ಕರಡಿಗೋಡು: ಕೊನೆಗೂ ಒಂದು ಪುಂಡಾನೆ ಸೆರೆ
Team Udayavani, Dec 29, 2022, 1:49 AM IST
ಮಡಿಕೇರಿ: ವ್ಯಾಪಕ ಕೃಷಿ ಹಾನಿಗೆ ಕಾರಣವಾಗಿ ಗ್ರಾಮೀಣರ ಬದುಕನ್ನು ಹದಗೆಡಿಸಿದ್ದ ಪುಂಡಾನೆಯೊಂದನ್ನು ಸಮೀಪದ ಕರಡಿಗೋಡಿನ ಭುವನಹಳ್ಳಿ ಕಾಫಿ ತೋಟದಲ್ಲಿ ಅರಣ್ಯ ಇಲಾಖಾ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಎರಡು ದಿನಗಳ ಕಾಲ ಅರಣ್ಯ ಇಲಾಖೆಯ ತಂಡ ನಡೆಸಿದ ವ್ಯಾಪಕ ಕಾರ್ಯಾಚರಣೆ ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಪುಂಡಾನೆಯ ಸೆರೆಯೊಂದಿಗೆ ಮುಕ್ತಾಯವಾಗಿದೆ. ಸೆರೆಯಾಗಿರುವ ಆನೆಯ ವಯಸ್ಸು ಸುಮಾರು 22 ವರ್ಷ ಎಂದು ಅಂದಾಜಿಸಲಾಗಿದೆ.
ಕರಡಿಗೋಡು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಇರುವುದನ್ನು ಅರಣ್ಯ ಇಲಾಖಾ ತಂಡ ಗುರುತಿಸಿ, ಎರಡು ದಿನಗಳ ಹಿಂದೆಯೇ ಅವುಗಳ ಜಾಡು ಹಿಡಿದಿತ್ತು. ಮಂಗಳವಾರ ಸೆರೆಯಾಯಿತು ಎನ್ನುವಷ್ಟರಲ್ಲಿ ಕಾಡಾನೆಗಳ ಹಿಂಡಿನ ಕೆಲ ಆನೆಗಳು ಅರಣ್ಯ ಸಿಬಂದಿ ಮೇಲೆ ತಿರುಗಿ ಬಿದ್ದು, ಯೋಜನೆ ವಿಫಲವಾಗಿತ್ತು.
ಬುಧವಾರ ಭುವನಳ್ಳಿ ಕಾಫಿ ತೋಟದಲ್ಲಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಕರಡಿಗೋಡು ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಗುರುತಿಸಿ ಅದಕ್ಕೆ ಶೂಟರ್ ಅಕ್ರಂ ಅವರು ಅರಿವಳಿಕೆಯ ಗುಂಡನ್ನು ಹೊಡೆದರು. ಅರಿವಳಿಕೆಯ ಪ್ರಭಾವಕ್ಕೆ ಸಿಲುಕಿದ ಪುಂಡಾನೆಯನ್ನು ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದ ಸಾಕಾನೆಗಳ ಸಹಕಾರದಿಂದ ಬಂಧಿಸಲಾಯಿತು. ಹಗ್ಗಗಳಿಂದ ಕಟ್ಟಿ, ಕ್ರೇನ್ ಮೂಲಕ ಲಾರಿಗೇರಿಸಿ, ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಯಿತು.
ಗ್ರಾಮಸ್ಥರ ನಿಟ್ಟುಸಿರು
ಕಳೆದ ಹಲವು ಸಮಯಗಳಿಂದ ಕರಡಿಗೋಡು ಸುತ್ತಮುತ್ತ ಪುಂಡಾನೆಗಳ ಹಾವಳಿಯಿಂದ ವ್ಯಾಪಕ ಕೃಷಿ ಹಾನಿಯಾಗಿದ್ದು, ಬೆಳೆಗಾರರು, ಕೃಷಿಕರು ತೋಟಗಳಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಪುಂಡಾನೆಯ ಸೆರೆಯಿಂದ ಗ್ರಾಮಸ್ಥರು ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
Pro Kabaddi: ಹರಿಯಾಣ- ಪಾಟ್ನಾ ಫೈನಲ್ ಹಣಾಹಣಿ
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.