ಕೊಡಗಿನಲ್ಲಿ ಈ ಬಾರಿ ವಾಡಿಕೆಗಿಂತ 912 ಮಿ.ಮೀ. ಹೆಚ್ಚು ಮಳೆ
Team Udayavani, Aug 3, 2018, 6:00 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ವಾಡಿಕೆಯ ಮಳೆಯ ಪ್ರಮಾಣವು 1,669.86 ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಜುಲೈ ಅಂತ್ಯದವರೆಗೆ 2,581.48 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಈ ಬಾರಿ 912 ಮೀ.ಮೀ.ಗೂ ಹೆಚ್ಚು ಮಳೆಯಾಗಿದೆ.
2017ರ ಇದೇ ಅವಧಿಯಲ್ಲಿ 1224.43 ಮಿ.ಮೀ., 2016ರ ಇದೇ ಅವಧಿಯಲ್ಲಿ 1184.31 ಮಿ.ಮೀ. ಮಳೆಯಾಗಿರುವುದನ್ನು ಗಮನಿಸ ಬಹುದಾಗಿದೆ.
ಹಾಗೆಯೇ ತಾಲೂಕುವಾರು ಗಮನಿಸಿದಾಗ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣವು 1992.30 ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಜುಲೈ ಅಂತ್ಯದವರೆಗೆ 3,624.65 ಮಿ.ಮೀ., ಮಳೆಯಾಗಿದ್ದು, ವಾಡಿಕೆಗಿಂತ ಈ ಬಾರಿ 1,632 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 1,683.75 ಮಿ.ಮೀ. ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 1,759.32 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಜನವರಿಯಿಂದ ಜುಲೈ ಅಂತ್ಯದವರೆಗಿನ ವಾಡಿಕೆ ಮಳೆ 1,723.30 ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಜುಲೈ ಅಂತ್ಯದ ವರೆಗೆ 2,074.27 ಮಿ.ಮೀ. ಮಳೆಯಾಗಿದೆ.
351 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 1036.98 ಮಿ.ಮೀ. ಮಳೆಯಾಗಿತ್ತು, ಹಾಗೆಯೇ 2016ರ ಇದೇ ಅವಧಿಯಲ್ಲಿ 881.05 ಮಿ.ಮೀ. ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ.
ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಜನವರಿಯಿಂದ ಜುಲೈ ಅಂತ್ಯದವರೆಗಿನ ವಾಡಿಕೆ ಮಳೆ ಪ್ರಮಾಣವು 1,294 ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಜುಲೈ ಅಂತ್ಯದವರೆಗೆ 2045.52 ಮಿ.ಮೀ.ಮಳೆಯಾಗಿದೆ. 751 ಮಿ.ಮೀ. ಹೆಚ್ಚು ಮಳೆಯಾಗಿದೆ. 2017ರ ಇದೇ ಅವಧಿಯಲ್ಲಿ 952.55 ಮಿ.ಮೀ. ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 912.60 ಮಿ.ಮೀ. ಮಳೆಯಾಗಿತ್ತು. ಒಟ್ಟಾರೆ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ 912 ಮಿ.ಮೀ ಗೂ ಹೆಚ್ಚು ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.