ಹಾರಂಗಿ ನಾಲೆಗೆ ಉರುಳಿದ ಕಾರು: ಒಂದೇ ಕುಟುಂಬದ ನಾಲ್ವರ ಸಾವು
Team Udayavani, Aug 7, 2018, 9:52 AM IST
ಮಡಿಕೇರಿ: ಹಾರಂಗಿ ನಾಲೆಗೆ ಕಾರು ಮಗುಚಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಂಟಿ ಕೊಪ್ಪಲು ಗ್ರಾಮದ ಬಳಿ ಸೋಮವಾರ ಸಂಭವಿಸಿದೆ. ನಾಪೋಕ್ಲು ನಿವಾಸಿಗಳಾದ ಪಳನಿ ಸ್ವಾಮಿ (45), ಪತ್ನಿ ಸಂಜು ಕುಮಾರಿ (34), ಮತ್ತು ಮಕ್ಕಳಾದ ಪೂರ್ಣಿಮಾ (19) ಹಾಗೂ ಲಿಖೀತ್ (15) ಮೃತಪಟ್ಟವರು.
ನಾಪೋಕ್ಲು ನಿವಾಸಿ ಪಳನಿಸ್ವಾಮಿ ಅವರು ಪತ್ನಿ, ಮಕ್ಕಳೊಂದಿಗೆ ತನ್ನ ಮಾರುತಿ ಆಮ್ನಿಯಲ್ಲಿ ಕುಶಾಲನಗರ ಮಾರ್ಗವಾಗಿ ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಕಮರವಳ್ಳಿ ಅಂಚೆ ಕಚೇರಿಗೆ ತೆರಳಿ ಅಲ್ಲಿಂದ ಚನಕಲ್ ಸಮೀಪದ ಲಕ್ಷ್ಮೀಪುರ ಗ್ರಾಮ ದಲ್ಲಿರುವ ತಮ್ಮ ಜಮೀನಿಗೆ ಹೋಗುತ್ತಿದ್ದ ಸಂದರ್ಭ ನಾಲೆಯ ಏರಿಯ ಮೇಲೆ ನಿಯಂತ್ರಣ ತಪ್ಪಿ ವಾಹನ ನಾಲೆಗೆ ಜಾರಿತು.
ನಾಲೆಯ ನೀರಿನಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಿಸಲು ಪ್ರಯತ್ನಿಸಿ ದರಾದರೂ ಪ್ರಯತ್ನ ಫಲ ನೀಡಲಿಲ್ಲ. ನಾಲೆಯ ನೀರಿನ ಸೆಳೆತಕ್ಕೆ ಸಿಲುಕಿ ಕಾರು ಹಲವು ಮೀಟರ್‌ಗಳಷ್ಟು ದೂರ ಸಾಗಿದ್ದು, ಒಳಗಿದ್ದವರು ಉಸಿರುಗಟ್ಟಿ ವಾಹನದೊಳಗೇ ಮೃತ ಪಟ್ಟರು.
ಜಮೀನಿಗೆ ತೆರಳುತ್ತಿದ್ದರು
ಮೂಲತಃ ಪಿರಿಯಾಪಟ್ಟಣದವರಾದ ಈ ಕುಟುಂಬ ತಾಲೂಕಿನ ಬೆಟ್ಟದಪುರ ಹೋಬಳಿಯ ಲಕ್ಷ್ಮೀಪುರ ಗ್ರಾಮ ದಲ್ಲಿ ಜಮೀನು ಹೊಂದಿದ್ದು, ಕಳೆದ 10 ವರ್ಷಗಳಿಂದ ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಗಾರೆ ಕೆಲಸ ನಿರ್ವಹಿಸುತ್ತಿದ್ದ ಪಳನಿಸ್ವಾಮಿ ಅವರ ಮಕ್ಕಳಾದ ಪೂರ್ಣಿಮಾ ಮತ್ತು ಲಿಖೀತ್ ಇಬ್ಬರೂ ಅಂಗವಿಕಲರಾಗಿದ್ದು, ಸರಕಾರದಿಂದ ಬರುವ ಅಂಗವಿಕಲರ ವೇತನವನ್ನು ದೊಡ್ಡಕಮರವಳ್ಳಿ ಅಂಚೆ ಕಚೇರಿಯಿಂದ ಪಡೆದು ಕೊಂಡು, ಲಕ್ಷ್ಮೀಪುರದ ಜಮೀನಿಗೆ ತೆರಳು ತ್ತಿದ್ದಾಗ ಅವಘಡ ಸಂಭವಿಸಿದೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ವಾಹನ ವನ್ನು ಮೇಲೆತ್ತಿ, ಮೃತದೇಹಗಳನ್ನು ಹೊರತೆಗೆದರು. ಬೆಟ್ಟದಪುರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿ ದ್ದಾರೆ. ಕುಶಾಲನಗರ ಸಮು ದಾಯ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಿ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.