ದೇವರ ನಾಡಿನಲ್ಲಿ ಕಾಮುಕರ ಅಟ್ಟಹಾಸ; 2 ಲೈಂಗಿಕ ದೌರ್ಜನ್ಯ ಪ್ರಕರಣ ಬಯಲು
Team Udayavani, Mar 8, 2017, 2:38 PM IST
ವಯನಾಡು: ಬಹುಭಾಷಾ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮತ್ತು ಪಾದ್ರಿಯೊಬ್ಬರು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಗಳು ನೆನಪಿನಿಂದ ಮರೆಯಾಗುವ ಮೊದಲೇ ಇನ್ನೆರಡು ಲೈಂಗಿಕ ಕಾಂಡಗಳು ಬಯಲಾಗಿದ್ದು, ದೇವರ ನಾಡು ಎಂಬ ವಿಶೇಷಣ ಹೊತ್ತಿರುವ ರಾಜ್ಯ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಇದೀಗ ಬೆಳಕಿಗೆ ಬಂದಿರುವ ಎರಡೂ ಪ್ರಕರಣಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿರುವವರು ಹದಿಹರೆಯದ ಬಾಲಕಿಯರು.
ವಯನಾಡು ಜಿಲ್ಲೆ ಅನಾಥಾಶ್ರಮವೊಂದರಲ್ಲಿ ಕಲಿಯುತ್ತಿದ್ದ 7 ಬಾಲಕಿಯರು ಲೈಂಗಿಕ ಶೋಷಣೆಗೆ ಗುರಿಯಾಗಿರುವ ಘಟನೆ ರಾಜ್ಯಾದ್ಯಂತ ಆಘಾತದ ಅಲೆಯೆಬ್ಬಿಸಿದೆ. ಇದೇ ವೇಳೆ ಪಾಲಕ್ಕಾಡ್ ಜಿಲ್ಲೆಯಲ್ಲಿ ಇಬ್ಬರು ಹದಿಹರೆಯದ ಸಹೋದರಿಯರು ಲೈಂಗಿಕ ಕಿರುಕುಳದಿಂದ ಬೇಸತ್ತು ಎರಡು ತಿಂಗಳ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನಾಥಾಶ್ರಮದ 7 ಬಾಲಕಿಯರಿಗೆ ಲೈಂಗಿಕ ಕಿರುಕುಳ ಜಿಲ್ಲೆಯ ಕಲ್ಪೇಟ್ಟ ಸಮೀಪ ಮುಟ್ಟಿಲ್‌ನಲ್ಲಿರುವ ಯತೀಂ ಖಾನಾದಲ್ಲಿ (ಅನಾಥಾಶ್ರಮ) ಆಶ್ರಯ ಪಡೆದಿದ್ದ 7 ಹೈಸ್ಕೂಲ್ ವಿದ್ಯಾರ್ಥಿನಿಯರು ಕಳೆದ ಜನವರಿಯಿಂದೀಚೆಗೆ ಲೈಂಗಿಕ ಶೋಷಣೆಗೆ ಗುರಿಯಾಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು 11 ಕೇಸ್‌ಗಳನ್ನು ದಾಖಲಿಸಿಕೊಂಡು
ಆರು ಮಂದಿ ಯನ್ನು ಬಂಧಿಸಿದ್ದಾರೆ. ಶಾಲೆಯಿಂದ ಹಾಸ್ಟೆಲ್‌ಗೆ ಹೋಗುವ ದಾರಿ ಮಧ್ಯೆ ಬಾಲಕಿಯರನ್ನು ಪುಸಲಾಯಿಸಿ ಮತ್ತು
ಬೆದರಿಕೆಯೊಡ್ಡಿ ಅತ್ಯಾಚಾರ ಎಸಗಲಾಗಿದೆ.
