“ಸವಾಲಿನ,ಆತ್ಮ ವಿಮರ್ಶೆ ಮಾಡಬೇಕಾದ ಚುನಾವಣೆ ಎದುರಿಸಿದ್ದೇವೆ’
ತಾಲೂಕು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾಲೋಚನ ಸಭೆ
Team Udayavani, May 1, 2019, 6:00 AM IST
ಗೋಣಿಕೊಪ್ಪಲು : ಲೋಕಸಭಾ ಚುನಾವಣೆಯ ಅನಂತರದ ವಾತವರಣ ಬಿಜೆಪಿ ಪರವಾಗಿದೆ. ಗುಪ್ತ ಮಾಹಿತಿಗಳ ಪ್ರಕಾರ 20-22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬ ಮಾಹಿತಿ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಮತ್ತೆ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತದೆ ಎಂಬ ಆತ್ಮವಿಶ್ವಾಸ ಇದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು. ಅತ್ಯಂತ ಸವಾಲಿನ ಮತ್ತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಚುನಾವಣೆಯನ್ನು ಎದುರಿಸಿದ್ದೇವೆ. ಮೇ 23 ರಂದು ನಮ್ಮ ಎಲ್ಲ ಶ್ರಮಕ್ಕೆ ಫಲ ದೊರಕಲಿದೆ ಎಂದು ಹೇಳಿದರು. ಕಳೆದ ಐದು ವರ್ಷಗಳ ಆಡಳಿತದಲ್ಲಿನ ಶೇಕಡ 80 ರಷ್ಟು ಅಭಿವೃದ್ಧಿ ಜನತೆಯ ಬಳಿ ತಲುಪಿದೆ. ಮುಂದಿನ ಗ್ರಾ.ಪಂ ಚುನಾವಣೆಗೆ ತಯಾರಿಯಾಗಿ ಹೆಚ್ಚಿನ ಮತದಾರರನ್ನು ಮತದಾರ ಪಟ್ಟಿಗೆ ಸೇರಿಸುವ ಕಾರ್ಯನಡೆಯಬೇಕಾಗಿದೆ. ಕಾರ್ಯಕರ್ತರು ಹೆಚ್ಚಿನ ಮತದಾರರನ್ನು ಸೇರಿಸಲು ಶ್ರಮವಹಿಸಬೇಕು ಎಂದು ಹೇಳಿದರು. ಯಾವುದೇ ವೈಯಕ್ತಿಕ ದ್ವೇಷಗಳನ್ನು ಸಾಧಿಸದೇ ಪಕ್ಷ ಎಂದು ಬಂದಾಗ ಒಗ್ಗಟ್ಟನ್ನು ಪ್ರದರ್ಶಿಸಿ ದೇಶದ ಬಗ್ಗೆ ಕಾಳಜಿ ವಹಿಸಿಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುನಿಲ್ ಸುಬ್ರಮಣಿ ಮಾತನಾಡಿ ಕಳಂಕ ವಿಲ್ಲದ ಆಡಳಿತ ನಡೆಸಿದ ಮೋದಿ ಸರಕಾ ರದ ಬಗ್ಗೆ ಜನ ವಿಶ್ವಾಸ ಇಟ್ಟಿದ್ದಾರೆ. ಹಿಗಾಗಿ ಮತ್ತೆ ಮೋದಿ ಸರಕಾರ ಆಡಳಿತಕ್ಕೆ ಬರಲಿದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಂಡೆಪಂಡ ಸುಜಾ ಕುಶಾಲಪ್ಪ , ರಾಜ್ಯ ಬಿಜೆಪಿ ಕಾರ್ಯದರ್ಶಿ ರೀನಾ ಪ್ರಕಾಶ್, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷ ಯಮುನಾ ಚಂಗಪ್ಪ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ತಾಲೂಕು ಬಿಜೆಪಿ ಮಹಿಳಾ ಮೊರ್ಚ ಅಧ್ಯಕ್ಷ ಚೇಂದಂಡ ಸುಮಿ ಸುಬ್ಬಯ್ಯ, ಯುವ ಮೋರ್ಚ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ತಾ.ಪಂ ಅಧ್ಯಕ್ಷೆ ಬೊಳ್ಳಚಂಡ ಸ್ಮಿತ ಪ್ರಕಾಶ್, ಸದಸ್ಯರುಗಳಾದ ಜಯ ಪೂವಯ್ಯ, ಪ್ರಕಾಶ್, ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷೆ ಸೆಲ್ವಿ, ಆರ್.ಎಂ.ಸಿ ಅಧ್ಯಕ್ಷ ವಿನು ಚಂಗಪ್ಪ ಹಿರಿಯರಾದ ಕಾಳಪಂಡ ಸುದೀರ್, ಕಾಫಿಬೋರ್ಡ್ ನಿರ್ದೇಶಕ ಬೊಟ್ಟಂಗಡ ರಾಜು, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಲಾಲಬೀಮಯ್ಯ, ಸುವಿನ್ ಗಣಪತಿ ಮತ್ತು ಜಿ,ಪಂ ಸದಸ್ಯರುಗಳಾದ ಅಚ್ಚಪಂಡ ಮಹೇಶ್, ಭವ್ಯ, ಶಶಿಸುಬ್ರಮಣಿ,ಹಿಂದುಳಿದ ವರ್ಗದ ಅಧ್ಯಕ್ಷ ಚಂದ್ರಶೇಖರ್, ತಾ.ಪಂ ಮಾಜಿ ಅಧ್ಯಕ್ಷೆ ರಾಣಿ ನಾರಯಣ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಅಲೆ ಇದೆ
ತಾಲೂಕು ಬಿಜೆಪಿ ಮಂಡಲ ಪ್ರಧಾನ ಅಧ್ಯಕ್ಷ ಕುಂಞಂಗಡ ಅರುಣ್ ಬೀಮಯ್ಯ ಮಾತನಾಡಿ ಚುನಾವಣೆಯ ನಂತರ ದೇಶದ ವಾತವರಣವೆ ಬದಲಾಗಿದೆ. ದೇಶದಲ್ಲಿ ಬಿಜೆಪಿ ಅಲೆ ಇದೆ. ಬಿಜೆಪಿ ಪರವಾಗಿ ಈ ಬಾರಿ ವಿದೇಶಿಗಳಲ್ಲಿ ನೆಲಸಿರುವ ಭಾರತಿಯರು ಸಹ ಮತಯಾಚಿಸಲು ದೇಶಕ್ಕೆ ಮರಳಿದ್ದಾರೆ. 545 ಕ್ಷೇತ್ರಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ ಎಂಬ ಭರವಸೆ ಇದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Madikeri: ಅರೆಸುಟ್ಟ ಮೃತದೇಹದ ಪ್ರಕರಣ; ಪೊಲೀಸರಿಂದ ತಪ್ಪಿಸಿಕೊಂಡಿದ್ದ ಅಂಕೂರ್ ರಾಣ ಬಂಧನ
Madikeri: ಚೆಂಬೆಬೆಳ್ಳೂರು; ಕಾಡಾನೆ ಹಾವಳಿಯಿಂದ ಕೃಷಿಗೆ ಹಾನಿ
Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!
Madikeri: ತಲಕಾವೇರಿಯಲ್ಲಿ ಸ್ವಾಮೀಜಿಗಳಿಂದ ವಿಶೇಷ ಪೂಜೆ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.