ಉತ್ತಮ ವ್ಯಕ್ತಿತ್ವದೊಂದಿಗೆ ಅಭಿವೃದ್ಧಿಪರ ಚಿಂತನೆ ಹರಿಸಿ: ಗಣಪತಿ ಭಟ್
Team Udayavani, Mar 31, 2017, 2:17 PM IST
ಮಡಿಕೇರಿ: ವಿದ್ಯಾರ್ಥಿಗಳು ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಳ್ಳುವ ಮೂಲಕ ಅಭಿವೃದ್ಧಿಪರ ಚಿಂತನೆ ಹರಿಸಬೇಕು. ಆ ಮೂಲಕ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಬೇಕು ಎಂದು ಆಲೂರು ಸಿದ್ದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ಜಿ.ಟಿ.ಗಣಪತಿ ಭಟ್ ಕರೆ ನೀಡಿದ್ದಾರೆ.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕೊತ್ಸವ ಸಮಾರಂಭ ಮತ್ತು ದಶ ಸಂಗಮ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಣವೆಂಬುವುದು ದೇವಾಲಯದಂತೆ, ವ್ಯಕ್ತಿತ್ವ ದೊಡ್ಡದಿದ್ದಾಗ ಕಲ್ಲಿನಲ್ಲೂ ದೇವರನ್ನು ಕಾಣಬಹುದು. ಶಿಕ್ಷಣದಿಂದ ವ್ಯಕ್ತಿತ್ವ ಅಭಿವೃದ್ದಿ ಸಾಧ್ಯ. ದೋಷವೆಂಬುವುದು ನಮ್ಮ ಅಂತರಾಳದಲ್ಲಿಯೇ ಇರುತ್ತದೆ. ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಾಗುತ್ತದೆ. ಜೀವನದಲ್ಲಿ ಬದ್ಧತೆ, ನೈತಿಕತೆ, ಶ್ರಮ, ತಾಳ್ಮೆ ಜೊತೆಗೆ ಸಾಮಾನ್ಯ ಜ್ಞಾನವಿದ್ದಾಗ ಎಂತಹ ಕಠಿನ ಪರಿಸ್ಥಿತಿಯಲ್ಲೂ ಜಯ ಗಳಿಸಬಹುದು ಎಂದರು. ಬದುಕಿನ ಯಾವುದೇ ಪರಿಸ್ಥಿತಿಯಲ್ಲಿ ಎಲ್ಲಿಯೂ ಎದೆಗುಂದದೇ ಮುಂದೆ ಸಾಗಬೇಕು. ಯಶಸ್ಸಿಗಾಗಿ ಸದಾ ಪ್ರಯತ್ನಪಡಬೇಕು ಎಂದು ಜಿ.ಟಿ.ಗಣಪತಿ ಭಟ್ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಚಿತ್ರಾ ವೈ, ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ದಯಾನಂದ ಇತರರು ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಂತಿಮ ಬಿ.ಬಿ.ಎಂ. ವಿದ್ಯಾರ್ಥಿನಿ ಶ್ವೇತಾ ಸಹಕರಿಸಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕುಸುಮಾ ಸ್ವಾಗತಿಸಿದರು. ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಶಿಧರ್ ಅವರು ವರದಿ ವಾಚನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.