಕಡ್ಲೆàರ ತುಳಸಿ ಮೋಹನ್ ಅವರು ನಿರೂಪಿಸಿದರು,ಕುಯ್ಯಮುಡಿ ಜಯಕುಮಾರ್ ವಂದಿಸಿದರು. ಅಬ್ದುಲ್ ರಜಾಕ್, ಕಾನೂನು ಘಟಕದ ಅಧ್ಯಕ್ಷ ಧ್ರುವ ಕುಮಾರ್, ರಾಹುಲ್ ಬ್ರಿಗೇಡ್ ಅಧ್ಯಕ್ಷ ಚುಮ್ಮಿ ದೇವಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಯೋಜಕ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ವಿರಾಜಪೇಟೆ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಗೋಪಾಲಕೃಷ್ಣ, ಮಡಿಕೇರಿ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ದಾಸ್, ಮುನೀರ್, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಕಚೇರಿ ಸಹಾಯಕಿ ರಾಣಿ, ಕುಶಾಲನಗರ ಯುವ ಕಾಂಗ್ರೆಸ್ಸಿನ ದೇವಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.ಂಗಯ್ಯನಪುರ ಗ್ರಾಮದೇವತೆ ದೇವಸ್ಥಾನದಿಂದ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಭವಾನಿಶಂಕರ ಹೊದ್ದೆಟ್ಟಿ ಅವರನ್ನು ಸಾಂಪ್ರದಾಯಿಕವಾಗಿ ಮೆರವಣಿಗೆ ಮೂಲಕ ಕರೆತರಲಾಯಿತು. ಕೆದಂಬಾಡಿ ಈರಪ್ಪ ಅವರು ಮೆರವಣಿಗೆಯನ್ನು ಉದ್ಘಾಟಿಸಿದರು. ಸಮ್ಮೇಳನ ದ್ವಾರದ ಉದ್ಘಾಟನೆಯನ್ನು ಅರಕಲಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹುಲಿಮನೆ ಮಾದಪ್ಪ ನೆರವೇರಿಸಿದರು. ರಾಷ್ಟ್ರ ಧ್ವಜಾರೋಹಣವನ್ನು ಗಣಗೂರು ಗ್ರಾ.ಪಂ.ಅಧ್ಯಕ್ಷೆ ಸವಿತಾ ಸುಕುಮಾರ್, ಸಮ್ಮೇಳನದ ಧ್ವಜಾರೋಹಣವನ್ನು ಆಲೂರು ಸಿದ್ದಾಪುರ ಗ್ರಾ.ಪಂ ಅಧ್ಯಕ್ಷರಾದ ವೀಣಾ ರಮೇಶ್ ನೆರವೇರಿಸಿದರು. ರಮೇಶ್ ಬೋಳನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಆಕರ್ಷಕ ವಸ್ತು ಪ್ರದರ್ಶನ
ಅರೆಭಾಷೆ ಮಾತನಾಡುವ ಜನಾಂಗದವರು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಅನೇಕ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇದರ ಜೊತೆಗೆ ಪುಸ್ತಕ ಪ್ರೇಮಿಗಳಿಗಾಗಿ ಪುಸ್ತಕ ಮಳಿಗೆ, ಚಿತ್ರಕಲೆ, ಅನ್ವಯಿಕ ಕಲೆಗಳಲ್ಲಿ ಆಸಕ್ತಿ ಹೊಂದಿದವರಿಗಾಗಿ ಮಂಗಳೂರಿನ ಮಹಾಲಸ ಕಾಲೇಜ್ ಆಫ್ ವಿಶ್ಯುವಲ್ ಆರ್ಟ್ ವತಿಯಿಂದ ಮಳಿಗೆಗಳನ್ನು ತೆರೆಯಲಾಗಿತ್ತು. ಮುಖ್ಯವಾಗಿ ಹಿತ್ಲುಗದ್ದೆ ಗ್ರಾಮಸ್ಥರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಧ್ಯಾಪಕರಾದ ಸುಬ್ರಹ್ಮಣ್ಯ ಕೆ.ಜಿ ವಿಟ್ಲ ಅವರು ಕದಿಕೆ ಪಾರಂಪರಿಕ ವಸ್ತು ಸಂಗ್ರಹಾಲಯದ ವತಿಯಿಂದ ಸಂಗ್ರಹಿಸಿದ್ದ ನೂರಿನ್ನೂರು ವರ್ಷಗಳ ಇತಿಹಾಸವಿರುವ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶನ ಹಲವರನ್ನು ಪುಳಕಿತರನ್ನಾಗಿ ಮಾಡಿತು.
ಬಹುಮುಖ್ಯವಾಗಿ ವಿವಿಧ ರೀತಿಯ ಮೀನು ಹಿಡಿಯುವ ಸಾಧನಗಳಾದ ಕೊಂಜೊಳು, ಕುತ್ತುಕೂಳಿ ಮುಂತಾದವುಗಳು ಬಹು ವೈವಿಧ್ಯತೆಯಿಂದ ಕೂಡಿದ್ದವು. ಮೀನು ಕೊಯ್ಯುವ ಹಳೆಯ ಕಾಲದ ಕತ್ತಿ, ಕೊರಂಬೆ, ಪುತ್ತರಿ ಪಟ್ಟೆ, ಓನಲೆ, ಪರೆ, ಮಣ್ಣಿನ ಹೂಜಿ, ಮೊರ, ಮರಾಯಿ, ನೊಗ ನೇಗಿಲುಗಳು ನೋಡುಗರನ್ನು ಆಕರ್ಷಿಸಿದವು. ಆಧುನಿಕತೆಯ ಪರಿವಿಲ್ಲದ ಕಾಲದಲ್ಲಿ ಜಾಣ್ಮೆಯಿಂದ ಬಿದಿರು, ಕಬ್ಬಿಣ, ತಾಮ್ರ ಮತ್ತು ಮಣ್ಣಿನಿಂದ ಹಿರಿಯರು ಕ್ರಿಯಾತ್ಮಕವಾಗಿ ರಚಿಸಿದ ವಸ್ತುಗಳು ಮಕ್ಕಳ ಮನಸ್ಸಿಗೆ ಮುದ ನೀಡಿದವು ಕಲಾವಿದನ ಕೈಚಳಕದಲ್ಲಿ ಹುಲ್ಲು ಹಾಸಿನಿಂದ ನಿರ್ಮಿತವಾಗಿದ್ದ ಹಿತ್ಲುಗದ್ದೆ ಗ್ರಾಮದವರ ಐನ್‌ಮನೆ ಆಕರ್ಷಕವಾಗಿತ್ತು.