ಅಂಗಡಿಯೇ ಕೇಂದ್ರ: ಈ ಪ್ರಕರಣದ ಕೇಂದ್ರ ಒಂದು ಅಂಗಡಿ. ಆರೋಪಿಗಳು ಬಾಲಕಿಯರಿಗೆ ಆಮಿಷಗಳನ್ನೊಡ್ಡಿ ಅಂಗಡಿಗೆ ಕರೆದುಕೊಂಡು ಹೋಗಿ ಅತ್ಯಾ ಚಾರ ಎಸಗುತ್ತಿದ್ದರು. ಅವರಿಗೆ ಮೊಬೈಲ್‌ನಲ್ಲಿ ಬ್ಲೂμಲ್ಮ್ ಗಳನ್ನು ತೋರಿಸುತ್ತಿದ್ದರು.
ಬಾಲಕಿಯರೆಲ್ಲ 14ರಿಂದ 15 ವರ್ಷದೊಳಗಿನವರು. ಓರ್ವ ಬಾಲಕಿ ಅಂಗಡಿಯೊಳಗಿಂದ ಅಳುಕುತ್ತಾ ಹೊರ ಬರುತ್ತಿರುವುದನ್ನು ಹಾಸ್ಟೆಲ್‌ನ ಸೆಕ್ಯುರಿಟಿ ಗಾರ್ಡ್ ನೋಡಿದಾಗ ಈ ಪ್ರಕರಣ ಬೆಳಕಗೆ ಬಂದಿದೆ. ಸೆಕ್ಯೂರಿಟಿ ಗಾರ್ಡ್ ಅಂಗಡಿಯಲ್ಲೇನಾಯಿತು ಎಂದು ಕೇಳಿದಾಗ ಆಕೆ ಎರಡು ತಿಂಗಳಿಂದ ನಡೆಯುತ್ತಿದ್ದ ಕರ್ಮಕಾಂಡವನ್ನು ತಿಳಿಸಿದ್ದಾಳೆ. ಕೂಡಲೇ ಅವರು ಹಾಸ್ಟೆಲ್ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಅಧಿಕಾರಿಗಳು ನೀಡಿದ ದೂರಿನ ಪ್ರಕಾರ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದಾಗ ಸುಮಾರು 3 ತಿಂಗಳಿಂದ ಬಾಲಕಿಯರು ಇಲ್ಲಿ ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದು ಪತ್ತೆಯಾಗಿದೆ.
ಎರಡು ತಿಂಗಳಲ್ಲಿ ಇಬ್ಬರು ಸಹೋದರಿಯರ ಆತ್ಮಹತ್ಯೆ ಪಾಲಕ್ಕಾಡ್ ಜಿಲ್ಲೆಯ ವಲಯರ್‌ನಲ್ಲಿ ಎರಡು ತಿಂಗಳ ಅಂತರದಲ್ಲಿ ಇಬ್ಬರು ಹದಿಹರೆಯದ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಬಂಧಿಕರೊಬ್ಬರ ಲೈಂಗಿಕ ಕಿರುಕುಳ ಕಾರಣ ಅವರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. 11 ವರ್ಷದ ಬಾಲಕಿ ಜನವರಿ 12ರಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅದೇ ಕೋಣೆ ಯಲ್ಲಿ ಅವಳ ಸಹೋದರಿ ಮಾ. 4ರಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಹಿರಿ ಮಗಳ ಸಾವಿಗೆ ಲೈಂಗಿಕ ಕಿರುಕುಳ ಕಾರಣ ಎಂದು ತಾಯಿ ಆರೋಪಿಸಿದ್ದಾರೆ.
ಒಂದು ವರ್ಷದ ಹಿಂದೆ ಮಗಳಿಗೆ ಸಂಬಂಧಿಕರೊಬ್ಬರು ಕಿರುಕುಳ ನೀಡಿದ್ದಾರೆ. ಅನಂತರ ನಾನು ಅವರಿಗೆ ಎಚ್ಚರಿಕೆ ನೀಡಿದ್ದೆ. ಆದರೆ ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ ಎಂದು ತಾಯಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್‌ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.