ಕೇಂದ್ರ ಸರಕಾರದ ಉಜ್ವಲ್ ಯೋಜನೆ
Distribution of cooking gas to 46 beneficiaries
Team Udayavani, Jun 21, 2019, 6:34 AM IST
ಗೋಣಿಕೊಪ್ಪಲು: ಪೊನ್ನಪ್ಪಸಂತೆ ಗ್ರಾ.ಪಂ. ವ್ಯಾಪ್ತಿಯ ಕೇಂದ್ರ ಸರಕಾರದ ಉಜ್ವಲ್ ಯೋಜನೆಯ 46 ಫಲಾನುಭವಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.
ಪೊನ್ನಪ್ಪಸಂತೆ ಗ್ರಾ.ಪಂ. ಸಭಾಂಗಣದಲ್ಲಿ ಬಿಳೂರು, ಬೆಸಗೂರು ಮತ್ತು ನಲ್ಲೂರು ಗ್ರಾಮಗಳ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೊಗೆ ಮುಕ್ತ ಭಾರತ ನಿರ್ಮಾಣ ಮಾಡುವುದು ಮೋದಿಯವರ ಕನಸು. ಈಗಾಗಲೇ ಲಕ್ಷಾಂತರ ಮಂದಿ ಗ್ರಾಮೀಣ ಪ್ರದೇಶದವರು ಉಜ್ವಲ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪರಿಸರ ಉಳಿಸುವುದು ಇದರ ಮೂಲ ಉದ್ದೇಶವಾಗಿದೆ. ಎಂದು ಹೇಳಿದರು.
ಅಡುಗೆಯನ್ನು ಕಟ್ಟಿಗೆಗಳಿಂದ ತಯಾರಿಸು ವುದರಿಂದ ಹೊಗೆ ನಿರ್ಮಾಣವಾಗುತ್ತದೆ. ಇದರಿಂದ ತಾಯಂದಿರು ಹಲವು ರೋಗಗಳಿಗೆ ತುತ್ತಾಗುತ್ತಾರೆ. ಇದನ್ನು ತಪ್ಪಿಸಲು ಉಜ್ವಲ್ ಯೋಜನೆಯಡಿಯಲ್ಲಿ ಬಿ.ಪಿ.ಎಲ್. ಪಡಿತರ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಗುತ್ತಿದೆ. ಇದರ ಸದುಪಯೋಗವನ್ನು ಬಳಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಈ ಸಂದರ್ಭ ಪೊನ್ನಪ್ಪಸಂತೆ ಗ್ರಾ.ಪಂ. ಅಧ್ಯಕ್ಷ ಎಂ.ಎಂ. ಗುಲಾÏದ್, ಉಪಾಧ್ಯಕ್ಷ ಎಂ.ಕೆ. ತನುಜಾ, ಆರ್.ಎಂ.ಸಿ. ಅಧ್ಯಕ್ಷ ಆದೇಂಗಡನು ಚಂಗಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.