ಸಂಸ್ಕಾರದ ಶಿಕ್ಷಣದಿಂದ ಮಾತ್ರ ಸುಸಜ್ಜಿತ ಸಮಾಜ ನಿರ್ಮಾಣ
Team Udayavani, Apr 10, 2019, 6:30 AM IST
ಸೋಮವಾರಪೇಟೆ: ಸಂಸ್ಕಾರ ವಂತ ಶಿಕ್ಷಣ ದಿಂದ ಮಾತ್ರ ಉತ್ತಮ ಪ್ರಜೆ ಹಾಗು ಸುಸಜ್ಜಿತ ಸಮಾಜ ನಿರ್ಮಾಣ ಸಾಧ್ಯ ಆದ್ದರಿಂದಲೇ ಶಿವಕುಮಾರ ಸ್ವಾಮೀಜಿಗಳು ಇಂತಹ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಎಂದು ಮುದ್ದಿನ ಕಟ್ಟೆ ಮಠಾಧೀಶರಾದ ಶ್ರೀಅಭಿನವ ಸಿದ್ದಲಿಂಗ ಶಿವಾರ್ಚಾಯ ಸ್ವಾಮೀಜಿ ಹೇಳಿದ್ದರು.
ಅಖೀಲ ಭಾರತ ಶರಣ ಸಾಹಿÂತ್ಯ ಪರಿಷತ್ತು, ಸೋಮೇಶ್ವರ ದೇವಾಲಯದ ಸಮಿತಿ ಹಾಗು ಸೋಮೇಶ್ವರ ಯುವಕ ಸಂಘದ ಆಶ್ರಯದಲ್ಲಿ ಗೆಜ್ಜೆಹಣಕೋಡು ಗ್ರಾಮದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮದ ವಾರ್ಷಿಕ ಪೂàಜೆ ಮತ್ತು ಸಿದ್ದಗಂಗಾ ಶ್ರೀಗಳ 112ನೇ ಜಯಂತಿ ಹಾಗು ಗುರುವಂದನಾ ಕಾರ್ಯ ಕ್ರಮವನ್ನು ಉದ್ದೆಶಿಸಿ ಮಾತನಾಡಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ, ಅವರಲ್ಲಿ ಸಂಸ್ಕಾರ ಬೆಳೆಸಿದರೆ ಅದು ದೇಶದ ಭದ್ರ ಬುನಾದಿಯೆಂದು ತಿಳಿದು ಸಿದ್ದಾಗಂಗಾ ಶಿಕ್ಷಣ ಸಂಸ್ಥೆಗಳ ಮೂಲಕ ಬಡವರು, ದೀನ ದಲಿತರನ್ನದೆ ಶಿಕ್ಷಣ ನೀಡಿದ್ದರು. ಹಸಿದ ಹೊಟ್ಟೆಗೆ ಅನ್ನ, ಆಶ್ರಯ, ನೀಡುವ ಮೂಲಕ ಜೀವನವನ್ನ ಸೇವೆಗಾಗಿ ಮುಡಿಪಾಗಿಟ್ಟವರು ಸೇವೆಯನ್ನೇ ಸಂಪತ್ತೆಂದು ಭಾವಿಸಿ ಜಗತ್ತನ್ನು ಉದ್ದಾರ ಮಾಡಲು ಹೊರಟ ಮಹಾನ್ ಸಂತರು ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಮಾತನಾಡಿ ತಮ್ಮ ಬದುಕನ್ನು ಸಾರ್ವತ್ರಿಕವಾಗಿರಿಸಿಕೊಂಡು ಮಕ್ಕಳಿಗೆ,ಶಿಕ್ಷಣ, ಆಶ್ರಯ, ದಾಸೋಹ ನೀಡಿ ಅವರಲ್ಲಿ ಆತ್ಮ ಸ್ಥೆರ್ಯ ತುಂಬುವ ಮೂಲಕ ಬಡವರ ಬಗ್ಗೆ ಕಳಾಜಿ ತೋರಿದ ಮಹಾನುಭಾವರು ಎಂದರು.
ನಿವೃತ ಪ್ರಾಧ್ಯಾಪಕರಾದ ಧರ್ಮಪ್ಪ ಮಾತನಾಡಿ ಸ್ವಾಮೀಜಿ ಅವರು ಹುಟ್ಟಿದ ಏಪ್ರೀಲ್ 1 ಬ್ರಿಟಿಷರ ಹೇಳಿಕೆ ಯಂತೆ ಮೂರ್ಖರ ದಿನ ಆದರೆ ಭಾರತೀ ಯರಾದ ನಮಗೆ ಅದು ಸಂತರ ದಿನ, ದಾಸೋಹ ದಿನ ಮುಂದಿನ ದಿನಗಳಲ್ಲಿ ಅವರ ಪುಣ್ಯ ಸ್ಮರಣೆ ಮೂಲಕ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿ ಕೊಳ್ಳೋಣ ವೆಂದರು.
ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್,ಮಹೇಶ್ ಅಧ್ಯಕ್ಷತೆ ವಹಿಸಿದ್ದರು ಸೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ, ವೇದಾಂತಯ್ಯ, ಯುವಕ ಸಂಘದ ಅಧ್ಯಕ್ಷ ಪ್ರಕಾಶ್, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಖಜಾಂಜಿ ಡಿ.ಬಿ.ಸೋಮಪ್ಪ, ಜಯರಾಜ್, ದಯಾನಂದ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ
Bengaluru: ಸಾಲ ವಾಪಸ್ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ
Soldier: ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; ಮಹಾಲಿಂಗಪುರದ ಯೋಧ ಹುತಾತ್ಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.