ಮಕ್ಕಂದೂರು, ಮೊಣ್ಣಂಗೇರಿ ನಿವಾಸಿಗಳಲ್ಲಿ ಆತಂಕ; ನೆರವಿನ ನಿರೀಕ್ಷೆ


Team Udayavani, Jul 23, 2018, 6:10 AM IST

zzz.jpg

ಮಡಿಕೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ  ಗಾಳಿ, ಮಳೆಗೆ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಳಗಾಗಿದ್ದು, ಕೋಟ್ಯಂತರ ರೂ.ನಷ್ಟ ಸಂಭವಿಸಿದೆ. ಇದರ ನಡುವೆಯೇ ಕೆಲವು ಗ್ರಾಮಗಳಲ್ಲಿ ಭೂಮಿ ಬಾಯಿ ಬಿಡತೊಡಗಿದೆ.

ಮಡಿಕೇರಿ ತಾಲೂಕಿನ ಮಕ್ಕಂದೂರು ಹಾಗೂ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಕಿ.ಮೀ. ನಷ್ಟು ದೂರ ಭೂಮಿ ಬಿರುಕು ಬಿಟ್ಟಿದ್ದು, ದಿನದಿಂದ ದಿನಕ್ಕೆ ಇದರ ದೂರ ವ್ಯಾಪಿಸುತ್ತಲೇ ಇದೆ. ಮಕ್ಕಂದೂರು ದೇವಾಲಯದಿಂದ ಸ್ವಲ್ಪ ದೂರದಲ್ಲಿ ಭೂಮಿ ಬಾಯಿ ಬಿಡುತ್ತಿರುವುದರಿಂದ ಮಂಜುನಾಥ್‌ ಅ‌ವರಿಗೆ ಸೇರಿದ ಹಂಚಿನ ಮನೆ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ಅಪಾಯದ ಮುನ್ಸೂಚನೆಯನ್ನು ನೀಡಿದೆ. ಸುಮಾರು 15 ಲಕ್ಷ ರೂ.ವೆಚ್ಚದ ಈ ಮನೆ ಅಡಿಪಾಯದಿಂದಲೇ ಬಿರುಕು ಬಿಟ್ಟು ಮೇಲ್ಚಾವಣಿಯವರೆಗೂ ಗೋಡೆ ಬೀಳುವ ಸ್ಥಿತಿಯಲ್ಲಿದೆ. ಮನೆಯ ಪಕ್ಕದಲ್ಲಿರುವ ತೋಟದಿಂದಲೇ ಭೂಮಿ ಬಿರುಕು ಬಿಟ್ಟಿದ್ದು, ಇದು ಮನೆಯ ಭಾಗವನ್ನೂ ವ್ಯಾಪಿಸಿದೆ.

ಮಂಜುನಾಥ್‌ ಅವರ ಅನುಭವದ ಪ್ರಕಾರ ಜು.9 ರಂದು ಮಕ್ಕಂದೂರು ಭಾಗದಲ್ಲಿ ಲಘು ಭೂಕಂಪನವಾದ ಅನಂತರ ಭೂಮಿಯಲ್ಲಿ ಬಿರುಕು ಹೆಚ್ಚಾಗಿದೆ. 7 ವರ್ಷಗಳ ಹಿಂದೆ ಇದೇ ರೀತಿ ಭೂಮಿ ಕಂಪಿಸಿ ಸಣ್ಣಪುಟ್ಟ ಬಿರುಕು ಕಾಣಿಸಿಕೊಂಡಿತ್ತು. ಆದರೆ ಈ ಬಾರಿಯ ಭೂಕಂಪನ ಬಲವಾಗಿದ್ದ ಕಾರಣ ಮತ್ತು ಅತಿ ಮಳೆಯಿಂದ ಮನೆಯೇ ಕುಸಿಯುವ ಹಂತದಲ್ಲಿದೆ ಎಂದು ಮಂಜುನಾಥ್‌ ಬೇಸರ ವ್ಯಕ್ತಪಡಿಸಿದ್ದಾರೆ.
 
2ನೇ ಮೊಣ್ಣಂಗೇರಿಯಲ್ಲೂ 
ಮತ್ತೂಂದೆಡೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಎರಡನೇ ಮೊಣ್ಣಂಗೇರಿಯಲ್ಲಿ  ಭೂಮಿ ಬಾಯೆ¤ರೆದಿದೆ. ಈ ಹಿಂದೆ ಬಿರುಕುಬಿಟ್ಟ ಸ್ಥಳದಲ್ಲಿಯೇ ಭೂಮಿ ಬಿರುಕು ಬಿಟ್ಟು ಆತಂಕ ಮೂಡಿಸಿದೆ.

