Wild Elephant Attack: ಮೋರಿಯ ಪೈಪ್ ನೊಳಗೆ ನುಸುಳಿ ಜೀವ ಉಳಿಸಿಕೊಂಡ ವ್ಯಕ್ತಿ
Team Udayavani, Aug 3, 2024, 12:02 PM IST
ಮಡಿಕೇರಿ: ಒಂಟಿ ಸಲಗವೊಂದು ದಾಳಿ ಮಾಡಿದ ಸಂದರ್ಭ ಸಮಯಪ್ರಜ್ಞೆಯಿಂದ ವಾಟರ್ ಮ್ಯಾನ್ ವೊಬ್ಬರು ಜೀವ ಉಳಿಸಿಕೊಂಡ ಘಟನೆ ಸುಂಟಿಕೊಪ್ಪ ಸಮೀಪ ಕೊಡಗರಹಳ್ಳಿಯ 7ನೇ ಹೊಸಕೋಟೆ ಅಂದಗೋವೆ ಗ್ರಾಮದಲ್ಲಿ ಆ.3ರ ಶನಿವಾರ ನಡೆದಿದೆ.
ಕೊಡಗರಹಳ್ಳಿ ಗ್ರಾಮಸ್ಥರನ್ನು ನಿತ್ಯ ಕಾಡುತ್ತಿರುವ ಕಾಡಾನೆಯೊಂದು ಇಂದು (ಆ.3ರ ಶನಿವಾರ) ಕೂಡ ಬೆಳ್ಳಂಬೆಳಗ್ಗೆ ಅಂದಗೋವೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿದೆ.
ಕೊಡಗರಹಳ್ಳಿ ಗ್ರಾ.ಪಂ.ನ ವಾಟರ್ ಮ್ಯಾನ್ ಹುಸೇನ್ ಎಂಬವರು ಕರ್ತವ್ಯಕ್ಕೆಂದು ತೆರಳುತ್ತಿದ್ದಾಗ ಕಾಡಾನೆ ದಿಢೀರ್ ದಾಳಿ ಮಾಡಿದೆ. ಸೊಂಡಿಲಿನಿಂದ ತಳ್ಳಿದ ಪರಿಣಾಮ ಮೋರಿಯ ಪೈಪ್ ವೊಂದರ ಬಳಿ ಹುಸೇನ್ ಬಿದ್ದಿದ್ದು, ಆನೆ ಮತ್ತೆ ದಾಳಿ ಮಾಡಲು ಧಾವಿಸಿದಾಗ ಸಮಯ ಪ್ರಜ್ಞೆ ಮೆರೆದ ಹುಸೇನ್, ಮೋರಿಯ ಪೈಪ್ ನೊಳಗೆ ನುಸುಳಿಕೊಂಡಿದ್ದಾರೆ.
ಆದರೂ ಬಿಡದ ಕಾಡಾನೆ ಪೈನ್ ಮೇಲೆ ದಾಳಿ ಮಾಡಿ ಹಾನಿ ಮಾಡಿದೆ. ಅದೃಷ್ಟವಶಾತ್ ಹುಸೇನ್ ಅವರು ಜೀವ ಉಳಿಸಿಕೊಂಡಿದ್ದಾರೆ. ಕಾಡಾನೆ ತೆರಳಿದ ನಂತರ ಗ್ರಾಮಸ್ಥರು ಗಾಯಾಳು ಹುಸೇನ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಸುಂಟಿಕೊಪ್ಪ, ಕೊಡಗರಹಳ್ಳಿ, 7ನೇ ಹೊಸಕೋಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಈ ಒಂಟಿ ಸಲಗ ನಿತ್ಯ ಸಂಚರಿಸಿ ಆತಂಕ ಮೂಡಿಸುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.