ಬೆಟ್ಟ-ಗುಡ್ಡಗಳಿಂದ ಕೂಡಿರುವ ಪ್ರದೇಶವಾಗಿರುವ ಎರಡನೇ ಮೊಣ್ಣಂಗೇರಿ ಯಲ್ಲಿ ಭೂಮಿ ಸುಮಾರು ಎರಡು ಕಿ.ಮೀ ವರೆಗೆ ಬಿರುಕುಬಿಟ್ಟಿದೆ. ಮೂರು ದಿನಗಳ ಹಿಂದೆ ಸಣ್ಣದಾಗಿ ಬಿರುಕು ಬಿಟ್ಟಂತೆ ಗೋಚರಿಸಿದ ಭೂಮಿಯಲ್ಲಿ ಈಗ ದೊಡ್ಡದಾಗಿ ಬಿರುಕು ಕಾಣಿಸಿಕೊಂಡಿದೆ. ಕಾಂಕ್ರೀಟ್‌ ರಸ್ತೆ ಕೂಡ ಸೀಳಿ ಹೋಗಿದ್ದು, ಸುಮಾರು 4 ಇಂಚುಗಳಷ್ಟು ಅಗಲದಲ್ಲಿ ಬಿರುಕು ಬಿಟ್ಟಿದೆ. ಸ್ಥಳೀಯ ನಿವಾಸಿ ಬಾಬು ಪೂಜಾರಿ ಎಂಬುವವರ ಮನೆಯ ಅಂಗಳದ ಮೂಲಕ ಬಿರುಕು ಮೂಡಿದ್ದು, ಮನೆಗೆ ಯಾವುದೇ ಹಾನಿಯಾಗಿಲ್ಲ.

2013ರಲ್ಲಿ ಕೂಡ ಇದೇ ಪ್ರದೇಶದ ರಸ್ತೆಯಲ್ಲಿ ಭಾರೀ ಬಿರುಕು ಕಾಣಿಸಿ ಕೊಂಡು, ಕೆಲವು ಮನೆಗಳು ಬಿರುಕು ಬಿಟ್ಟಿದ್ದವು. ಆದರೆ ಈ ಬಾರಿ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿಲ್ಲ. ಸ್ಥಳಕ್ಕೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ರೇೆಷ್ಮಾ  ತಹಶೀಲ್ದಾರ್‌ ಕುಸುಮಾ ಹಾಗೂ ಗ್ರಾಮಾಂತರ ಠಾಣಾ—ಕಾರಿ ಚೇತನ್‌ ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅತಿವೃಷ್ಟಿ ಆತಂಕ ಇನ್ನೂ ಇದೆ 
ಜಿಲ್ಲೆಯಲ್ಲಿ ಗಾಳಿ, ಮಳೆ ಕಡಿಮೆ ಯಾಗಿದ್ದರೂ ಮಡಿಕೇರಿ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ  ಶೀತಗಾಳಿ, ಮಳೆ ಗ್ರಾಮೀಣ ಭಾಗದಲ್ಲಿ ಆತಂಕವನ್ನು ಹೆಚ್ಚಿಸಿದೆ. ಕಳೆದ ಒಂದು ತಿಂಗಳ ಮಹಾಮಳೆಯಿಂದ ಭೂಮಿ ಮೆದುವಾಗಿ ಅಪಾಯದಂಚಿನಲ್ಲಿದೆ. ಪರಿಸ್ಥಿತಿ ಹೀಗಿರುವಾಗಲೇ ನಿರಂತರ ಸಾಧಾರಣ ಮಳೆಯಾಗುತ್ತಿರುವುದರಿಂದ ಭೂಮಿಯಲ್ಲಿ ಬಿರುಕು ಹೆಚ್ಚಾಗುತ್ತಿದೆ. ಗ್ರಾಮೀಣರಲ್ಲಿ ಅವೃಷ್ಟಿಯ ಆತಂಕ ಮುಂದುವರೆದಿದ್ದು, ನುರಿತ ಅಧಿಕಾರಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.  

ಜಿ.ಪಂ.ಅಧ್ಯಕ್ಷರ ಭೇಟಿ,ಪರಿಶೀಲನೆ
ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್‌ ಸ್ಥಳಕ್ಕೆ ಭೇಟಿ ನೀಡಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಿ, ಜಲ ಉಕ್ಕುತ್ತಿರುವುದರಿಂದ ಭೂಮಿ ಬಿರುಕು ಬಿಡುತ್ತಿದೆ ಮತ್ತು ಮನೆಗೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಂದೂರು ಗ್ರಾ.ಪಂ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡ ಭೇಟಿ ನೀಡಿದ್ದು, ಮಂಜುನಾಥ್‌ ಅವರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಮನೆಯನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಮಂಜುನಾಥ್‌ ದು:ಖ ವ್ಯಕ್ತಪಡಿಸಿದ್ದಾರೆ. 

 ಅಂತರ್ಜಲ ಕಾರಣ 
ಅಧಿಕ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ, ಮಳೆ ಕಡಿಮೆಯಾದ ಬಳಿಕ ಯಥಾ ಸ್ಥಿತಿಗೆ ಮರಳಲಿದೆ  ಕಳೆದ ವರ್ಷದ ಮಳೆಗೂ ಹೀಗೆ ಆಗಿತ್ತು 
– ರೇಷ್ಮಾ
ಭೂ ,ಗಣಿ ವಿಜ್ಞಾನ ಇಲಾಖೆ ಅಧಿಕಾರಿ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.